Bhima Sakhi Yojana
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) 2024ರ ಡಿಸೆಂಬರ್ 9 ರಂದು ದೇಶದ ಮಹಿಳೆಯರ ಸಲುವಾಗಿ LIC ಬಿಮಾಸಖಿ ಯೋಜನೆ(Bhima Sakhi Yojana) (LIC Mimsakhi Scheme) ಘೋಷಿಸಿದರು. ದೇಶದ ಮಹಿಳೆಯರಿಗಾಗಿಯೇ ರೂಪಿಸಿರುವ ವಿಶೇಷ ಯೋಜನೆ ಇದಾಗಿದೆ. ಈ ಯೋಜನೆಗೆ ನೋಂದಾಯಿಸಿಕೊಳ್ಳುವ ಆಸಕ್ತ ಗ್ರಾಮೀಣ ಭಾಗದ ಮಹಿಳೆಯರು ಸ್ಟೈಫಂಡ್ ಹಾಗೂ ಆಕರ್ಷಕ ಕಮಿಷನ್ ಜೊತೆಗೆ LIC ವಿಮಾ ಪಾಲಿಸಿ ಬಗ್ಗೆ ತರಬೇತಿ ಪಡೆದು ಭವಿಷ್ಯದಲ್ಲಿ ಗ್ರಾಮೀಣ ಭಾಗದಲ್ಲಿ ಈ ವಿಮೆಗಳ ಕುರಿತ ಜಾಗೃತಿ ಮೂಡಿಸುತ್ತಾರೆ.
ಈ ವಿಮಾಸಖಿಯರು ಗ್ರಾಮೀಣ ಭಾಗದಲ್ಲಿ ಜನಸಾಮಾನ್ಯರ ಆದಾಯಕ್ಕೆ ಅನುಗುಣವಾದಂತೆ ರೂಪಿಸಾಗಲಾಗುವ ಯೋಜನೆಗಳ ಮಾಹಿತಿಯನ್ನು LIC ಯಿಂದ ಗ್ರಾಹಕರಿಗೆ ತಲುಪುವವರೆಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಬಹಳ ವಿಶೇಷ ಎನಿಸುತ್ತಿರುವ ಈ ಯೋಜನೆಗೆ ಒಂದು ಲಕ್ಷ ಮಹಿಳೆಯರನ್ನು ಬಿಮಾಸಖಿಯರನ್ನಾಗಿ ನೇಮಿಸಿಕೊಳ್ಳಲು LIC ನಿರ್ಧರಿಸಿದೆ. ನೋಂದಾಯಿಸಿಕೊಳ್ಳುವುದು ಹೇಗೆ? ಅರ್ಹತೆಗಳೇನು ಮತ್ತು ಯೋಜನೆ ಕುರಿತ ಇನ್ನಷ್ಟು ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ಓದಿ.
ನೇಮಕಾತಿ ಸಂಸ್ಥೆ:- ಜೀವ ವಿಮಾನ ನಿಗಮ (LIC)
ಯೋಜನೆಯ ಹೆಸರು:- LIC ಬಿಮಾಸಖಿ ಯೋಜನೆ(Bhima Sakhi Yojana)
ಯೋಜನೆಯ ಉದ್ದೇಶ:-
- ಮಹಿಳೆಯರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಕೊಡುವುದು
- ವಿಮಾ ಸಖಿಯರಿಂದ LIC ಜಾರಿಗೊಳಿಸುವ ವಿಶೇಷ ಯೋಜನೆಗಳ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುವುದು
- ಈ ಮೂಲಕ ಜನಸಾಮಾನ್ಯನಿಗೂ ಕೂಡ ಕಡಿಮೆ ಬಜೆಟ್ ಗೆ ವಿಮೆ ಸಾಧ್ಯವಾಗುವ ಹಾಗೆ ಅವಕಾಶ ಕಲ್ಪಿಸಿಕೊಡುವುದು
