Aadhar Card
ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಹಣಕಾಸಿನ ತುರ್ತು ಪರಿಸ್ಥಿತಿ ಒಂದಲ್ಲ ಒಂದು ಸಂದರ್ಭದಲ್ಲಿ ಎದುರಾಗುತ್ತದೆ. ಹೀಗೆ ವೈಯುಕ್ತಿಕ ಸಾಲ ಬೇಕಾದಾಗ ಸ್ನೇಹಿತರು ಹಾಗೂ ಸಂಬಂಧಿಕರನ್ನು ಕೇಳುವ ಬದಲು ಬ್ಯಾಂಕ್ ಗಳ ಮೊರೆ ಹೋಗುವವರ ಸಂಖ್ಯೆ ಹೆಚ್ಚು. ಆದರೆ ಬ್ಯಾಂಕ್ ಗಳಲ್ಲೂ ಕೂಡ ಅತಿ ವೇಗವಾಗಿ ಕೆಲವೊಮ್ಮೆ ಸಾಲ ಸಿಗುವುದಿಲ್ಲ ಅಲ್ಲದೆ ಬ್ಯಾಂಕ್ ನಿಯಮಾವಳಿಗಳ ಪ್ರಕಾರವಾಗಿ ಕೇಳಲಾಗುವ ಎಲ್ಲಾ ದಾಖಲೆಗಳನ್ನು ಒದಗಿಸಬೇಕು ಮತ್ತು ಇವುಗಳಲ್ಲಿ ವ್ಯತ್ಯಾಸವಾದರೆ ಸಾಲ ಸಿಗುವ ಖಚಿತತೆ ಕೂಡ ಇರುವುದಿಲ್ಲ.
ಆದರೆ ಇನ್ನು ಮುಂದೆ ಇದಕ್ಕೆಲ್ಲಾ ಒಂದು ಸುಲಭ ಪರಿಹಾರ ಇದೆ. ಕೇವಲ ಆಧಾರ್ ಕಾರ್ಡ್(Aadhar Card) ಒಂದು ದಾಖಲೆ ಇದ್ದರೆ ಸಾಕು, ನೀವು ಆನ್ಲೈನ್ ನಲ್ಲಿ ತ್ವರಿತವಾಗಿ ರೂ. 2 ಲಕ್ಷದವರೆಗೆ ಸಾಲ ಪಡೆಯಬಹುದು. ಯಾರೆಲ್ಲಾ ಇದರ ಪ್ರಯೋಜನ ಪಡೆಯಬಹುದು? ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಈ ಕುರಿತ ಹೆಚ್ಚಿನ ವಿವರ ಹೀಗಿದೆ ನೋಡಿ.
ಅರ್ಜಿ ಸಲ್ಲಿಸಲು ಅರ್ಹತೆಗಳು:-
* ಅರ್ಜಿದಾರರು 21 ರಿಂದ 60 ವರ್ಷ ವಯಸ್ಸಿನ ಒಳಗಿನವರಾಗಿರಬೇಕು.
* ಕೆಲವು ವಿಶೇಷ ಸಂದರ್ಭಗಳಲ್ಲಿ ಸಾಲದಾತರು 65 ವರ್ಷ ವಯಸ್ಸಿನವರೆಗೆ ಸಹಾ ಅನುಮೋದನೆ ನೀಡುವ ಸಾಧ್ಯತೆ ಇರುತ್ತದೆ
* ರೂ. 15,000 ದಿಂದ ರೂ. 25,000 ರವರೆಗೆ ಕನಿಷ್ಠ ಮಾಸಿಕ ಆದಾಯ ಹೊಂದಿರುವವರು ಕೂಡ ಸಾಲ ಪಡೆಯಲು ಅರ್ಜಿ ಸಲ್ಲಿಸಬಹುದು.
* ಸಂಬಳ ಪಡೆಯುವವರು ಮಾತ್ರವಲ್ಲದೆ ಸ್ವಯಂ ಉದ್ಯೋಗಿಗಳಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ
* ಉತ್ತಮ ಕ್ರೆಡಿಟ್ ಸ್ಕೋರ್ ಕಡಿಮೆ ಬಡ್ಡಿದರ ಅನ್ವಯಿಸುವುದು ಹಾಗೂ ಶೀಘ್ರವಾಗಿ ಸಾಲ ದೊರೆಯುವುದರ ಮೇಲೆ ಪರಿಣಾಮ ಬೀರುತ್ತದೆ. (650-700 ಅಥವಾ ಅದಕ್ಕಿಂತ ಹೆಚ್ಚಿನ ವ್ಯಾಪ್ತಿಯಲ್ಲಿ ಕ್ರೆಡಿಟ್ ಸ್ಕೋರ್ ಇದ್ದಲ್ಲಿ)
* ಅರ್ಜಿದಾರರು ಈ ಹಿಂದೆ ಯಾವುದೇ ಸಾಲ ಪಡೆದುಕೊಂಡಿದ್ದರೂ ಅದನ್ನು ಹೇಗೆ ತೀರಿಸಿದ್ದೀರು ಮತ್ತು ಆ ಸಂಸ್ಥೆಯ ಷರತ್ತುಗಳನ್ನು ಸರಿಯಾಗಿ ಪಾಲಿಸಿದ್ದೀರಾ ಎನ್ನುವುದೆಲ್ಲವೂ ಕೂಡ ಪರಿಣಾಮ ಬೀರುತ್ತದೆ.
* ಕಡ್ಡಾಯವಾಗಿ ಆಧಾರ್ ಕಾರ್ಡ್ ಗೆ ಹಾಗೂ ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು
ಬೇಕಾಗುವ ದಾಖಲೆಗಳು:-
* ಅರ್ಜಿದಾರನ ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್ ವಿವರ
* ಕಳೆದ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
* ಪೇಮೆಂಟ್ ಸ್ಕ್ರಿಪ್ ಅಥವಾ ಸ್ವಯಂ ಉದ್ಯೋಗಿ ಆಗಿದ್ದಲ್ದಾ ITR ಸಲ್ಲಿಕೆ ದಾಖಲೆಗಳು
* ಇನ್ನಿತರ ಪ್ರಮುಖ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು
* ಮೊದಲಿಗೆ ಯಾವ ಬ್ಯಾಂಕ್ ಗಳು ಈ ರೀತಿ ಆಧಾರ್ ಕಾರ್ಡ್ ಆಧಾರದ ಮೇಲೆ ಸಾಲ ಕೊಡುತ್ತಿವೆ ಎನ್ನುವುದನ್ನು ತಿಳಿದುಕೊಂಡು ನೇರವಾಗಿ ಆ ಬ್ಯಾಂಕ್ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
* ಆ ಬ್ಯಾಂಕ್ ಗಳ ಮೊಬೈಲ್ ಆಪ್ ಮೂಲಕ ಕೂಡ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.
* ನೀಡಿರುವ ಕ್ಯಾಲ್ಕುಲೇಟರ್ ಮೂಲಕ ನೀವು ಪಡೆಯುವ ಸಾಲಕ್ಕೆ ಹಾಗೂ ಅದರ ಅವಧಿಗೆ ಅನುಸಾರವಾಗಿ ಎಷ್ಟು ಬಡ್ಡಿದರ ಹಾಗೂ EMI ನಿರ್ಧಾರ ಆಗುತ್ತದೆ ಎನ್ನುವುದನ್ನು ಲೆಕ್ಕಾಚಾರ ಮಾಡಿ
* ನಂತರ ನೀಡಿರುವ ಸೂಚನೆ ಪ್ರಕಾರ ಮುಂದುವರೆಯಿರಿ ಪ್ರಕ್ರಿಯೆ ಸಕ್ರಿಯಗೊಂಡ ನಂತರ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಸಾಲದ ಮೊತ್ತ ಕ್ರೆಡಿಟ್ ಆಗುತ್ತದೆ.