Bus Ticket
ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ರಾಜ್ಯದ ಗಡಿಯೊಳಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಟ್ಟು ದೇಶದಾದ್ಯಂತ ಸುದ್ದಿಯಾಗಿದ್ದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ನಿಗಮವು ಈಗ ಕರ್ನಾಟಕ ರಾಜ್ಯದ ಪುರುಷ ಪ್ರಯಾಣಿಕರಿಗೆ ಶಾ’ಕ್ ನೀಡಿದೆ.
ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಸರ್ಕಾರಿ ಬಸ್ ಪ್ರಯಾಣ ದರಗಳನ್ನು (government Bus Ticket price increase) ಪರಿಷ್ಕರಿಸಿ ಏರಿಕೆ ಮಾಡುವ ವಿಚಾರದ ಪ್ರಸ್ತಾವನೆಗೆ ಅನುಮೋದನೆ ದೊರೆತಿದ್ದು ಪರಿಣಾಮವಾಗಿ BMTC, KSRTC, KWKRTC ಮತ್ತು KKRTC ಬಸ್ ಗಳಲ್ಲಿ ಪುರುಷರ ಟಿಕೆಟ್ ದರವು ಹಿಂದಿಗಿಂತ ಶೇಕಡ 15% ರಷ್ಟು ಹೆಚ್ಚಾಗಲಿದೆ.
ಡೀಸೆಲ್ ಬೆಲೆ ಏರಿಕೆಯನ್ನು ಪ್ರಮುಖ ಕಾರಣವಾಗಿ ನೀಡಿರುವ ಸರ್ಕಾರ 2020 ರ ನಂತರ ಸರ್ಕಾರಿ ಬಸ್ ದರ ಪರಿಷ್ಕರಣೆಯಾಗಿರದ ಕಾರಣ ಈ ಬಗ್ಗೆ ಮೊದಲೇ ಚರ್ಚಿಸಲಾಗಿತ್ತು ಎನ್ನುವ ಸಬೂಬು ಕೂಡ ನೀಡಿದೆ. ಜನವರಿ 2ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇಕಡಾ 15%ರಷ್ಟು ಏರಿಕೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತ್ತಿದ್ದು.
ಶೀಘ್ರವೇ ಸರ್ಕಾರದಿಂದ ಈ ಕುರಿತಾಗಿ ಅಧಿಕೃತ ಆದೇಶ ಹೊರ ಬೀಳುವ ಸಾಧ್ಯತೆ ಇದೆ. ಬಸ್ ಟಿಕೆಟ್ ದರ ಹೆಚ್ಚಳದ ಕುರಿತು ಕಳೆದ ಆಗಸ್ಟ್ ತಿಂಗಳಿಂದಲೂ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ನಾಲ್ಕು ಸಾರಿಗೆ ನಿಗಮಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಅಂತಿಮವಾಗಿ ಹೊಸ ವರ್ಷದಲ್ಲಿ ಸರ್ಕಾರ ಇಂತಹದೊಂದು ನಿರ್ಧಾರಕ್ಕೆ ಸರ್ಕಾರ ಬಂದಿದೆ.
ನಿಗಮಗಳು ಸರ್ಕಾರಕ್ಕೆ ತಮ್ಮ ಸ್ಥಿತಿಗತಿಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಟಿಕೆಟ್ ದರ ಹೆಚ್ಚಳ ಮಾಡುವಂತೆ ಕೋರಿ ಮನವಿ ಮಾಡುತ್ತಲೇ ಬಂದಿದ್ದವು. BMTCಯು 2024ರ ಆಗಸ್ಟ್ ತಿಂಗಳಿನಲ್ಲಿ ಶೇಕಡಾ 42% ರಷ್ಟು ಟಿಕೆಟ್ ದರ ಹೆಚ್ಚಳ ಮಾಡುವಂತೆ ಮಾನ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಈ ಹಿಂದೆ 2014 ರಲ್ಲಿ ಟಿಕೆಟ್ ದರ ಹೆಚ್ಚಳ ಆಗಿತ್ತು ಮತ್ತೆ ಹೆಚ್ಚಳ ಆಗಿರಲಿಲ್ಲ. ಹೀಗಾಗಿ 10 ವರ್ಷಗಳ ನಂತರ BMTC ಬಸ್ ದರ ಹೆಚ್ಚಿಗೆ ಮಾಡಲಾಗಿದೆ. KSRTC ಯು ಸಹ 2024ರ ಆಗಸ್ಟ್ ನಲ್ಲಿ 25%-30% ರಷ್ಟು ಟಿಕೆಟ್ ದರ ಹೆಚ್ಚಳ ಮಾಡಲು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಕೊನೆಯ ಬಾರಿ 2020ರಲ್ಲಿ ಫೆಬ್ರುವರಿಯಲ್ಲಿ KSRTC ಟಿಕೆಟ್ ದರ ಹೆಚ್ಚಳ ಮಾಡಲಾಗಿತ್ತು.
KWRTC ಕೂಡ ಹೊರತೇನಲ್ಲ. ಶೇಕಡಾ 30% ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ KWRTC ಕಳೆದ ಆಗಸ್ಟ್ನಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. 2020 ರ ಫೆಬ್ರುವರಿಯಲ್ಲಿ ಕೊನೆಯದಾಗಿ KWRTCರಲ್ಲಿ ಟಿಕೆಟ್ ದರ ಹೆಚ್ಚಳ ಮಾಡಲಾಗಿತ್ತು. KKRTC ಲಯ ಕೂಡ ಶೇಕಡಾ 25% – 30%ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಕೋರಿ ಆಗಸ್ಟ್ನಲ್ಲೇ ಪ್ರಸ್ತಾವನೆ ಸಲ್ಲಿಸಿತ್ತು.
KKRTC ಕೂಡ 2020ರ ಫೆಬ್ರುವರಿಯಲ್ಲಿ ಟಿಕೆಟ್ ದರ ಹೆಚ್ಚಿಸಲಾಗಿತ್ತು. ಮತ್ತೊಂದು ಕಡೆ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅನುಕೂಲತೆ ಮಾಡಿಕೊಡುತ್ತಿರುವುದು ಪ್ರಶಂಸಿಸುವ ವಿಚಾರ ಆಗಿದ್ದರೂ ಪುರುಷ ಪ್ರಯಾಣಿಕರ ಟಿಕೆಟ್ ದರ ಹೆಚ್ಚಿಗೆ ಮಾಡಿರುವುದಕ್ಕೆ ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