Canara Bank: ಕೆನರಾ ಬ್ಯಾಂಕ್ ನೇಮಕಾತಿ.! ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಿ.!

Canara Bank

ಸಾಮಾನ್ಯವಾಗಿ ಪದವಿ ಮುಗಿದ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಸರ್ಕಾರಿ ಹುದ್ದೆ ಪಡೆಯುವತ್ತ ಅಭ್ಯರ್ಥಿಗಳು ಮನಸ್ಸು ಮಾಡುತ್ತಾರೆ. ಹಾಗೆಯೇ ಸಮಾನಾಂತರವಾಗಿ ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗಗಳ ಬಗ್ಗೆಯೂ ಕೂಡ ಇಷ್ಟೇ ಆಸಕ್ತಿ ಇದೆ. ಯಾಕೆಂದರೆ, ಸರ್ಕಾರಿ ಹುದ್ದೆಗಳಿಗೆ ಇರುವ ಸವಲತ್ತುಗಳಂತೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡುವ ಅಭ್ಯರ್ಥಿಗಳಿಗೂ ಕೂಡ ವಿಶೇಷ ಸವಲತ್ತುಗಳಿರುತ್ತವೆ.

WhatsApp Group Join Now
Telegram Group Join Now

ಅಲ್ಲದೆ ಬ್ಯಾಂಕಿಂಗ್ ಕ್ಷೇತ್ರದ ಕೆಲಸಗಳಲ್ಲಿಯೂ ಉದ್ಯೋಗ ಭದ್ರತೆ ಜೊತೆಗೆ ಹೆಚ್ಚಿನ ರಜೆ ದಿನಗಳು, ಕಡಿಮೆ ಕೆಲಸದ ಒತ್ತಡ, ಉತ್ತಮ ವೇತನ ಶ್ರೇಣಿ ಇತ್ಯಾದಿಗಳು ಇರುವುದರಿಂದ ಯುವಜನತೆಗೆ ಈ ಬಗ್ಗೆ ಬಹಳ ಆಸಕ್ತಿ ಇದೆ ನೀವು ಕೂಡ ಇದೇ ರೀತಿಯಾಗಿ ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗಗಳನ್ನು ಬಯಸುತ್ತಿದ್ದರೆ ಕೆನರಾ ಬ್ಯಾಂಕ್ ವತಿಯಿಂದ ನಿಮಗೆ ಗುಡ್ ನ್ಯೂಸ್ ಇದೆ.

ಅದೇನೆಂದರೆ ಕೆನರಾ ಬ್ಯಾಂಕ್ 2025ರ ಮೊದಲ ನೇಮಕಾತಿ ಬಗ್ಗೆ ನೋಟಿಫಿಕೇಶನ್ ಹೊರಡಿಸಿದೆ. ಈ ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ಓದಿ.

ನೇಮಕಾತಿ ಸಂಸ್ಥೆ:- ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS)

ಉದ್ಯೋಗ ಸಂಸ್ಥೆ:- ಕೆನರಾ ಬ್ಯಾಂಕ್
ಹುದ್ದೆ ಹೆಸರು:- ತಜ್ಞ ಅಧಿಕಾರಿಗಳು(Specialist Officers)

