Anganavadi: SSLC ಪಾಸ್ ಆದ ಮಹಿಳಾ ಅಭ್ಯರ್ಥಿಗಳಿಂದ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ.! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.!

Anganavadi

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಡಿ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಸಹಾಯಕಿ ಹಾಗೂ ಅಂಗನವಾಡಿ(Anganavadi) ಕಾರ್ಯಕರ್ತೆ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಅಂತೆಯೇ 2025 ನೇ ಸಾಲಿನಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ತೆರವಾಗುವ, ವಿವಿಧ ಗ್ರಾಮಗಳಲ್ಲಿ ಖಾಲಿ ಇರುವ ಸುಮಾರು 200 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.

WhatsApp Group Join Now
Telegram Group Join Now

ಈ ಹುದ್ದೆಗಳಿಗೆ ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು ಯಾರು ಅರ್ಜಿ ಸಲ್ಲಿಸಬಹುದು? ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ? ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಕಡೆಯ ದಿನಾಂಕ ಏನು? ಎನ್ನುವ ನೇಮಕಾತಿ ಪ್ರಕಟಣೆಯಲ್ಲಿರುವ ಪ್ರಮುಖ ಅಂಶಗಳನ್ನು ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇವೆ ತಪ್ಪದೇ ಈ ಉದ್ಯೋಗ ಮಾಹಿತಿಯನ್ನು ಹೆಚ್ಚಿನ ಜನರು ಶೇರ್ ಮಾಡಿ.

ನೇಮಕಾತಿ ಸಂಸ್ಥೆ:- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಹುದ್ದೆ ಹೆಸರು:-
* ಅಂಗನವಾಡಿ ಕಾರ್ಯಕರ್ತೆಯರು
* ಅಂಗನವಾಡಿ ಸಹಾಯಕಿಯರು

ಒಟ್ಟು ಹುದ್ದೆಗಳ ಸಂಖ್ಯೆ:- 219 ಹುದ್ದೆಗಳು

ಉದ್ಯೋಗ ಸ್ಥಳ:- ಚಾಮರಾಜನಗರ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ…

ವೇತನ ಶ್ರೇಣಿ:- ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ತಕ್ಕ ಹಾಗೆ ಗೌರವ ಸಂಭಾವನೆ ಸಿಗುತ್ತದೆ.

ಶೈಕ್ಷಣಿಕ ವಿದ್ಯಾರ್ಹತೆ:-

* ಅಂಗನವಾಡಿ ಕಾರ್ಯಕರ್ತೆಯ ಹುದ್ದೆಗಳಿಗೆ ದ್ವಿತೀಯ PUC ಉತ್ತೀರ್ಣರಾದ ಮಹಿಳೆಯರು ಅರ್ಜಿ ಸಲ್ಲಿಸಬಹುದು ಇದರೊಂದಿಗೆ ಕನ್ನಡ ಭಾಷಾಜ್ಞಾನ ಹೊಂದಿರಬೇಕು
* ಅಂಗನವಾಡಿ ಸಹಾಯಕರು ಹುದ್ದೆಗಳಿಗೆ 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

ವಯೋಮಿತಿ:-
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 19 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷಗಳು

ವಯೋಮಿತಿ ಸಡಿಲಿಕೆ:-
* SC / ST ಅಭ್ಯರ್ಥಿಗಳಿಗೆ 5 ವರ್ಷಗಳು
* OBC ಅಭ್ಯರ್ಥಿಗಳಿಗೆ 3 ವರ್ಷಗಳು
* ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು

ಅರ್ಜಿ ಸಲ್ಲಿಸುವ ವಿಧಾನ:-
* https://karnemakaone.kar.nic in ಈ ವೆಬ್ ಸೈಟ್ ಗೆ ಭೇಟಿ ನೀಡಿ
* ಕೇಳಲಾಗಿರುವ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಅಗತ್ಯದ ದಾಖಲೆಗಳ ಸ್ಕ್ಯಾನ್ ಕಾಪಿ ಅಪ್ಲೋಡ್ ಮಾಡಿ ಮತ್ತು ವೈಯುಕ್ತಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ

ಆಯ್ಕೆ ವಿಧಾನ:-

* ಅರ್ಜಿ ಸಲ್ಲಿಸಿದ ಎಲ್ಲಾ ಆಕಾಂಕ್ಷಿಗಳ ದಾಖಲೆಗಳನ್ನು ಪರಿಶೀಲಿಸಿ ಮೆರಿಟ್ ಪಟ್ಟಿಯನ್ನು ತಯಾರಿಸುತ್ತಾರೆ
* ಜೊತೆಗೆ ಕೆಲವರ್ಗಕ್ಕೆ ಮೀಸಲಾತಿ ಇರುವುದರಿಂದ ಹೆಚ್ಚುವರಿ ಬೋನಸ್ ಅಂಕಗಳು ಕೂಡ ಇದರೊಂದಿಗೆ ಸೇರ್ಪಡೆ ಆಗುತ್ತದೆ
* ಅವಿವಾಹಿತರು, ವಿಚ್ಛೇದಿತರು, ವಿಧವೆಯರು ಅಸಿಡ್ ದಾಳಿಗೆ ತುತ್ತಾಗ ಮಹಿಳೆಯರು ಆತ್ಮಹತ್ಯೆ ಒಳಗಾದ ರೈತನ ಪತ್ನಿ ಇತ್ಯಾದಿ ವರ್ಗಕ್ಕೆ ಶೇ. 5% ಬೋನಸ್ ಅಂಕಗಳನ್ನು ನೀಡುತ್ತಾರೆ
* ಈ ವಿಚಾರದ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಬೇಕಾಗಿದ್ದರು ಹತ್ತಿರದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ನೀಡಿ.

ಬೇಕಾಗುವ ದಾಖಲೆಗಳು:-

  •  ಆಧಾರ್ ಕಾರ್ಡ್
  • ಜನನ ಪ್ರಮಾಣ ಪತ್ರ
  •  ವಾಸಸ್ಥಳ ದೃಢೀಕರಣ ಪತ್ರ
  •  SSLC & PUC ಅಂಕಪಟ್ಟಿ
  • ಮೀಸಲಾತಿಗೆ ಸಂಬಂಧಪಟ್ಟ ದಾಖಲೆಗಳು
  • ಇತ್ತೀಚಿನ ಭಾವಚಿತ್ರ ಮತ್ತು ಸಹಿ
  • ಇನ್ನಿತರ ಪ್ರಮುಖ ದಾಖಲೆಗಳು

ಪ್ರಮುಖ ದಿನಾಂಕ ಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – ಈಗಾಗಲೇ ಆರಂಭಗೊಂಡಿದೆ
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 07 ಫೆಬ್ರವರಿ 2025

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment