UCO ಬ್ಯಾಂಕ್ ನೇಮಕಾತಿ.! ವೇತನ 85,920/- ಆಸಕ್ತರು ಅರ್ಜಿ ಸಲ್ಲಿಸಿ.!

UCO Bank Recruitment

ಬ್ಯಾಂಕ್ ಕ್ಷೇತ್ರದಲ್ಲಿ ಉದ್ಯೋಗವನ್ನು ಅರಸುತ್ತಿರುವ ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೂ ಒಂದು ಸಿಹಿ ಸುದ್ದಿ ಇದೆ. ಯುಕೋ ಬ್ಯಾಂಕ್(UCO BANK) ಭಾರತದ ಹೆಸರಾಂತ ಬ್ಯಾಂಕ್ ಗಳಲ್ಲಿ ಒಂದು. ಬಹುತೇಕ ದೇಶದ ಎಲ್ಲಾ ರಾಜ್ಯಗಳ್ಲೂ ಬ್ರಾಂಚ್ ಗಳನ್ನು ಹೊಂದಿರುವ ಈ ಯುನೈಟೆಡ್ ಕಮರ್ಷಿಯಲ್ ಬ್ಯಾಂಕ್ (United Commercial Bank) ತನ್ನ ವಿವಿಧ ಬ್ಲಾಂಚ್ ಗಳಲ್ಲಿ ತೆರವಾಗುವ ಹುದ್ದೆಗಳಿಗೆ ಪ್ರತಿ ವರ್ಷ ನೇಮಕಾತಿ ಪ್ರಕ್ರಿಯೆ ಕೂಡ ನಡೆಸುತ್ತದೆ.

WhatsApp Group Join Now
Telegram Group Join Now

ಅಂತೆಯೇ ಸದ್ಯಕ್ಕೆ ಯುಕೋ ಬ್ಯಾಂಕ್ ನಿಂದ 2025 ನೇ ಸಾಲಿನ ಹೊಸ ನೇಮಕಾತಿ ನಡೆಯುತ್ತಿದೆ. ಕರ್ನಾಟಕ ಮತ್ತು ಇತರೆ 10 ರಾಜ್ಯಗಳಲ್ಲಿ ಪ್ರಸ್ತುತವಾಗಿ ಬೇಡಿಕೆ ಇರುವ ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ವಿಶೇಷವಾಗಿ ಕರ್ನಾಟಕ ರಾಜ್ಯಕ್ಕಾಗಿ 35 ಹುದ್ದೆಗಳ ಮೀಸಲಾತಿ ಕೂಡ ಇದೆ, ಈ ಅವಕಾಶವನ್ನು ಸರಿಪಯೋಗಪಡಿಸಿಕೊಂಡು, ನಿಮ್ಮ ಕನಸಿನ ಉದ್ಯೋಗವನ್ನು ಪಡೆಯುವ ಅವಕಾಶ ಸಿಗುತ್ತಿದೆ. ಈ ಕುರಿತು ನೋಟಿಫಿಕೇಶನ್ ನಲ್ಲಿರುವ ಪ್ರಮುಖ ಸಂಗತಿಗಳ ವಿವರ ಹೀಗಿದೆ ನೋಡಿ.

ನೇಮಕಾತಿ ಸಂಸ್ಥೆ:- The Institute of Banking Personnel Selection (IBPS)

ಉದ್ಯೋಗ ಸಂಸ್ಥೆ:- ಯುಕೋ ಬ್ಯಾಂಕ್ (UCO Bank)
ಹುದ್ದೆ ಹೆಸರು:- ಸ್ಥಳೀಯ ಬ್ಯಾಂಕ್ ಅಧಿಕಾರಿ (Local Bank Officer)
ಒಟ್ಟು ಹುದ್ದೆಗಳ ಸಂಖ್ಯೆ:- 250 ಹುದ್ದೆಗಳು
ಉದ್ಯೋಗ ಸ್ಥಳ:- ಭಾರತದ ವಿವಿಧ ಬ್ರಾಂಚ್ ಗಳಲ್ಲಿ

ವೇತನ ಶ್ರೇಣಿ:-

* ಈ ಹುದ್ದೆಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ. 48,420 ರಿಂದ ರೂ. 85,920 ವೇತನ ನಿಗದಿ ಆಗಿದೆ
* ಇದರೊಂದಿಗೆ ಮನೆ ಬಾಡಿಗೆ, ತುಟ್ಟಿ ಭತ್ಯೆ, ವೈದ್ಯಕೀಯ ವೆಚ್ಚ ಮರುಪಾವತಿ ಮತ್ತು ಇನ್ನಿತರ ವಿಶೇಷ ಭತ್ಯೆಗಳಿಗೆ ಅರ್ಹರಾಗಿರುತ್ತಾರೆ

ಶೈಕ್ಷಣಿಕ ವಿದ್ಯಾರ್ಹತೆ:-

* ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಯಾವುದಾದರೂ ವಿಭಾಗದಲ್ಲಿ ಪದವಿ ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ
* ಆಯಾ ರಾಜ್ಯಗಳ ಭಾಷೆಯಲ್ಲಿ ಪ್ರಾವಿಣ್ಯತೆ ಹೊಂದಿರಬೇಕು

ವಯೋಮಿತಿ:-
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 20 ವರ್ಷಗಳು
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 30 ವರ್ಷಗಳು

ವಯೋಮಿತಿ ಸಡಿಲಿಕೆ:-
* SC / ST ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಲಿಕೆ,ಇರುತ್ತದೆ
* OBC ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ
* ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

* ಆನ್ಲೈನ್ ವಿಧಾನದಲ್ಲಿಯೇ ಅರ್ಜಿ ಸಲ್ಲಿಸಬೇಕು
* ನೇರವಾಗಿ ಯುಕೋ ಬ್ಯಾಂಕ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
* ಅರ್ಜಿ ಸಲ್ಲಿಸುವ ಲಿಂಕ್ ಮಾಡಿ ಅರ್ಜಿ ಫಾರಂ ಪಡೆಯಿರಿ
* ಕೇಳಲಾಗುವ ವೈಯಕ್ತಿಕ ವಿವರಗಳು ಹಾಗೂ ಪ್ರಮಾಣಪತ್ರಗಳ ಸಂಖ್ಯೆ ನಮೂದಿಸಿ
* ನಿಮ್ಮ ವರ್ಗಕ್ಕೆ ಅನುಸಾರವಾದ ಅರ್ಜಿ ಶುಲ್ಕ ಪಾವತಿಸಿ ಪ್ರಕ್ರಿಯೆ ಪೂರ್ತಿಗೊಳಿಸಿ ಅಂತ್ಯದಲ್ಲಿ ತಪ್ಪದೇ ಅರ್ಜಿ ಸ್ವೀಕೃತಿ ಪ್ರತಿ ಪಡೆಯಿರಿ.

ಅರ್ಜಿ ಶುಲ್ಕ :-
* SC/ST ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ರೂ. 175
* ಇನ್ನಿತರ ಅಭ್ಯರ್ಥಿಗಳಿಗೆ ರೂ. 850

ಆಯ್ಕೆ ವಿಧಾನ:-
* ಭಾಷಾ ಪ್ರಾವಿಣ್ಯತೆ ಪರೀಕ್ಷೆ & ಸ್ಪರ್ಧಾತ್ಮಕ ಪರೀಕ್ಷೆ (ಆಯಾ ರಾಜ್ಯದ ಭಾಷೆಯಲ್ಲಿ 10ನೇ ತರಗತಿ ಹಾಗೂ 12ನೇ ತರಗತಿ ವ್ಯಾಸಂಗ ಮಾಡಿದ್ದವರಿಗೆ ಭಾಷಾ ಪರೀಕ್ಷೆ ವಿನಾಯಿತಿ ಇದೆ)
* ದಾಖಲೆಗಳ ಪರಿಶೀಲನೆ
* ನೇರ ಸಂದರ್ಶನ

ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – ಈಗಾಗಲೇ ಆರಂಭವಾಗಿದೆ
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 05.02.2025

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment