Aadhaar Pan Download
ಪ್ರಸ್ತುತವಾಗಿ ಮೆಟಾ ಒಡೆತನದಲ್ಲಿರುವ ವಾಟ್ಸಾಪ್ (Whatsapp) ಜಗತ್ತಿನಾದ್ಯಂತ ಅತಿ ಹೆಚ್ಚು ಜನರು ಉಪಯೋಗಿಸುವ ಅಪ್ಲಿಕೇಶನ್
ಗಳಲ್ಲಿ ಒಂದಾಗಿದೆ. ಕಳೆದೊಂದು ದಶಕದಲ್ಲಿ ವಾಟ್ಸಪ್ ಎನ್ನುವ ಅಪ್ಲಿಕೇಶನ್ ಕಂಡು ಕೇಳರಿಯದಂತಹ ಅನೇಕ ಅನುಕೂಲತೆ ಕೊಟ್ಟು ಅಚ್ಚರಿಯನ್ನು ಮೂಡಿಸಿದೆ.
ಆರಂಭದಲ್ಲಿ ಆಂಡ್ರಾಯ್ಡ್ ಫೋನ್ ಬಳಕೆದಾರರು ವಾಟ್ಸಪ್ ನ್ನು ಡಾಟಾ ಬಳಕೆಯಿಂದ ವಿಡಿಯೋ ಕಾಲ್ ಮಾಡಲು ಆಡಿಯೋ ಕಾಲ್ ಮಾಡಲು ಮತ್ತು ಟೆಕ್ಸ್ಟ್ ರೂಪದ ಇಮೇಜ್ ರೂಪದ ಸಂದೇಶವನ್ನು ವಿಡಿಯೋಗಳನ್ನು ರವಾನೆ ಮಾಡಿಕೊಳ್ಳಲು ಬಳಸುತ್ತಿದ್ದರು.
ಕಾಲ ಬದಲಾಗುತ್ತಾ ಬಂದಂತೆ ಹಾಗೂ ಗ್ರಾಹಕರ ಅಗತ್ಯತೆ ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ವಾಟ್ಸಪ್ ಹೊಸ ಹೊಸ ರೂಪ ಪಡೆದುಕೊಂಡು ಇಂದು ವಾಟ್ಸಾಪ್ನಲ್ಲಿಯೇ ಆಧಾರ್, ಪ್ಯಾನ್ ಕಾರ್ಡ್ ಇನ್ನು ಮುಂತಾದ ಪ್ರಮುಖ ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದು ಎನ್ನುವ ಮಟ್ಟಕ್ಕೆ ತಲುಪಿದೆ. ಇದು ಹೇಗೆ ಸಾಧ್ಯ ಹಾಗೂ ಈ ವಿಧಾನ ಹೇಗೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ
ಹೌದು, ಇಂತಹ ಒಂದು ಅವಕಾಶ ಇನ್ನು ಮುಂದೆ ವಾಟ್ಸಾಪ್ ಬಳಕೆದಾರರಿಗೆ ಸಿಗುತ್ತದೆ. ದಿನ ನಿತ್ಯದ ಜೀವನದಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೆಹಿಕಲ್ ಆರ್ ಸಿ ಕಾರ್ಡ್ ಹಾಗೂ ಇನ್ನಿತರ ಪ್ರಮುಖ ದಾಖಲೆಗಳ ಅಗತ್ಯತೆ ಇರುತ್ತದೆ ಆದರೆ ಇದನ್ನು ಯಾವಾಗಲೂ ನಮ್ಮ ಜೊತೆಯಲ್ಲೇ ತೆಗೆದುಕೊಂಡು ಓಡಾಡಲು ಆಗುವುದಿಲ್ಲ.
ಹಾಗಾಗಿ ಡಿಜಿ ಲಾಕರ್ (Digilocker) ನಿಮಗೆ ಈ ಜವಾಬ್ದಾರಿ ನಿಭಾಯಿಸಲು ಸಹಾಯ ಮಾಡುತ್ತದೆ. ಇದರ ಮುಂದುವರೆದ ಭಾಗವಾಗಿ ವಾಟ್ಸಪ್ ನಲ್ಲಿ ಇವುಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಇದೆ. MyGov ಹೆಲ್ಪ್‌ಡೆಸ್ಕ್ ವಾಟ್ಸ್ಆ್ಯಪ್ಗೆಂದು ಸಹಾಯವಾಣಿ ನಂಬರ್ ನೀಡಿದೆ ಇದರ ಸಹಾಯದಿಂದ ಡಿಜಿಲಾಕರ್ ಖಾತೆಗೆ ಸೈನ್ ಅಪ್ ಆಗಿ ನಂತರ ದಾಖಲೆಗಳನ್ನು ನೀವು ವಾಟ್ಸ್ಆ್ಯಪ್ ಮೂಲಕ ಪಡೆಯಬಹುದು.
ನೀವು ಈಗಾಗಲೇ ಡಿಜಿಲಾಕರ್ ಅಕೌಂಟ್ ಅನ್ನು ಹೊಂದಿದ್ದರೆ, ಈ ದಾಖಲೆಗಳನ್ನು ಪಡೆಯುವುದು ಮತ್ತಷ್ಟು ಸುಲಭವಾಗುತ್ತದೆ. ಈ ವಿಧಾನ ಹೇಗೆ ಎನ್ನುವುದರ ವಿವರ ಇಲ್ಲಿದೆ ನೋಡಿ.
- ಮೊದಲಿಗೆ ಬಳಕೆದಾರರು +91 9013151515 ಈ ನಂಬರ್ ಅನ್ನು MyGov HelpDesk ಎಂದು , ತಮ್ಮ ಮೊಬೈಲ್ ಫೋನ್ ನಲ್ಲಿ ಸೇವ್ ಮಾಡಿಕೊಳ್ಳಬೇಕು
- ಬಳಿಕ ವಾಟ್ಸ್ಆ್ಯಪ್ ಗೆ ತೆರಳಿ MyGov HelpDesk ಚಾಟ್ಬಾಟ್ನಲ್ಲಿ ನಮಸ್ತೆ ಅಥವಾ ಹಾಯ್ ಎಂದು ಟೈಪ್ ಮಾಡಿ ಆ ಸಂಖ್ಯೆಗೆ ಸಂದೇಶ ಕಳುಹಿಸಬೇಕು
- ತಕ್ಷಣ ಡಿಜಿಲಾಕರ್ ಅಥವಾ ಕೋವಿನ್ ಸೇವೆ ಎಂಬ ಎರಡು ಆಯ್ಕೆ ಕಾಣಿಸುತ್ತದೆ. ಇದರಲ್ಲಿ ಡಿಜಿಲಾಕರ್ ಸೇವೆಗಳು ಎಂಬ ಆಪ್ಶನ್ ಆಯ್ಕೆಮಾಡಿ.
- ನೀವು ಡಿಜಿಲಾಕರ್ ಖಾತೆಯನ್ನು ಹೊಂದಿದ್ದೀರಾ ಎಂದು ಚಾಟ್‌ಬಾಟ್ ಕೇಳಿದಾಗ ಈಗಲೇ ಡಿಜಿ ಲಾಕರ್ ಖಾತೆ ಹೊಂದಿದ್ದರೆ ಹೌದು ಟ್ಯಾಪ್ ಮಾಡಿ ಮುಂದುವರೆಯಿರಿ
- ಒಂದು ವೇಳೆ ಖಾತೆ ಹೊಂದಿಲ್ಲದಿದ್ದರೆ ಅಧಿಕೃತ ವೆಬ್‌ಸೈಟ್ ಅಥವಾ ಡಿಜಿಲಾಕರ್ ಅಪ್ಲಿಕೇಶನ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಖಾತೆಯನ್ನು ರಚಿಸಿ, ಬಳಿಕ ಮುಂದುವರಿಯಬಹುದು.
- ಚಾಟ್‌ಬಾಟ್ ಈಗ ನಿಮ್ಮ ಡಿಜಿಲಾಕರ್ ಖಾತೆಯನ್ನು ಲಿಂಕ್ ಮಾಡಲು ಮತ್ತು ದೃಢೀಕರಿಸಲು ನಿಮ್ಮ 12-ಅಂಕಿಯ ಆಧಾರ್ ಸಂಖ್ಯೆಯನ್ನು ಕೇಳುತ್ತದೆ. ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಕಳುಹಿಸಿ.
- ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೀವು OTP ಪಡೆಯುತ್ತೀರಿ, ಅದನ್ನು ಚಾಟ್‌ಬಾಟ್ ನಲ್ಲಿ ಕೇಳುವ ಕಾಲಂನಲ್ಲಿ ನಮೂದಿಸಿ.
- ಈಗ ಚಾಟ್‌ಬಾಟ್ ಪಟ್ಟಿಗಳು ನಿಮ್ಮ ಡಿಜಿಲಾಕರ್ ಖಾತೆಯೊಂದಿಗೆ ಲಿಂಕ್ ಮಾಡಲಾದ ಎಲ್ಲಾ ದಾಖಲೆಗಳನ್ನು ನಿಮಗೆ ತೋರಿಸುತ್ತದೆ. ನೀವು ಡೌನ್‌ಲೋಡ್ ಮಾಡಲು ಬಯಸುತ್ತಿರುವ ಡಾಕ್ಯುಮೆಂಟ್ ಸಂಖ್ಯೆಯನ್ನು ಟೈಪ್ ಮಾಡಿ ಮತ್ತೆ ಕಳುಹಿಸಿದರೆ PDF ರೂಪದಲ್ಲಿ ನಿಮ್ಮ ದಾಖಲೆ ಸಿಗುತ್ತದೆ.