RBI
ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ನೋಟಿನ ಅಮಾನ್ಯೀಕರಣ ಹಾಗೂ ಹೊಸ ಮುಖ ಬೆಲೆಯ ನೋಟ್ ಮತ್ತು ಹಳೆ ನೋಟುಗಳ ವಾಪಸ್ಸು ಪಡೆಯುವಿಕೆ ವಿಚಾರದಲ್ಲಿ ಅನೇಕ ಕ್ರಮಗಳನ್ನು ಕೈಕೊಂಡಿದ್ದಾರೆ.
ಇಂತಹ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದರು, ದಿನ ಕಳೆದಂತೆ ಜನ ಅದಕ್ಕೆ ಹೊಂದುಕೊಂಡಿದ್ದಾರೆ. ಆದರೆ ಸಮಾಧಾನಕರ ಸಂಗತಿ ಏನೆಂದರೆ ಕಪ್ಪು ಹಣ ಸಂಗ್ರಹ ಮಾಡಿ ಇಟ್ಟುಕೊಂಡಿದ್ದ ಹಾಗೆ ನಕಲು ನೋಟ್ ಗಳ ಚಲಾವಣೆ ಮುಂದಾಗಿದ್ದ ಕಿಡಿಗೇಡಿಗಳ ಕೃತ್ಯಕ್ಕೆ ಇಂತಹ ನಿರ್ಧಾರಗಳಿಂದ ಕಡಿವಾಣ ಬಿದ್ದಿದೆ ಎನ್ನುವುದೇ ಸಮಾಧಾನ.
ಆದರೀಗ ಇದ್ದಕ್ಕಿದ್ದಂತೆ RBI ನೋಟುಗಳ ಹಾಗೂ ನಾಣ್ಯಗಳನ್ನು ಹಿಂಪಡೆಯುವಿಕೆ ಬಗ್ಗೆ ಅಸಲಿ ಸುದ್ದಿಗಿಂತ ಸೋಶಿಯಲ್ ಮೀಡಿಯಾದಲ್ಲಿ ಇಲ್ಲಸಲ್ಲದ ಸುದ್ದಿಯೇ ಹೆಚ್ಚಾಗಿ ಮುಟ್ಟುವುದು. ಅದರಲ್ಲೂ ಕೆಲವು ಸಂದರ್ಭಗಳಲ್ಲಂತೂ ಯಾವ ವಿಷಯವನ್ನು ನಂಬಬೇಕು ಹಾಗೂ ಯಾವುದನ್ನು ನಂಬಬಾರದು ಎನ್ನುವ ಗೊಂದಲವೂ ಕೂಡ ಉಂಟಾಗುತ್ತದೆ.
ಇದ್ದಕ್ಕಿದ್ದ ಹಾಗೆ ರೂ. 1000 ಹಾಗೂ ರೂ. 500 ಮುಖಬೆಲೆಯ ಹಳೆಯ ನೋಟುಗಳನ್ನು ಪ್ರಧಾನ ಮಂತ್ರಿಗಳು ಅಮಾನ್ಯಗೊಳಿಸಿ ರೂ. 2೦೦೦, ರೂ. 50 ರೂ. 20 ಹಾಗೂ ರೂ. 10 ಮುಖ ಬೆಲೆಯ ಹೊಸ ನೋಟುಗಳನ್ನು ಜಾರಿಗೊಳಿಸಿದರು. ಈಗ ನಿಧಾನವಾಗಿ ಹಳೆಯ ರೂ. 100, ರೂ. 50 ಹಾಗೂ ರೂ. 20 & ರೂ, 10 ಮುಖಬೆಲೆಯ ನೋಟುಗಳು ಕಾಣೆಯಾಗುತ್ತಿವೆ.
ಮತ್ತು ಹಳೆಯ ನೋಟ್ ಗಳ ಮುದ್ರಣ ನಿಲ್ಲಿಸಿ ಹೊಸ ನೋಟುಗಳನ್ನು ಚಲಾವಣೆ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಮತ್ತು ರೂಢಿಯಂತೆ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ಸುದ್ದಿ ಹಬ್ಬಿಕೊಳ್ಳುತ್ತಿದೆ. ಈಗ ಮುಂದುವರೆದು . RBI ರೂ.2೦೦ ಮುಖಬೆಲೆಯ ನೋಟ್ ಗಳನ್ನು ಹಿಂಪಡೆದಿದೆ ಎನ್ನುವ ಸುದ್ದಿ ಬಗ್ಗೆ ಎಲ್ಲೆಡೆ ಚರ್ಚೆ ಶುರುವಾಗಿದೆ.
ಈ ಸುದ್ದಿ ದೇಶದಾದ್ಯಂತ ಸಂಚಲನ ಮೂಡಿಸಿದೆ. ಹಳದಿ ಬಣ್ಣದ ಆಕರ್ಷಣೀಯವಾಗಿರುವ ಹಾಗೂ ಈಗಷ್ಟೇ ಚಾಲ್ತಿಗೆ ಬಂದಿದ್ದ ರೂ.200 ರ ನೋಟ್ ರದ್ದಾಗಲು ಕಾರಣವೇನು? ಈ ಹಿಂದೆ ರೂ. 2000 ಮುಖಬೆಲೆಯ ನೋಟ್ ಹೊಸದಾಗಿ ಜಾರಿಗೆ ಬಂದಿದ್ದರು RBI ಅವುಗಳನ್ನು ರದ್ದುಗೊಳಿಸಿ ಹಿಂಪಡೆದಿತ್ತು,
ಈಗ ರೂ. 200 ಮುಖಬೆಲೆಗೆ ನೋಟ್ ಬಗ್ಗೆಯೂ ಇಂತದೆ ಮಾತುಗಳು ಇರುವುದರಿಂದ ರೂ. 200 ಮುಖಬೆಲೆಯ ನೋಟ್ ಬ್ಯಾನ್ ಆಗಲು ಕಾರಣವೇನು ಎಂದು ಕನ್ಫ್ಯೂಸ್ ಆಗಿದ್ದಾರೆ. ಹೀಗಾಗಿ ಇಂತಹ ವಿಷಯದ ಬಗ್ಗೆ RBI ಸ್ಪಷ್ಟಣೆ ನೀಡಿದೆ. ರೂ. 200 ಮುಖ ಬೆಲೆಯ ನೋಟ್ ಕುರಿತಂತೆ, ಉಂಟಾಗಿರುವ ಎಲ್ಲಾ ಗೊಂದಲಗಳಿಗೂ ತನ್ನ ಪ್ರಕಟಣೆ ಮೂಲಕ RBI ಉತ್ತರ ನೀಡಿದೆ.
ಅಷ್ಟಕ್ಕೂ RBI ಹೊಡಿಸಿರುವ ಪ್ರಕಟಣೆಯಲ್ಲಿ ಹೇಳಿರುವುದೆನೆಂದರೆ, ರೂ. 2000 ರೂಪಾಯಿ ನೋಟುಗಳನ್ನು ವಾಪಾಸ್ ಪಡೆದುಕೊಂಡ ನಂತರ, ದೇಶದಲ್ಲಿ ರೂ. 200 ಮತ್ತು ರೂ. 500 ರೂಪಾಯಿ ನಕಲಿ ನೋಟುಗಳು ನಿರಂತರವಾಗಿ ಹೆಚ್ಚುತ್ತಿವೆ. ಹೀಗಾಗಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ವಹಿವಾಟಿನ ಸಮಯದಲ್ಲಿ ನಿಜವಾದ ನೋಟ್ ಗುರುತಿಸಲು ನೋಟಿನ ಎಡಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ರೂ. 200 ಎಂದು ಬರೆಯಲಾಗಿದೆ ಮಧ್ಯದಲ್ಲಿ ಮಹಾತ್ಮ ಗಾಂಧಿಯವರ ಸ್ಪಷ್ಟವಾದ ಚಿತ್ರವಿದೆ, ಸೂಕ್ಷ್ಮ ಅಕ್ಷರಗಳಲ್ಲಿ RBI, ಭಾರತ್, ಇಂಡಿಯಾ ಮತ್ತು 200 ಎಂದು ಬಲಭಾಗದಲ್ಲಿ ಅಶೋಕ ಸ್ತಂಭದ ಚಿಹ್ನೆ ಇರುವುದನ್ನು ಪರಿಶೀಲಿಸಿ ನೋಟಿನ ಅಸಲಿತನವನ್ನು ಖಚಿತಪಡಿಸಿಕೊಂಡು, ನಂತರವಷ್ಟೇ ನೋಟುಗಳನ್ನು ಸ್ವೀಕರಿಸಿ.
ನಕಲಿ ನೋಟುಗಳ ಹರಡುವಿಕೆಯನ್ನು ತಡೆಗಟ್ಟಲು ಸಾರ್ವಜನಿಕರು ಜಾಗರೂಕರಾಗಿರಬೇಕು ಎಂದು RBI ತಿಳಿಸಿದೆ. ಯಾರಾದರೂ ನಕಲಿ ನೋಟು ಪಡೆದರೆ, ತಕ್ಷಣವೇ ಸ್ಥಳೀಯ ಆಡಳಿತ ಅಥವಾ ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿ ಎಂದು ಸಲಹೆ ನೀಡಿ ಅದರೊಂದಿಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿರುವಂತೆ ರೂ.200 ರೂಪಾಯಿ ನೋಟನ್ನು ವಾಪಾಸ್ ಪಡೆದುಕೊಳ್ಳುವ ಯಾವುದೇ ಉದ್ದೇಶವಿಲ್ಲ ಎನ್ನುವುದನ್ನು ಸ್ಪಷ್ಟೀಕರಿಸಿದೆ.