Bhima Sakhi Yojana: SSLC ಪಾಸ್ ಆದವರಿಗೆ ಉದ್ಯೋಗಾವಕಾಶ.! LIC ಭಿಮಾಸಖಿ ನೇಮಕಾತಿಗೆ ಅರ್ಜಿ ಆಹ್ವಾನ

Bhima Sakhi Yojana

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) 2024ರ ಡಿಸೆಂಬರ್ 9 ರಂದು ದೇಶದ ಮಹಿಳೆಯರ ಸಲುವಾಗಿ LIC ಬಿಮಾಸಖಿ ಯೋಜನೆ(Bhima Sakhi Yojana) (LIC Mimsakhi Scheme) ಘೋಷಿಸಿದರು. ದೇಶದ ಮಹಿಳೆಯರಿಗಾಗಿಯೇ ರೂಪಿಸಿರುವ ವಿಶೇಷ ಯೋಜನೆ ಇದಾಗಿದೆ. ಈ ಯೋಜನೆಗೆ ನೋಂದಾಯಿಸಿಕೊಳ್ಳುವ ಆಸಕ್ತ ಗ್ರಾಮೀಣ ಭಾಗದ ಮಹಿಳೆಯರು ಸ್ಟೈಫಂಡ್ ಹಾಗೂ ಆಕರ್ಷಕ ಕಮಿಷನ್ ಜೊತೆಗೆ LIC ವಿಮಾ ಪಾಲಿಸಿ ಬಗ್ಗೆ ತರಬೇತಿ ಪಡೆದು ಭವಿಷ್ಯದಲ್ಲಿ ಗ್ರಾಮೀಣ ಭಾಗದಲ್ಲಿ ಈ ವಿಮೆಗಳ ಕುರಿತ ಜಾಗೃತಿ ಮೂಡಿಸುತ್ತಾರೆ.

WhatsApp Group Join Now
Telegram Group Join Now

ಈ ವಿಮಾಸಖಿಯರು ಗ್ರಾಮೀಣ ಭಾಗದಲ್ಲಿ ಜನಸಾಮಾನ್ಯರ ಆದಾಯಕ್ಕೆ ಅನುಗುಣವಾದಂತೆ ರೂಪಿಸಾಗಲಾಗುವ ಯೋಜನೆಗಳ ಮಾಹಿತಿಯನ್ನು LIC ಯಿಂದ ಗ್ರಾಹಕರಿಗೆ ತಲುಪುವವರೆಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಬಹಳ ವಿಶೇಷ ಎನಿಸುತ್ತಿರುವ ಈ ಯೋಜನೆಗೆ ಒಂದು ಲಕ್ಷ ಮಹಿಳೆಯರನ್ನು ಬಿಮಾಸಖಿಯರನ್ನಾಗಿ ನೇಮಿಸಿಕೊಳ್ಳಲು LIC ನಿರ್ಧರಿಸಿದೆ. ನೋಂದಾಯಿಸಿಕೊಳ್ಳುವುದು ಹೇಗೆ? ಅರ್ಹತೆಗಳೇನು ಮತ್ತು ಯೋಜನೆ ಕುರಿತ ಇನ್ನಷ್ಟು ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ಓದಿ.

ನೇಮಕಾತಿ ಸಂಸ್ಥೆ:- ಜೀವ ವಿಮಾನ ನಿಗಮ (LIC)

ಯೋಜನೆಯ ಹೆಸರು:- LIC ಬಿಮಾಸಖಿ ಯೋಜನೆ(Bhima Sakhi Yojana)

ಯೋಜನೆಯ ಉದ್ದೇಶ:-

  •  ಮಹಿಳೆಯರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಕೊಡುವುದು
  •  ವಿಮಾ ಸಖಿಯರಿಂದ LIC ಜಾರಿಗೊಳಿಸುವ ವಿಶೇಷ ಯೋಜನೆಗಳ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುವುದು
  •  ಈ ಮೂಲಕ ಜನಸಾಮಾನ್ಯನಿಗೂ ಕೂಡ ಕಡಿಮೆ ಬಜೆಟ್ ಗೆ ವಿಮೆ ಸಾಧ್ಯವಾಗುವ ಹಾಗೆ ಅವಕಾಶ ಕಲ್ಪಿಸಿಕೊಡುವುದು

ತರಬೇತಿ ಅವಧಿ:- 3 ವರ್ಷಗಳು

ತರಬೇತಿ ಪ್ರಯೋಜನಗಳು:-

* 3 ವರ್ಷಗಳ ಸ್ಟೈಫಂಡ್‌ ಮತ್ತು ಕಮಿಷನ್ ನೊಂದಿಗೆ ವಿಮಾ ಏಜೆಂಟ್‌ಗಳಾಗಲು ತರಬೇತಿ ಸಿಗಲಿದೆ
* 3 ವರ್ಷಗಳ ನಂತರ ಮಹಿಳೆಯರು LIC ವಿಮಾ ಏಜೆಂಟ್‌ಗಳಾಗಿ (ಬಿಮಾ ಸಖಿಗಳು) ಕೆಲಸ ಮಾಡಬಹುದು
* ಹೆಚ್ಚಿನ ವಿದ್ಯಾಭ್ಯಾಸ ಹೊಂದಿದ್ದಲ್ಲಿ LIC ಅಭಿವೃದ್ಧಿ ಅಧಿಕಾರಿ ಮತ್ತು ಇನ್ನಿತರ ಪ್ರಮೋಷನ್ ಗಳಿಗೂ ಕೂಡ ಪಾತ್ರರಾಗಬಹುದು
* ಮಹಿಳೆಯರು ತಾವು ಇರುವ ಸ್ಥಳದಲ್ಲಿಯೇ
ಹೊಂದಿಕೊಳ್ಳುವ ಸಮಯದಲ್ಲಿ ಈ ಕಾರ್ಯ ನಿರ್ವಹಿಸಬಹುದು

ಸ್ಟ್ರೈಫಂಡ್ ವಿವರ:-
* ಮೊದಲನೇ ವರ್ಷ – ರೂ. 7,000
* ಎರಡನೇ ವರ್ಷ – ರೂ. 6,000
* ಮೂರನೇ ವರ್ಷ – ರೂ. 5,000

ಅರ್ಹತೆಗಳು:-

  • ಭಾರತೀಯ ನಾಗರಿಕರಾಗಿರುವ 18 ರಿಂದ 70 ವರ್ಷದೊಳಗಿನ ಮಹಿಳೆಯರು ಅರ್ಜಿ ಸಲ್ಲಿಸಬಹುದು
  • ಮಹಿಳೆಯ ಕನಿಷ್ಠ ವಿದ್ಯಾರ್ಹತೆ 10ನೇ ತರಗತಿ ತೇರ್ಗಡೆಯಾಗಿರಬೇಕು.
  •  ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು.
  •  LIC ಯ ಅಸ್ತಿತ್ವದಲ್ಲಿರುವ ಏಜೆಂಟ್‌ಗಳು ಮತ್ತು LIC ಉದ್ಯೋಗಿಗಳಿಗೆ ಸಂಬಂಧಿಸಿದ ಮಹಿಳೆಯರು (ಸಂಗಾತಿಗಳು, ಮಕ್ಕಳು, ದತ್ತು ಪಡೆದ ಮತ್ತು ಮಲಮಕ್ಕಳು, ಪೋಷಕರು, ಸಹೋದರಿಯರು ಅರ್ಜಿ ಸಲ್ಲಿಸಲು ಅರ್ಹರಲ್ಲ)
  •  ಮಹಿಳೆಯರು LIC ನಿವೃತ್ತ ಉದ್ಯೋಗಿಗಳಾಗಿರಬಾರದು ಮತ್ತು LIC ಮಾಜಿ ಏಜೆಂಟ್ ಗಳಾಗಿರಬಾರದು, ಅಸ್ತಿತ್ವದಲ್ಲಿರುವ ಏಜೆಂಟ್ ಗಳಿಗೂ ಅರ್ಜಿ ಸಲ್ಲಿಸಲು ಅವಕಾಶವಿಲ್ಲ

ಅರ್ಜಿ ಸಲ್ಲಿಸುವ ವಿಧಾನ:-

* LIC ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು
* 9 ಡಿಸೆಂಬರ್ 2024 ರಿಂದಲೂ ಅರ್ಜಿ ಸ್ವೀಕರಿಸಲಾಗುತ್ತಿದೆ. ಅರ್ಜಿ ಸಲ್ಲಿಸಲು ನಿಗದಿ ಆಗಿರುವ ಕೊನೆ ದಿನಾಂಕದ ಬಗ್ಗೆ ಇನ್ನೂ ಘೋಷಣೆಯಾಗಿಲ್ಲ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment