Railway Recruitment
ಸರ್ಕಾರಿ ಹುದ್ದೆ ನಿರೀಕ್ಷೆಯಲ್ಲಿರುವ ದೇಶದ ಯುವ ಜನತೆಗೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ರೈಲ್ವೆ ನೇಮಕಾತಿ ಮಂಡಳಿಯಿಂದ ಸಿಹಿ ಸುದ್ದಿ ಇದೆ. ರೈಲ್ವೆ ನೇಮಕಾತಿ ಮಂಡಳಿಯು (RRB) ಪ್ರತಿ ವರ್ಷವೂ ಇಲಾಖೆಯಲ್ಲಿ ತೆರವಾಗುವ ಲಕ್ಷಾಂತರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತದೆ.
ಅಂತೆಯೇ 2024-25ನೇ ಸಾಲಿನಲ್ಲಿ ಭರ್ತಿಯಾಗುವ, ಬಹು ನಿರೀಕ್ಷಿತ ಗ್ರೂಪ್ ಡಿ ಹುದ್ದೆಗಳ ಬಗ್ಗೆ ಘೋಷಿಸಿದೆ. ದೇಶದ ಆಸಕ್ತ ಯುವ ಜನತೆ ಇದರ ಪ್ರಯೋಜನ ಪಡೆಯಬಹುದು. ಎಷ್ಟು ಹುದ್ದೆಗಳು ಖಾಲಿ ಇವೆ? ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಅರ್ಹತೆಗಳೇನು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಪ್ರಮುಖ ದಿನಾಂಕಗಳು ಇತ್ಯಾದಿ ಸಂಪೂರ್ಣ ಮಾಹಿತಿ ಹೀಗಿದೆ ನೋಡಿ.
ನೇಮಕಾತಿ ಸಂಸ್ಥೆ:- ರೈಲ್ವೆ ನೇಮಕಾತಿ ಮಂಡಳಿ (RRB)
ಉದ್ಯೋಗ ಸಂಸ್ಥೆ:- ರೈಲ್ವೆ ಇಲಾಖೆ
ಹುದ್ದೆ ಹೆಸರು:- ವಿವಿಧ ಹುದ್ದೆಗಳು
ಹುದ್ದೆಗಳ ವಿವರ:-
- ಪಾಯಿಂಟ್ಸ್ ಮನ್ ಬಿ – 5058
- ಸಹಾಯಕ (ಟ್ರಾಕ್ ಯಂತ್ರ) – 799
- ಸಹಾಯಕ (ಸೇತುವೆ) – 301
- ಟ್ರ್ಯಾಕ್ ನಿರ್ವಾಹಕ ಜೂನಿಯರ್ – 13,187
- ಸಹಾಯಕ ಪಿ ವೇ – 247
- ಸಹಾಯಕ (C&W) – 2587
- ಸಹಾಯಕ ಟ್ರೇಡ್ – 1381
- ಸಹಾಯಕ (S&T) – 2012
- ಸಹಾಯಕ ಲೋಕೋ ಶೆಡ್ (ಡೀಸೆಲ್)- 420
- ಸಹಾಯಕ ಲೋಕೋ ಶೆಡ್ (ಎಲೆಕ್ಟ್ರಿಕಲ್)- 950
- ಸಹಾಯಕ ಕಾರ್ಯಾಚರಣೆಗಳು (ವಿದ್ಯುತ್) – 744
- ಸಹಾಯಕ TL & ಅಕೌಂಟ್ – 1041
- ಸಹಾಯಕ TL & AC (ಕಾಕಾರ್ಯಾಗಾರ- 624
- ಸಹಾಯಕ (ಕಾರ್ಯಾಗಾರ) (ಮೆಚ್) – 3077
ಉದ್ಯೋಗ ಸ್ಥಳ:- ಭಾರತದ ವಿವಿಧ ರೈಲ್ವೆ ವಲಯಗಳಲ್ಲಿ
ವೇತನ ಶ್ರೇಣಿ:- ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಆಯಾ ಹುದ್ದೆಗಳಿಗೆ ಅನುಸಾರವಾಗಿ ಅತ್ಯುತ್ತಮವಾದ ಮಾಸಿಕ ವೇತನ ಹಾಗೂ ಇನ್ನಿತರೆ ಸರ್ಕಾರಿ ಸೌಲಭ್ಯಗಳು ಸಿಗುತ್ತವೆ.
