8th Pay Commission: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್.! 8ನೇ ವೇತನ ಆಯೋಗ ಜಾರಿ.!

8th Pay Commission

ದೇಶದಲ್ಲಿ ಸುಮಾರು ಒಂದು ಕೋಟಿಗಿಂತಲೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು (Central Government Employees) ಇದ್ದಾರೆ. ಈ ರೀತಿ ಕೇಂದ್ರ ಸರ್ಕಾರದ ಹುದ್ದೆ ಪಡೆಯುವುದು ಗೌರವ ಹಾಗೂ ಭದ್ರತೆಯ ವಿಷಯವಾಗಿದೆ. ಯಾಕೆಂದರೆ ದೇಶ ಸೇವೆಯ ಸಮಾಧಾನದೊಂದಿಗೆ ಉತ್ತಮ ವೇತನ ಸೌಕರ್ಯದ ಜೊತೆಗೆ ಹಲವಾರು ಸವಲತ್ತುಗಳು ಕೂಡ ಕೇಂದ್ರ ಸರ್ಕಾರಿ ನೌಕರರಿಗೆ ಸಿಗುತ್ತದೆ.

WhatsApp Group Join Now
Telegram Group Join Now

ಇಂತಹ ನೌಕರರಿಗೆಲ್ಲಾ ಈಗ ತುಟ್ಟಿಭತ್ಯೆ ಹೆಚ್ಚಳವಾಗುವುದರ ಕುರಿತು ಬಿಗ್ ಅಪ್ಡೇಟ್ ಇದೆ. ಎಲ್ಲರ ನಿರೀಕ್ಷೆಯಂತೆ ಏಳನೇ ವೇತನ ಆಯೋಗದ (7th pay Commission) ಪ್ರಕಾರವಾಗಿ 2024ನೇ ಸಾಲಿನ ತುಟ್ಟಿಭತ್ಯೆ (DA Hike) ಹೆಚ್ಚಾದ ಕುರಿತಾಗಿ ಸರ್ಕಾರ ಮಾಹಿತಿ ಹಂಚಿಕೊಂಡಿದೆ. ಅಲ್ಲದೆ ಮುಂದಿನ ತಿಂಗಳಿನಲ್ಲಿಯೇ 2024-25ನೇ ಸಾಲಿನ ಬಜೆಟ್ ಕೂಡ ಘೋಷಣೆ ಆಗುತ್ತಿರುವುದರಿಂದ ಇದರ ಮುಂದುವರಿದ ಭಾಗವಾಗಿ ಇನ್ನಷ್ಟು ನಿರೀಕ್ಷೆಗಳು ಹೆಚ್ಚಾಗಿದೆ ಇದರ ಕುರಿತು ಅಪ್ಡೇಟ್ ಹೀಗಿದೆ ನೋಡಿ.

ಕಾಲಕಾಲಕ್ಕೆ ಹೆಚ್ಚಾಗುವ ಬೆಲೆ ಏರಿಕೆಗಳು, ಹಣದುಬ್ಬರದ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಿ ನೌಕರರ ಆರ್ಥಿಕ ಸಮತೋಲನ ಕಾಪಾಡಲು ತುಟ್ಟಿಭತ್ಯೆ ಏರಿಕೆ ಕ್ರಮ ಕೈಗೊಳ್ಳಲಾಗುತ್ತದೆ. ಅಂತೆಯೇ ಪ್ರತಿಬಾರಿಯೂ ನೌಕರರಿಗೆ ಈ ಬಗ್ಗೆ ಸಾಕಷ್ಟು ನಿರೀಕ್ಷೆ ಇರುತ್ತದೆ ಏಕೆಂದರೆ ಭತ್ಯೆಗಳು ಹೆಚ್ಚಾದಾಗ, ಮೂಲ ವೇತನದಲ್ಲಿ ಕೂಡ ಕೊಂಚ ಬದಲಾವಣೆ ಆಗುವುದು.

ಪ್ರತಿ ಆರು ತಿಂಗಳಿಗೆ ಒಮ್ಮೆಯಂತೆ ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆ, ತುಟ್ಟಿ ಪರಿಹಾರ ಹೆಚ್ಚಳ ಘೋಷಣೆ ಆಗುತ್ತದೆ. ಈ ಬಾರಿಯ ಏರಿಕೆಯು ನೌಕರರ ಮಾಸಿಕ ಮೂಲ ವೇತನದಲ್ಲಿ ಗಮನಾರ್ಹ ಏರಿಕೆಗೆ ಕಾರಣವಾಗಲಿದೆ. ಪಿಂಚಣಿ ಪಡೆಯುವ ಪಿಂಚಣಿದಾರರ ಪಿಂಚಣಿಯಲ್ಲೂ ಮಹತ್ವದ ಬದಲಾವಣೆ ತರಲಿದೆ.

AICPI ಸೂಚ್ಯಂಕದ ಆಧಾರದ ಮೇಲೆ ಪ್ರತಿ ವರ್ಷ ಜನವರಿ ಮತ್ತು ಜುಲೈ ಗೆ ನೌಕರರ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರ ಏರಿಕೆ ಮಾಡಲಾಗುತ್ತದೆ. ಜನವರಿ ಹೆಚ್ಚಳವನ್ನು ಮಾರ್ಚ್‌ ತಿಂಗಳಲ್ಲಿ, ಜುಲೈ ಏರಿಕೆಯನ್ನು ಸೆಪ್ಟಂಬರ್‌ನಲ್ಲಿ ಘೋಷಣೆ ಮಾಡಲಾಗುತ್ತದೆ. 2024ರ ಜನವರಿಯಲ್ಲಿ ಶೇ.4%ರಷ್ಟು DA ಏರಿಕೆ ಮಾಡಿದ್ದರಿಂದ ತುಟ್ಟಿಭತ್ಯೆ ಒಟ್ಟು ಪ್ರಮಾಣ ಶೇ.50% ತಲುಪಿತ್ತು. ನಂತರ ಜುಲೈ ಶೇ.3% ಏರಿಕೆಯಾಗಿ ಶೇ.53ಕ್ಕೆ ತಲುಪಿದೆ.

ಆ ಪ್ರಕಾರವಾಗಿ ಈಗ ಜನವರಿ 2025ರ ಪರಿಷ್ಕರಣೆ ಬಗ್ಗೆ ಎದುರು ನೋಡಲಾಗುತ್ತಿದೆ. ಸದ್ಯಕ್ಕಿರುವ ಮಾಹಿತಿಯ ಪ್ರಕಾರವಾಗಿ ಕೇಂದ್ರ ಸರ್ಕಾರವು ಹೊಸ ವರ್ಷಕ್ಕೆ ಸರ್ಕಾರಿ ನೌಕರಿಗೆ ಗುಡ್ ನ್ಯೂಸ್ ನೀಡಲಿದೆ. ತುಟ್ಟಿಭತ್ಯೆ ಈ ಭಾರಿಯು 3%-4%ರಷ್ಟು ಏರಿಕೆ ಮಾಡುವ ಸಂಭವವಿದೆ. ಹೀಗಾದಲ್ಲಿ, ತುಟ್ಟಿಭತ್ಯೆ ಒಟ್ಟು ಪ್ರಮಾಣವು ಶೇ.53% ರಿಂದ 56% ಇಲ್ಲವೇ 57%ಕ್ಕೆ ಹೆಚ್ಚಾಗಲಿದೆ ಈ ಮೂಲಕ ನೌಕರರಿಗೆ ವಿವಿಧ ಭತ್ಯೆಗಳು ಏರಿಕೆ ಆಗಲಿವೆ.

ಹಾಗೆಯೇ 7ನೇ ವೇತನ ಆಯೋಗದ ಅವಧಿ ಇನ್ನೂ ಒಂದು ವರ್ಷ ಮಾತ್ರ ಇರುವುದರಿಂದ ಮತ್ತು ಮುಂದಿನ ತಿಂಗಳಿನಲ್ಲಿಯೇ ಮುಂದಿನ ವರ್ಷದ ಬಜೆಟ್ ಮಂಡನೆ ಆಗುವುದರಿಂದ ಆ ಸಮಯದಲ್ಲಿ ಎಂಟನೇ ವೇತನ ಆಯೋಗದ(8th pay commission) ಕುರಿತು, ಕೇಂದ್ರ ಸರ್ಕಾರ ನೌಕರರ ಮೂಲ ವೇತನ, ತುಟ್ಟಿಭತ್ಯೆ, ತುಟ್ಟಿ ಪರಿಹಾರಗಳ ಮೇಲೆ ಬಗ್ಗೆ ಇನ್ನಷ್ಟು ಅಪ್ಡೇಟ್ ಸಿಗಬಹುದು ಎಂದು46 ಲಕ್ಷ ಕೇಂದ್ರ ನೌಕರರು ಮತ್ತು 69 ಲಕ್ಷ ಪಿಂಚಣಿದಾರರು ಕಾಯುತ್ತಿದ್ದಾರೆ

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment