Auto Subsidy
ಆಟೋ (Auto) ಎನ್ನುವುದು ನಗರ ಜೀವಿಗಳ ನರನಾಡಿಯಾಗಿದೆ ಎಂದೇ ಹೇಳಬಹುದು. ಅದರಲ್ಲೂ ಬೆಂಗಳೂರಿನಂತಹ ಮಹಾನಗರದಲ್ಲಿ ಓಡಾಡುವ ಮಂದಿಗೆ ಆಟೋ ಅವಶ್ಯಕತೆ ಹಾಗೂ ಪ್ರಾಮುಖ್ಯತೆ ಬಗ್ಗೆ ಹೆಚ್ಚಿಗೆ ಅರಿವಾಗಿರುತ್ತದೆ ಹಾಗಾಗಿ ಪದವಿ ಪಡೆದವರು ಕೂಡ ಆಟೋ ಡ್ರೈವರ್ ಗಳಾಗಿ ಬದುಕು ಕಟ್ಟಿಕೊಳ್ಳಲು ಹಿಂಜರಿಯುವುದಿಲ್ಲ.
ಇದರ ನಡುವೆ ಆಟೋ ಡ್ರೈವರ್ ಗಳಿಗೆ ಸಮಸ್ಯೆ ಇಲ್ಲ ಎಂದೇನಿಲ್ಲ, ಸಮಾಧಾನಕರ ಸಂಗತಿ ಏನೆಂದರೆ ಈ ನಡುವೆ ಸರ್ಕಾರಗಳು ಕೂಡ ಆಟೋ ಚಾಲಕರ ಶ್ರೇಯೋಭಿವೃದ್ಧಿ ಬಗ್ಗೆ ಚಿಂತನೆ ನಡೆಸುತ್ತಿವೆ. ಇದರ ಅಂಗವಾಗಿ ಬೆಂಗಳೂರಿನಲ್ಲಿ ಆಟೋ ಖರೀದಿಸುವ ಆಟೋ ಚಾಲಕರಿಗೆ ರೂ. 60,000 ದವರೆಗೆ ಸಹಾಯಧನ (Subsidy for auto loan) ನೀಡಲು ಸಾರಿಗೆ ಇಲಾಖೆ ಮುಂದಾಗಿದೆ.
ಹಣಕಾಸು ಇಲಾಖೆ ಸಲ್ಲಿಸಿದ ಈ ಪ್ರಸ್ತಾವನೆಗೆ ಸರ್ಕಾರದ ಅನುಮೋದನೆ ದೊರೆಯುವ ಸಾಧ್ಯತೆಯೂ ಇದೆ. ಪ್ರಸ್ತುತವಾಗಿ ಬೆಂಗಳೂರು ಮಹಾನಗರವನ್ನೇ (Bengaluru) ಕೇಂದ್ರಿಕರಿಸಿಕೊಂಡು ಆಯೋಜಿಸಿರುವ ಈ ಯೋಜನೆ ದಿನ ಕಳೆದಂತೆ ರಾಜ್ಯವ್ಯಾಪಿ ವಿಸ್ತರಣೆ ಆಗುವ ಸಾಧ್ಯತೆ ಇದೆ. ಹಾಗಾದರೆ ಏನಿದು ಯೋಚನೆ ಪ್ರಯೋಜನಗಳೇನು ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ಓದಿ.
ಮುಖ್ಯ ಸಂಗತಿ ಏನೆಂದರೆ, ಕರ್ನಾಟಕ ಸಾರಿಗೆ ಇಲಾಖೆಯ ಈ ಕ್ರಿಯಾ ಯೋಜನೆಯು ಎಲೆಕ್ಟ್ರಿಕಲ್ ಆಟೋ (EV Auto) ಖರೀದಿಸುವಂತಹ ಆಟೋ ಚಾಲಕರಿಗೆ ಮಾತ್ರ ಲಭ್ಯವಾಗಲಿದೆ. ಯಾಕೆಂದರೆ ಈ ಯೋಜನೆಯ ಮುಖ್ಯ ಉದ್ದೇಶವೇ ವಾಯು ಮಾಲಿನ್ಯವನ್ನು ತಡೆಗಟ್ಟುವುದು ಹಾಗೂ ಆಟೋ ಚಾಲಕರ ಆಟೋ ನಿರ್ವಹಣೆ ಖರ್ಚನ್ನು ತಗ್ಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಸರ್ವೆಯೊಂದರ ಪ್ರಕಾರ ಬೆಂಗಳೂರು ಮಹಾನಗರದಲ್ಲಿರುವ 2.20 ಲಕ್ಷ ಆಟೋಗಳಲ್ಲಿ 10,000 ಕ್ಕಿಂತ ಹೆಚ್ಚು ಆಟೋಗಳು ಎರಡು ಸ್ಟ್ರೋಕ್ ಆಟೋಗಳಾಗಿವೆ ಎಂದು ತಿಳಿದು ಬಂದಿದೆ. ಎರಡು ದಶಕಗಳ ಹಿಂದೆಯೇ ಈ ಸ್ಟ್ರೋಕ್ ಆಟೋಗಳ ನೋಂದಣಿ ನಿಂತಿದ್ದರು, ಅದೆಷ್ಟೋ ಆಟೋ ಚಾಲಕರು ಹೊಸ ಆಟೋ ಖರೀದಿಸಲು ಬಂಡವಾಳ ಇಲ್ಲದೆ ದುಡಿಮೆಯ ಹೆಚ್ಚು ಹಣವನ್ನು ಈ ಬಗೆಯ ಆಟೋಗಳ ನಿರ್ವಹಣೆಯಲ್ಲಿ ಕಳೆಯುತ್ತಿದ್ದಾರೆ.
ಆದರೆ ಈಗ ಎಲ್ಲಾ ಆಟೋ ಚಾಲಕರಿಗೂ ಒಂದು ಉತ್ತಮ ಅವಕಾಶ ಸಿಗುತ್ತಿದೆ. ಅದೇನೆಂದರೆ ಇವಿ ಆಟೋ ಖರೀದಿಸಲು ಬಯಸುವ ಆಟೋ ಚಾಲಕರಿಗೆ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯಿಂದ ರೂ. 60000 ವರೆಗೆ ಸಹಾಯಧನ ಸಿಗುತ್ತಿದೆ. ನವೀಕೃತ ಇಂಧನಗಳ ಕೊರತೆ ನೀಗಿಸುವ ಉದ್ದೇಶದಿಂದ ಇತ್ತೀಚೆಗೆ ಎಲೆಕ್ಟ್ರಿಕಲ್ ವಾಹನಗಳ ಬಳಕೆ ಹೆಚ್ಚಾಗುತ್ತಿದೆ ಇವುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಇಂತಹದೊಂದು ಯೋಜನೆಯನ್ನು ಆಯೋಜಿಸಿದೆ.
ಇಂಧನ ಚಾಲಿತ ಆಟೋಗಳು ಹಾಗೂ ಎಲೆಕ್ಟ್ರಿಕಲ್ ವಾಹನಗಳ ಬಗ್ಗೆ ಹೇಳುವುದಾದರೆ ಮೈಲೇಜ್ ವಿಚಾರದಲ್ಲಿ ಇವಿ-ವಾಹನಗಳೇ ಮೇಲು ಎಂದು ಹೇಳಲಾಗುತ್ತಿದೆ. ರೂ. 200 ಪೆಟ್ರೋಲ್ ಗೆ ಸಿಗುವ ಮೈಲೇಜ್ ಇವಿ ಆಟೋಗಳಾದರೆ ರೂ.30-ರೂ.40 ರೂಗಳಲ್ಲಿ ಸಿಗುತ್ತದೆ ಮತ್ತು ನಿರ್ವಹಣೆ ಖರ್ಚಿನಲ್ಲೂ ಕೂಡ ಇವಿ ವಾಹನಗಳ ಖರ್ಚು ಬಹಳ ಕಡಿಮೆ ಇರುತ್ತದೆ ಎಂದು ಹೇಳಲಾಗುತ್ತಿದೆ.
ಇನ್ನು ವಾಯುಮಾಲಿನ್ಯ ಕಡಿಮೆಗೊಳಿಸುವ ವಿಚಾರದಲ್ಲಂತೂ ಪ್ರಕೃತಿಗೆ ಇವಿ ವೆಹಿಕಲ್ಸ್ ಕೊಡುವ ಕೊಡುಗೆ ಅಪಾರ ಆದರೆ ಬೆಲೆ ವಿಚಾರದಲ್ಲಿ ಇಂಧನ ಚಾಲಿತ ಆಟೋಗಳಿಗೆ ರೂ. 3 ರಿಂದ ರೂ. 3.5 ಲಕ್ಷ ಬೆಲೆ ಇದ್ದರೆ ಎಲೆಕ್ಟ್ರಿಕಲ್ ವಾಹನ ಗಳ ಬೆಲೆ ರೂ. 4 – ರೂ. 4.5ಲಕ್ಷ ಇರುತ್ತದೆ.
ಹೆಚ್ಚುವರಿ ಒಂದು ಲಕ್ಷದ ಬೆಲೆ ಬಗ್ಗೆ ಯೋಚನೆ ಮಾಡಿದರು ಸರ್ಕಾರದಿಂದ ಸಿಗುತ್ತಿರುವ ಸಸಹಾಯಧನ ರೂ. 60,000 ಈ ಹೊರೆಯನ್ನು ಕಡಿಮೆ ಮಾಡುತ್ತಿದೆ. ಇನ್ನು ರೂ. 40,000 ಹೆಚ್ಚಿನ ಬಂಡವಾಳದ ಬಗ್ಗೆ ಹೆಚ್ಚು ಯೋಚಿಸದೆ ಇವಿ ವಾಹನಗಳನ್ನು ಖರೀದಿಸಿ ಎನ್ನುವುದು ತಜ್ಞರ ಸಲಹೆ ಆಗಿದೆ. ಅಗತ್ಯ ಇರುವವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಲೇಖನವನ್ನು ಹೆಚ್ಚಿನ ಜನರೊಡನೆ ಶೇರ್ ಮಾಡಿ.