ಹುದ್ದೆಗಳ ವಿವರ:-
  •  ಅಪ್ಲಿಕೇಶನ್ ಡೆವಲಪರ್‌ಗಳು – 7
  •  ನಿರ್ವಾಹಕರು – 2
  •  ಭದ್ರತಾ ವಿಶ್ಲೇಷಕ – 2
  •  ಡೇಟಾ ವಿಶ್ಲೇಷಕ – 1
  •  ಡೇಟಾ ಬೇಸ್ ನಿರ್ವಾಹಕರು – 9
  •  ಡೇಟಾ ಇಂಜಿನಿಯರ್ – 2
  •  ದತ್ತಾಂಶ ಗಣಿಗಾರಿಕೆ ತಜ್ಞ – 2
  • ಡೇಟಾ ವಿಜ್ಞಾನಿ – 2
  •  ನೈತಿಕ ಹ್ಯಾಕರ್ ಮತ್ತು ಪರೀಕ್ಷಕ – 1
  •  ETL (ಎಕ್ಸ್ಟ್ರಾಕ್ಟ್ ಟ್ರಾನ್ಸ್‌ಫಾರ್ಮ್ & ಲೋಡ್) ಸ್ಪೆಷಲಿಸ್ಟ್ – 2
  •  GRC ವಿಶ್ಲೇಷಕ – IT ಆಡಳಿತ, IT ಅಪಾಯ ಮತ್ತು ಅನುಸರಣೆ – 1
  •  ಮಾಹಿತಿ ಭದ್ರತಾ ವಿಶ್ಲೇಷಕ – 2
  •  ನೆಟ್ವರ್ಕ್ ನಿರ್ವಾಹಕರು – 6
  •  ನೆಟ್ವರ್ಕ್ ಭದ್ರತಾ ವಿಶ್ಲೇಷಕ – 1
  •  IT API ನಿರ್ವಹಣೆ ಅಧಿಕಾರಿ – 3
  •  IT ಡೇಟಾಬೇಸ್/PL SQL – 2
  •  IT ಡಿಜಿಟಲ್ ಬ್ಯಾಂಕಿಂಗ್ ಮತ್ತು ಉದಯೋನ್ಮುಖ ಪಾವತಿಗಳು – 2
  •  ವೇದಿಕೆ ನಿರ್ವಾಹಕರು – 1
  •  ಖಾಸಗಿ ಕ್ಲೌಡ್ ಮತ್ತು ವಿಎಂವೇರ್ ನಿರ್ವಾಹಕರು – 1
  •  SOC (ಭದ್ರತಾ ಕಾರ್ಯಾಚರಣೆ ಕೇಂದ್ರ)
  • ವಿಶ್ಲೇಷಕ – 2
  •  ವಾಸ್ತುಶಿಲ್ಪಿ – 1
  •  ಸಿಸ್ಟಮ್ ಅಡ್ಮಿನಿಸ್ಟ್ರೇಟರ್ – 8
ಒಟ್ಟು ಹುದ್ದೆಗಳ ಸಂಖ್ಯೆ:- 60 ಹುದ್ದೆಗಳು

ಉದ್ಯೋಗ ಸ್ಥಳ:- ಕೆನರಾ ಬ್ಯಾಂಕ್ ಮುಖ್ಯ ಕಚೇರಿ ಅಥವಾ ಭಾಅಥವಲ್ಲಿರುವ ಕೆನರಾ ಬ್ಯಾಂಕ್ ನ ಬ್ರಾಂಚ್ ಗಳಲ್ಲಿ

ವೇತನ ಶ್ರೇಣಿ:- ಬ್ಯಾಂಕ್ ನೇಮಕಾತಿ ನಿಯಮಾವಳಿಗಳ ಅನುಸಾರವಾಗಿ ಉತ್ತಮ ಮೊತ್ತದ ಮಾಸಿಕ ವೇತನ ಹಾಗೂ ಇನ್ನಿತರ ಸವಲತ್ತುಗಳು ಇರುತ್ತವೆ

ಶೈಕ್ಷಣಿಕ ವಿದ್ಯಾರ್ಹತೆ:-

* ಅಭ್ಯರ್ಥಿಗಳು ಕನಿಷ್ಠ 60% ಅಂಕಗಳಿಗೆ ಕಡಿಮೆ ಇಲ್ಲದಂತೆ 10ನೇ ತರಗತಿ, 12ನೇ ತರಗತಿ ಹಾಗೂ ಪದವಿಯಲ್ಲಿ ಉತ್ತೀರ್ಣರಾಗಿರಬೇಕು.
* ಹುದ್ದೆಗಳಿಗೆ ಅನುಸಾರ ಪದವಿ, ಸ್ನಾತಕೋತ್ತರ ಪದವಿ, ಪದವಿ, BCA, BE ಅಥವಾ B.Tech ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು

ಅರ್ಜಿ ಸಲ್ಲಿಸುವ ವಿಧಾನ:-

https://ibpsonline.ibps.in ವೆಬ್ ಸೈಟ್ ಗೆ ಭೇಟಿ ನೀಡಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು.

ಆಯ್ಕೆ ವಿಧಾನ:-
ಬ್ಯಾಂಕ್ ನಿಯಮಾವಳಿ ಅನುಸಾರವಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಅರ್ಹರನ್ನು ಆಯ್ಕೆ ಮಾಡಿಕೊಳ್ಳಲಾಗುವುದು

ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – ಈಗಾಗಲೇ ಆರಂಭವಾಗಿದೆ
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 24.01.2025

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment