Railway Recruitment ರೈಲ್ವೆ ಇಲಾಖೆ 4,232 ಹುದ್ದೆಗಳ ನೇಮಕಾತಿ, 10ನೇ ತರಗತಿ ಪಾಸ್ ಆಗಿದ್ದರೆ ಸಾಕು ಅರ್ಜಿ ಸಲ್ಲಿಸಬಹುದ.!

Railway Recruitment

ಭಾರತೀಯ ರೈಲ್ವೆ ಇಲಾಖೆಗೆ ತನ್ನದೇ ಆದ ಒಂದು ಇತಿಹಾಸವಿದೆ. ಸ್ವತಂತ್ರ ಪೂರ್ವದಿಂದ ಪ್ರಸ್ತುತ ಸಮಯದವರೆಗೂ ದೇಶದಾದ್ಯಂತ ಸಂಪರ್ಕ ಸಾಧನವಾಗಿ ಮಹತ್ವದ ಪಾತ್ರ ನಿರ್ವಹಿಸಿರುವ ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ರೈಲ್ವೆ ಇಲಾಖೆಯು ಇದರೊಂದಿಗೆ ದೇಶದ ಯುವ ಜನತೆಗೆ ಅಪಾರ ಉದ್ಯೋಗವಕಾಶವನ್ನು ಕೂಡ ಸೃಷ್ಟಿಸಿಕೊಡುತ್ತಿದೆ.

WhatsApp Group Join Now
Telegram Group Join Now

ಪ್ರತಿ ವರ್ಷವು ರೈಲ್ವೆ ಇಲಾಖೆಯಲ್ಲಿ ಸಾವಿರಾರು ಹುದ್ದೆಗಳ ನೇಮಕಾತಿ ನಡೆಯುತ್ತದೆ. ಅಂತೆಯೇ ಈ ಬಾರಿಯೂ ಕೂಡ ಸೌತ್ ಸೆಂಟ್ರಲ್ ರೈಲ್ವೆ ವಿಭಾಗದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. 10ನೇ ತರಗತಿ ವಿಧ್ಯಾಭ್ಯಾಸ ಮುಗಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವುದು ಹೇಗೆ? ಎಂದು ತಿಳಿದುಕೊಳ್ಳಲು ಹಾಗೂ ಈ ಹುದ್ದೆ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಂಕಣವನ್ನು ಕೊನೆಯವರೆಗೂ ಓದಿ.

ನೇಮಕಾತಿ ಸಂಸ್ಥೆ:- ರೈಲ್ವೆ ನೇಮಕಾತಿ ಮಂಡಳಿ (RRB)
ಉದ್ಯೋಗ ಸಂಸ್ಥೆ:- ಸೌತ್ ಸೆಂಟ್ರಲ್ ರೈಲ್ವೆ ಡಿಪಾರ್ಟ್ಮೆಂಟ್
ಹೆಸರು:- ಅಪ್ರೆಂಟಿಸ್
ಒಟ್ಟು ಹುದ್ದೆಗಳ ಸಂಖ್ಯೆ:- 4,232 ಹುದ್ದೆಗಳು

ಹುದ್ದೆಗಳ ವಿವರ:-

* ಎಸಿ ಮೆಕ್ಯಾನಿಕ್ – 143
* ಏರ್ ಕಂಡೀಷನಿಂಗ್ – 32
* ಕಾರ್ಪೆಂಟರ್ – 42
* ಡಿಸೇಲ್ ಮೆಕ್ಯಾನಿಕ್ – 142
* ಇಲೆಕ್ಟ್ರಾನಿಕ್ ಮೆಕ್ಯಾನಿಕ್ – 85
* ಇಂಡಸ್ಟ್ರಿಯಲ್ ಇಲೆಕ್ಟ್ರಾನಿಕ್ಸ್ – 10
* ಇಲೆಕ್ಟ್ರಿಷಿಯನ್ – 1053
* ಇಲೆಕ್ಟ್ರಿಕಲ್ (S&T) – 10
* ಪವರ್ ಮೆಂಟೆನನ್ಸ್ – 34
* ಟ್ರೇನ್ ಲೈಟಿಂಗ್ (ಇಲೆಕ್ಟ್ರಿಷಿಯನ್) – 33
* ಫಿಟ್ಟರ್ – 1742
* ಮೋಟಾರ್ ಮೆಕ್ಯಾನಿಕ್ ವೆಹಿಕಲ್ – 8
* ಮಶಿನಿಸ್ಟ್ – 100
* ಮೆಕ್ಯಾನಿಕ್ ಮೋಟಾರ್ ಟೂಲ್ ಮೆಂಟೆನನ್ಸ್- 10
* ಪೇಂಟರ್ – 74
* ವೆಲ್ಡರ್ – 713