ಶೈಕ್ಷಣಿಕ ವಿದ್ಯಾರ್ಹತೆ:-
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ ಪರೀಕ್ಷೆ ಉತ್ತೀರ್ಣರಾಗಿರಬೇಕು ಅಥವಾ
- NCVT ನೀಡಿದ ರಾಷ್ಟ್ರೀಯ ಅಪ್ರೆಂಟಿಶಿಪ್ ಪ್ರಮಾಣ ಪತ್ರವನ್ನು (NAC) ಹೊಂದಿದ್ದರು ಸಹ ಅರ್ಜಿ ಸಲ್ಲಿಸಬಹುದು.
ವಯೋಮಿತಿ:-
- ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಸರಿಯಾಗಿ 18 ವರ್ಷ ಪೂರೈಸಿರಬೇಕು
- ಗರಿಷ್ಠ 36 ವರ್ಷಗಳನ್ನು ಮೀರಿರಬಾರದು
- RRB ಮಾನದಂಡಗಳ ಪ್ರಕಾರವಾಗಿ ಆಯ್ದ ಕೆಲ ವರ್ಗಗಳಿಗೆ ವಯೋಮಿತಿ ಸಡಲಿಕೆ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ:-
* RRB ಅಧಿಕೃತ ವೆಬ್ಸೈಟ್ ಆದ https://www.rrbapply.gov.in ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ಲೈನಲ್ಲಿ ಅರ್ಜಿ ಸಲ್ಲಿಸಬೇಕು
* ವೆಬ್ಸೈಟ್ ಓಪನ್ ಮಾಡಿ ಅರ್ಜಿ ಫಾರಂ ಮೇಲೆ ಕ್ಲಿಕ್ ಮಾಡಿ ಸರಿಯಾದ ವಿವರಗಳನ್ನು ಭರ್ತಿ ಮಾಡಿ . ಸಬ್ಮಿಟ್ ಮಾಡಬೇಕು
* ಅರ್ಜಿ ಶುಲ್ಕವನ್ನು ಪಾವತಿ ಮಾಡಿ ಅರ್ಜಿ ಸಲ್ಲಿಕೆ ಯಶಸ್ವಿ ಆದ ಮೇಲೆ ತಪ್ಪದೆ ಮತ್ತು ಅರ್ಜಿ ಸ್ವೀಕೃತಿ ಪ್ರತಿ ಪಡೆಯಿರಿ
ಅರ್ಜಿ ಶುಲ್ಕ:-
* GEN/OBC/EWS ವರ್ಗದ ಅಭ್ಯರ್ಥಿಗಳಿಗೆ ರೂ.500 (CBT ಯಲ್ಲಿ, ಕಾಣಿಸಿಕೊಂಡ ಮೇಲೆ ರೂ. 400 ಹಿಂತಿರುಗಿಲಾಗುವುದು
* SC/ST/ ಮಹಿಳೆಯರು ಹಾಗೂ ಟ್ರಾನ್ಸ್ಜೆಂಡರ್ ರೂ. 250 (CBT ಯಲ್ಲಿ, ಕಾಣಿಸಿಕೊಂಡ ಮೇಲೆ ಪೂರ್ತಿ ಮೊತ್ತವನ್ನು
ಹಿಂತಿರುಗಿಲಾಗುವುದು)
* ಅರ್ಜಿ ಶುಲ್ಕವನ್ನು ಆನ್ಲೈನಲ್ಲಿಯೇ ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬೇಕು.
ಆಯ್ಕೆ ವಿಧಾನ:-
- ಕಂಪ್ಯೂಟರ್ ಬೇಸ್ಡ್ ಟೆಸ್ಟ್
- ದೈಹಿಕ ದಕ್ಷತೆ ಪರೀಕ್ಷೆ
- ನೇರ ಸಂದರ್ಶನ
- ದಾಖಲೆಗಳ ಪರಿಶೀಲನೆ
ಪ್ರಮುಖ ದಿನಾಂಕಗಳು:-
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 23.01.2025 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 22.02.2025 |