ತರಬೇತಿ ಅವಧಿ:- 3 ವರ್ಷಗಳು
ತರಬೇತಿ ಪ್ರಯೋಜನಗಳು:-
* 3 ವರ್ಷಗಳ ಸ್ಟೈಫಂಡ್ ಮತ್ತು ಕಮಿಷನ್ ನೊಂದಿಗೆ ವಿಮಾ ಏಜೆಂಟ್ಗಳಾಗಲು ತರಬೇತಿ ಸಿಗಲಿದೆ
* 3 ವರ್ಷಗಳ ನಂತರ ಮಹಿಳೆಯರು LIC ವಿಮಾ ಏಜೆಂಟ್ಗಳಾಗಿ (ಬಿಮಾ ಸಖಿಗಳು) ಕೆಲಸ ಮಾಡಬಹುದು
* ಹೆಚ್ಚಿನ ವಿದ್ಯಾಭ್ಯಾಸ ಹೊಂದಿದ್ದಲ್ಲಿ LIC ಅಭಿವೃದ್ಧಿ ಅಧಿಕಾರಿ ಮತ್ತು ಇನ್ನಿತರ ಪ್ರಮೋಷನ್ ಗಳಿಗೂ ಕೂಡ ಪಾತ್ರರಾಗಬಹುದು
* ಮಹಿಳೆಯರು ತಾವು ಇರುವ ಸ್ಥಳದಲ್ಲಿಯೇ
ಹೊಂದಿಕೊಳ್ಳುವ ಸಮಯದಲ್ಲಿ ಈ ಕಾರ್ಯ ನಿರ್ವಹಿಸಬಹುದು
ಸ್ಟ್ರೈಫಂಡ್ ವಿವರ:-
* ಮೊದಲನೇ ವರ್ಷ – ರೂ. 7,000
* ಎರಡನೇ ವರ್ಷ – ರೂ. 6,000
* ಮೂರನೇ ವರ್ಷ – ರೂ. 5,000
ಅರ್ಹತೆಗಳು:-
- ಭಾರತೀಯ ನಾಗರಿಕರಾಗಿರುವ 18 ರಿಂದ 70 ವರ್ಷದೊಳಗಿನ ಮಹಿಳೆಯರು ಅರ್ಜಿ ಸಲ್ಲಿಸಬಹುದು
- ಮಹಿಳೆಯ ಕನಿಷ್ಠ ವಿದ್ಯಾರ್ಹತೆ 10ನೇ ತರಗತಿ ತೇರ್ಗಡೆಯಾಗಿರಬೇಕು.
- ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು.
- LIC ಯ ಅಸ್ತಿತ್ವದಲ್ಲಿರುವ ಏಜೆಂಟ್ಗಳು ಮತ್ತು LIC ಉದ್ಯೋಗಿಗಳಿಗೆ ಸಂಬಂಧಿಸಿದ ಮಹಿಳೆಯರು (ಸಂಗಾತಿಗಳು, ಮಕ್ಕಳು, ದತ್ತು ಪಡೆದ ಮತ್ತು ಮಲಮಕ್ಕಳು, ಪೋಷಕರು, ಸಹೋದರಿಯರು ಅರ್ಜಿ ಸಲ್ಲಿಸಲು ಅರ್ಹರಲ್ಲ)
- ಮಹಿಳೆಯರು LIC ನಿವೃತ್ತ ಉದ್ಯೋಗಿಗಳಾಗಿರಬಾರದು ಮತ್ತು LIC ಮಾಜಿ ಏಜೆಂಟ್ ಗಳಾಗಿರಬಾರದು, ಅಸ್ತಿತ್ವದಲ್ಲಿರುವ ಏಜೆಂಟ್ ಗಳಿಗೂ ಅರ್ಜಿ ಸಲ್ಲಿಸಲು ಅವಕಾಶವಿಲ್ಲ
ಅರ್ಜಿ ಸಲ್ಲಿಸುವ ವಿಧಾನ:-
* LIC ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು
* 9 ಡಿಸೆಂಬರ್ 2024 ರಿಂದಲೂ ಅರ್ಜಿ ಸ್ವೀಕರಿಸಲಾಗುತ್ತಿದೆ. ಅರ್ಜಿ ಸಲ್ಲಿಸಲು ನಿಗದಿ ಆಗಿರುವ ಕೊನೆ ದಿನಾಂಕದ ಬಗ್ಗೆ ಇನ್ನೂ ಘೋಷಣೆಯಾಗಿಲ್ಲ.