ಉದ್ಯೋಗ ಸ್ಥಳ:-
ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳು ಭಾರತದ ಯಾವುದೇ ರೈಲ್ವೆ ವಿಭಾಗದಲ್ಲಿ ಕಾರ್ಯನಿರ್ವಹಿಸಲು ತಯಾರಿರಬೇಕು.

ವೇತನ ಶ್ರೇಣಿ:-
ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಉತ್ತಮ ಮೊತ್ತದ ಸ್ಟೈಫಂಡ್ ಇರುತ್ತದೆ.

ಶೈಕ್ಷಣಿಕ ವಿದ್ಯಾರ್ಹತೆ:-

* ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕಡ್ಡಾಯವಾಗಿ 10ನೇ ತರಗತಿಯನ್ನು ಶೇ. 50% ಶ್ರೇಣಿಯಲ್ಲಿ ಉತ್ತೀರ್ಣರಾಗಿರಬೇಕು
* ಹಾಗೂ ಈ ಮೇಲೆ ತಿಳಿಸಿದ ಸಂಬಂಧಪಟ್ಟ ಕ್ಷೇತ್ರದಲ್ಲಿ ಐಟಿಐ (ITI) ತರಬೇತಿ ಪಡೆದಿರಬೇಕು.

ವಯೋಮಿತಿ:-

* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಸರಿಯಾಗಿ ಕನಿಷ್ಠ 15 ವರ್ಷ ತುಂಬಿರಬೇಕು
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಸರಿಯಾಗಿ ಗರಿಷ್ಟ 24 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:-

* SC/ST ಅಭ್ಯರ್ಥಿಗಳಿಗೆ – 05 ವರ್ಷ
* OBC ಅಭ್ಯರ್ಥಿಗಳಿಗೆ – 03 ವರ್ಷ
* ಅಂಗವಿಕಲ ಅಭ್ಯರ್ಥಿಗಳಿಗೆ – 10 ವರ್ಷ

ಅರ್ಜಿ ಸಲ್ಲಿಸುವ ವಿಧಾನ:-

* ರೈಲ್ವೆ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಸಂಬಂಧಪಟ್ಟ ವಿಭಾಗಕ್ಕೆ ತೆರಳಿ, ಅರ್ಜಿ ಸಲ್ಲಿಸುವ ಲಿಂಕ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಲು ಮುಂದುವರಿಯಬಹುದು
* ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪ್ರತಿ ಹಾಗೂ ಅರ್ಜಿ ಶುಲ್ಕ ಪಾವತಿ ಮಾಡಿರುವ ರಸೀದಿ ಪ್ರಿಂಟ್ ಪಡೆದುಕೊಳ್ಳಿ.

ಅರ್ಜಿ ಶುಲ್ಕ:

* SC/ST, ಮಹಿಳಾ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ
* ಉಳಿದ ಅಭ್ಯರ್ಥಿಗಳಿಗೆ ರೂ.100

ಆಯ್ಕೆ ವಿಧಾನ:-

* ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಮೆರಿಟ್ ಲಿಸ್ಟ್ ತಯಾರಿಸಿ ಅದರ ಆಧಾರದ ಮೇಲೆ ನೇರ ಸಂದರ್ಶನ ನಡೆಸುವ ಮೂಲಕ ಅರ್ಹರನ್ನು ಆಯ್ದುಕೊಳ್ಳಲಾಗುತ್ತದೆ.

ಪ್ರಮುಖ ದಿನಾಂಕಗಳು:-

* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 28.12.2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 29.01.2025.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment