BESCOM Recruitment: KPTCL ನೇಮಕಾತಿ 510 ಹುದ್ದೆಗಳಿಗೆ ಅರ್ಜಿ ಆಹ್ವಾನ

BESCOM

ಇತ್ತೀಚಿನ ದಿನಗಳಲ್ಲಿ‌ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು (Job opportunity) ಹೆಚ್ಚಾಗಿ ತೆರೆದುಕೊಳ್ಳುತ್ತಲೇ ಇವೆ. ಹಾಗೆಯೇ ಇದೀಗ ವಿದ್ಯುತ್ ಸರಬರಾಜು ಕಂಪನಿ (Electricity Supply Company Limited) ಯಾಗಿರುವ ಬೆಸ್ಕಾಂ (BESCOM) ಖಾಲಿಯಿರುವ 510 ಹುದ್ದೆಗಳಿಗೆ (Job) ಅರ್ಜಿ (Application) ಆಹ್ವಾನಿಸಿದೆ. ಹಾಗಾದರೆ, ಅರ್ಜಿ ಸಲ್ಲಿಸಬಯಸುವವರು ಯಾವೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಹಾಗೂ ಮಾಸಿಕ ವೇತನ ಎಷ್ಟಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

WhatsApp Group Join Now
Telegram Group Join Now

ಹೀಗಾಗಿ, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು(Candidates) ಈ ಕೂಡಲೇ ಆನ್‌ಲೈನ್‌​ ಮೂಲಕ ಅರ್ಜಿ ಹಾಕಿ. ಕರ್ನಾಟಕ ಸರ್ಕಾರದ ಉದ್ಯೋಗ(Job) ಮಾಡ ಬಯಸುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ (Bangalore Electricity Supply Company Limited) ಕರ್ನಾಟಕ ಸರ್ಕಾರದ ಸಂಪೂರ್ಣ ಸ್ವಾಮ್ಯಕ್ಕೆ ಒಳಪಟ್ಟಿದೆ. ಇಲ್ಲಿ ಪ್ರಸ್ತುತ ಅಗತ್ಯ ಇರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ನೇಮಕ ಪ್ರಕಟಣೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಡಿಪ್ಲೋಮಾ, ಬಿಇ, ಬಿ.ಟೆಕ್, ಬಿಎ, ಇತರೆ ಯಾವುದೇ ಡಿಗ್ರಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ.

ಎಲ್ಲಾ ಬ್ರ್ಯಾಂಚ್‌ಗಳಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ಈ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಮಾಸಿಕ ಸ್ಟೈಫಂಡ್‌ ಅನ್ನು ನೀಡಲಾಗುತ್ತದೆ. ಹುದ್ದೆಗಳ ಕುರಿತು ಕಂಪ್ಲೀಟ್ ಡೀಟೇಲ್ಸ್‌ ಅನ್ನು ಕೆಳಗಿನಂತೆ ನೀಡಲಾಗಿದ್ದು, ಓದಿಕೊಂಡು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ 2024-25ನೇ ಸಾಲಿನ ಇಂಜಿನಿಯರಿಂಗ್ ಗ್ರಾಜುಯೇಟ್ಸ್‌ / ನಾನ್‌ ಇಂಜಿನಿಯರಿಂಗ್ ಗ್ರಾಜುಯೇಟ್ಸ್‌ / ಡಿಪ್ಲೋಮಾ ಟೆಕ್ನೀಷಿಯನ್‌ಗಳನ್ನು ಭರ್ತಿ ಮಾಡುತ್ತಿದೆ. ಬಿ.ಇ. / ಬಿ.ಟೆಕ್ – ಇ ಅಂಡ್ ಇ ಇಂಜಿನಿಯರಿಂಗ್ 130, ಬಿ.ಎ/ ಬಿ.ಎಸ್ಸಿ/ ಬಿಕಾಂ/ ಬಿಬಿಎ/ಬಿಸಿಎ/ ಬಿಬಿಎಮ್/ ಬಿ.ಇ./ ಬಿ.ಟೆಕ್ (ಇ&ಇ ಇಂಜಿನಿಯರಿಂಗ್ ಹೊರತುಪಡಿಸಿ) 305, ಡಿಪ್ಲೋಮಾ ಪಾಸದವರಿಗೆ 75 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಬಿ.ಇ. / ಬಿ.ಟೆಕ್ – ಇ ಅಂಡ್ ಇ ಇಂಜಿನಿಯರಿಂಗ್ 9,008 ರೂಪಾಯಿ, ಬಿ.ಎ/ ಬಿ.ಎಸ್ಸಿ/ ಬಿಕಾಂ/ ಬಿಬಿಎ/ಬಿಸಿಎ/ ಬಿಬಿಎಮ್/ ಬಿ.ಇ./ ಬಿ.ಟೆಕ್ (ಇ&ಇ ಇಂಜಿನಿಯರಿಂಗ್ ಹೊರತುಪಡಿಸಿ 9,008 ರೂಪಾಯಿ, ಡಿಪ್ಲೋಮಾ ಪಾಸಾದ ಅಭ್ಯರ್ಥಿಗಳಿಗೆ ಮಾಸಿಕ 8,000 ರೂಪಾಯಿ ವೇತನ ನೀಡಲಾಗುತ್ತದೆ.

ಹುದ್ದೆವಾರು ವಿದ್ಯಾರ್ಹತೆ ವಿವರ

ಟೆಕ್ನಿಕಲ್ ಗ್ರಾಜುಯೇಟ್ಸ್‌ ಅಪ್ರೆಂಟಿಸ್‌ ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು ಬಿ.ಇ. / ಬಿ.ಟೆಕ್ – ಇ ಅಂಡ್ ಇ ಇಂಜಿನಿಯರಿಂಗ್ ಟೆಕ್ನಿಕಲ್ ಕೋರ್ಸ್‌ಗಳನ್ನು ಮಾಡಿರಬೇಕಾಗುತ್ತದೆ. ನಾನ್‌ ಇಂಜಿನಿಯರಿಂಗ್ ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗೆ ಬಿ.ಎ/ ಬಿ.ಎಸ್ಸಿ/ ಬಿಕಾಂ/ ಬಿಬಿಎ/ಬಿಸಿಎ/ ಬಿಬಿಎಮ್, (ಇ&ಇ ಇಂಜಿನಿಯರಿಂಗ್ ಹೊರತುಪಡಿಸಿ) ಪದವಿಗಳನ್ನು ಪಾಸ್‌ ಮಾಡಿರಬೇಕು. ಟೆಕ್ನೀಷಿಯನ್ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು ಯಾವುದೇ ಬ್ರ್ಯಾಂಚ್‌ನಲ್ಲಿ ಡಿಪ್ಲೋಮಾ ಉತ್ತೀರ್ಣರಾಗಿರಬೇಕು.

ಅಭ್ಯರ್ಥಿಗಳಿಗೆ 01 ವರ್ಷ ತರಭೇತಿ ನೀಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ ಫೆಬ್ರವರಿ 1ರಿಂದ ಆರಂಭವಾಗಲಿದ್ದು, ಕೊನೇ ದಿನಾಂಕ ಫೆಬ್ರವರಿ 20 ಆಗಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಇಂಜಿನಿಯರಿಂಗ್ ಪದವೀಧರರು, ಇತರೆ ತಾಂತ್ರಿಕೇತರ ವಿಷಯಗಳ ಪದವೀಧರರು, ಡಿಪ್ಲೊಮಾ ಈ ಎಲ್ಲಾ ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು 2020ರ ನಂತರ ಹುದ್ದೆಗಳಿಗೆ ಸಂಬಂಧಿತ ಶಿಕ್ಷಣಗಳನ್ನು ಪಡೆದಿರಬೇಕು.

ಎಲ್ಲಾ ಗ್ರಾಜುಯೇಟ್ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳಿಗೆ ಬಿಇ/ ಬಿಟೆಕ್ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಟೆಕ್ನಿನಿಷಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಡಿಪ್ಲೊಮಾ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಬೆಸ್ಕಾಂ ನೇಮಕಾತಿ ನಿಯಮಗಳ ಅನ್ವಯ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷಗಳು. ನೇಮಕಾತಿ ನಿಯಮದಂತೆ ವಯೋಮತಿ ಸಡಿಲಿಕೆ ಇರುತ್ತದೆ.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಯನ್ನು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ ಅಧಿಕೃತ ವೆಬ್‌ಸೈಟ್ https://bescom.karnataka.gov.in ಗೆ ಭೇಟಿ ನೀಡಬಹುದಾಗಿದೆ. ಶಾರ್ಟ್‌ ಲಿಸ್ಟ್‌ ಆದ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.

ಮೂಲ ದಾಖಲೆಗಳ ಪರಿಶೀಲನೆ ವಿಳಾಸ BESCOM, HRD Centre, 1st Floor, Crescent Tower, Crescent Road, Near Mallige Nursing Home, Race Course, Bangalore 560001 ಆಗಿದೆ.

ಪ್ರಮುಖ ದಿನಾಂಕಗಳು:

– ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಪ್ರಾರಂಭ ದಿನಾಂಕ: ಫೆಬ್ರವರಿ 01, 2025.
– ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 20, 2025.

ಆಯ್ಕೆ ವಿಧಾನ

ಅಭ್ಯರ್ಥಿಗಳನ್ನು ನಿಗದಿತ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಲಾಗುತ್ತದೆ. ಅಪ್ರೆಂಟಿಸ್‌ ಹುದ್ದೆಗಳಿಗೆ ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತದ ವೆಬ್‌ಸೈಟ್ ವಿಳಾಸ : https://bescom.org

ಬೆಸ್ಕಾಂ ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವೆಬ್‌ ವಿಳಾಸ : https://nats.education.gov.in/

ನೆನಪಿನಲ್ಲಿರಲಿ

ಇಂಜಿನಿಯರಿಂಗ್ ಪದವೀಧರರು, ಇತರೆ ತಾಂತ್ರಿಕೇತರ ವಿಷಯಗಳ ಪದವೀಧರರು, ಡಿಪ್ಲೊಮಾ ಈ ಎಲ್ಲ ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು, 2020ರ ನಂತರ ಹುದ್ದೆಗಳಿಗೆ ಸಂಬಂಧಿತ ಶಿಕ್ಷಣಗಳನ್ನು ಪಡೆದಿರಬೇಕು. ಹಾಗೆಯೇ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಯನ್ನು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ ಅಧಿಕೃತ ವೆಬ್‌ಸೈಟ್: https://bescom.karnataka.gov.in ನಲ್ಲಿ ಪಡೆಯಬಹುದು.

ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿ ಮಾಡಬೇಕಿಲ್ಲ. ಮೆರಿಟ್ ಲಿಸ್ಟ್ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ. ಆಸಕ್ತ ಮತ್ತು ಅರ್ಹರು ವೆಬ್‌ಸೈಟ್‌ಗೆ ಭೇಟಿ ನೀಡಿ ಸರಿಯಾದ ಇ-ಮೇಲ್ ವಿಳಾಸ, ಮೊಬೈಲ್ ಸಂಖ್ಯೆ ನೀಡಿ ರಿಜಿಸ್ಟರ್ ಮಾಡಿಕೊಳ್ಳಿ. ಬಳಿಕ ಅರ್ಜಿ ಭರ್ತಿ ಮಾಡಿ, ಕೇಳಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ.

BESCOM ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ

ಬೆಸ್ಕಾಂ (ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ) ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವಿತರಣೆಯ ಜವಾಬ್ದಾರಿಯನ್ನು ಹೊಂದಿರುವ ಸರ್ಕಾರಿ ಸ್ವಾಮ್ಯದ ಉಪಯುಕ್ತತೆಯಾಗಿದೆ. ಇದು ವಿಶ್ವಾಸಾರ್ಹ ವಿದ್ಯುತ್ ಪೂರೈಕೆಯನ್ನು ಖಾತ್ರಿಗೊಳಿಸುತ್ತದೆ, ಬಿಲ್ಲಿಂಗ್ ಅನ್ನು ನಿರ್ವಹಿಸುತ್ತದೆ ಮತ್ತು ಗ್ರಾಹಕ ಸೇವೆಗಳನ್ನು ನಿರ್ವಹಿಸುತ್ತದೆ. ಬೆಸ್ಕಾಂ ತನ್ನ ಬೆಳೆಯುತ್ತಿರುವ ನಗರ ಮತ್ತು ಗ್ರಾಮೀಣ ಗ್ರಾಹಕರಿಗೆ ಮೂಲಸೌಕರ್ಯ ಅಭಿವೃದ್ಧಿ, ವಿದ್ಯುತ್ ವಿತರಣೆ ಮತ್ತು ಸಮರ್ಥ ಇಂಧನ ನಿರ್ವಹಣೆಯ ಮೇಲೆ ಕೇಂದ್ರೀಕರಿಸುತ್ತದೆ.

ಆಧುನಿಕ ಆನ್‌ಲೈನ್ ಪಾವತಿ ಆಯ್ಕೆಗಳೊಂದಿಗೆ, ಬೆಸ್ಕಾಂ ವಿದ್ಯುಚ್ಛಕ್ತಿಯು ಬಳಕೆದಾರರ ಅನುಕೂಲತೆಯನ್ನು ಹೆಚ್ಚಿಸುತ್ತದೆ, ಗ್ರಾಹಕರು ತಮ್ಮ ವಿದ್ಯುತ್ ಬಿಲ್‌ಗಳನ್ನು ಸುಲಭವಾಗಿ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಮತ್ತಷ್ಟು ಗ್ರಾಹಕರ ತೃಪ್ತಿಗಾಗಿ, ಬಜಾಜ್ ಫಿನ್‌ಸರ್ವ್‌ನಲ್ಲಿನ BBPS ಪ್ಲಾಟ್‌ಫಾರ್ಮ್ ಬಜಾಜ್ ಪೇ ಮೂಲಕ ವಿದ್ಯುತ್ ಬಿಲ್ ಪಾವತಿಯನ್ನು ಸುಲಭವಾಗಿ ಮಾಡಬಹುದು

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment