CBSC
ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (Central Board of Secondary Education) ಭಾರತದ ಸಾರ್ವಜನಿಕ ಮತ್ತು ಖಾಸಗಿ ಶಾಲೆಗಳಿಗೆ ರಾಷ್ಟ್ರೀಯ ಮಟ್ಟದ ಶಿಕ್ಷಣ ನೀಡುವ ಭಾರತ ಸರ್ಕಾರದ ನಿಯಂತ್ರಣದಲ್ಲಿರುವ ಒಂದು ಸಂಸ್ಥೆಯಾಗಿದೆ. ಇಂತಹ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವುದು ಒಂದು ಹೆಮ್ಮೆಯ ಸಂಗತಿ ಹಾಗೂ ಉದ್ಯೋಗ ಭದ್ರತೆ ಇರುವ ವಿಷಯವಾಗಿದೆ.
ಹೀಗಾಗಿ ಅನೇಕರಿಕೆ ಇಲ್ಲಿ ಹುದ್ದೆ ಪಡೆಯಬೇಕೆನ್ನುವ ಪ್ರಬಲವಾದ ಇಚ್ಛೆ ಇದೆ, ನೀವು ಸಹ ಈ ಬಗ್ಗೆ ಪ್ರಯತ್ನ ಪಡುತ್ತಿದ್ದರೆ, ಇಲ್ಲಿ ಉದ್ಯೋಗಿಯಾಗಿ ಸಂಸ್ಥೆಯ ಭಾಗವಾಗಬೇಕೆನ್ನುವ ಇಚ್ಛೆ ಹೊಂದಿದ್ದರೆ ನಿಮಗೆ ಈಗ ಒಂದು ಅದ್ಭುತವಾದ ಅವಕಾಶ ಸಿಗುತ್ತಿದೆ.
ಸಂಸ್ಥೆಯು 2025ರ ಸಾಲಿನ ಮೊದಲ ನೇಮಕಾತಿಯನ್ನು ಘೋಷಿಸಿದೆ ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ? ಯಾವ ಬಗೆಯ ಹುದ್ದೆಗಳು? ಇದಕ್ಕೆ ಮಾನದಂಡಗಳೇನು ಹಾಗೂ ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಇತ್ಯಾದಿ ಸಂಪೂರ್ಣ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ಓದಿ.
ನೇಮಕಾತಿ ಸಂಸ್ಥೆ:- ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSC)
ಹುದ್ದೆ ಹೆಸರು:-
- ಸೂಪರಿಂಟೆಂಡೆಂಟ್
- ಜೂನಿಯರ್ ಅಸಿಸ್ಟೆಂಟ್
ಹುದ್ದೆಗಳ ವಿವರ:-
- ಸೂಪರಿಂಟೆಂಡೆಂಟ್ – 147 ಹುದ್ದೆಗಳು
- ಜೂನಿಯರ್ ಅಸಿಸ್ಟೆಂಟ್ – 70 ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 212 ಹುದ್ದೆಗಳು
ಉದ್ಯೋಗ ಸ್ಥಳ:- CBSC ಆ ದಿನದಲ್ಲಿ ಕಾರ್ಯನಿರ್ವಹಿಸುವಂತಹ ಶಾಲೆಗಳು ಹಾಗೂ ಸಂಸ್ಥೆಯಲ್ಲಿ
ವೇತನ ಶ್ರೇಣಿ:- ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಉತ್ತಮ ಮಟ್ಟದ ಮಾಸಿಕ ವೇತನ ಶ್ರೇಣಿ ನಿಗದಿಯಾಗಿದೆ ಸರಿಸುಮಾರು 63,200/-
ಶೈಕ್ಷಣಿಕ ವಿದ್ಯಾರ್ಹತೆ:-
- ಮೇಲಿನ ಎರಡು ಹುದ್ದೆಗಳಿಗೂ ಅರ್ಜಿ ಸಲ್ಲಿಸಲು ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದೆ.
- 12ನೇ ತರಗತಿ ಅಥವಾ ದ್ವಿತೀಯ PUC ಅಥವಾ ಡಿಪ್ಲೋಮೋ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರುವಂತಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ವಯೋಮಿತಿ:-
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
- ಸೂಪರಿಂಟೆಂಡೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 30 ವರ್ಷಗಳು
- ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 27 ವರ್ಷಗಳು
ವಯೋಮಿತಿ ಸಡಿಲಿಕೆ:–
- OBC ಅಭ್ಯರ್ಥಿಗಳಿಗೆ ಮೂರು ವರ್ಷಗಳು
- SC/ST ಅಭ್ಯರ್ಥಿಗಳಿಗೆ ಐದು ವರ್ಷಗಳು
- ಅಂಗವಿಕಲ ಅಭ್ಯರ್ಥಿಗಳಿಗೆ 10 ರಿಂದ 15 ವರ್ಷಗಳ ವಯೋಮಿತಿ ಸರಿಯಾಗಿ ನೀಡಲಾಗಿದೆ
ಅರ್ಜಿ ಸಲ್ಲಿಸುವ ವಿಧಾನ:-
- ಆನ್ಲೈನ್ ವಿಧಾನದಲ್ಲಿಯೇ ಅರ್ಜಿ ಸಲ್ಲಿಸಬೇಕು (cbse.gov.in)
- ಅರ್ಜಿ ಫಾರಂ ನಲ್ಲಿ ಕೇಳಲಾಗಿರುವ ಎಲ್ಲ ಪ್ರಮುಖ ಮಾಹಿತಿಗಳನ್ನು ಭರ್ತಿ ಮಾಡಿ ನಿಮ್ಮ ವರ್ಗಕ್ಕೆ ಅನುಕೂಲವಾಗುವ ಅರ್ಜಿ ಶುಲ್ಕವನ್ನು ಪಾವತಿಸಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ತಿಗೊಳಿಸಿ.
- ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪ್ರತಿಪಡೆಯಿರಿ ಮುಂದಿನ ದಿನಗಳಲ್ಲಿ ನಿಮಗೆ ಇದರ ಅವಶ್ಯಕತೆ ಬರುತ್ತದೆ.
ಆಯ್ಕೆ ವಿಧಾನ:-
- ಸ್ಪರ್ಧಾತ್ಮಕ ಪರೀಕ್ಷೆ ವಿಧಾನವನ್ನು ಅನುಸರಿಸಿ ಅರ್ಹರನ್ನು ಆಯ್ದುಕೊಳ್ಳಲಾಗುವುದು.
- ಲಿಖಿತ ರೂಪದ ಪರೀಕ್ಷೆ/ ಸ್ಕಿಲ್ ಟೆಸ್ಟ್ / ನೇರ ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆ ನಡೆಸಿ ಆಯ್ದುಕೊಳ್ಳಲಾಗುತ್ತದೆ.
ಅರ್ಜಿ ಶುಲ್ಕ:-
- SC, ST ಮಹಿಳೆಯರು ಮತ್ತು ಪ್ರವರ್ಗ ಒಂದು ವರ್ಗಕ್ಕೆ ಯಾವುದೇ ಶುಲ್ಕ ಇರುವುದಿಲ್ಲ
- ಉಳಿದ ಅಭ್ಯರ್ಥಿಗಳಿಗೆ ರೂ.800
ಪ್ರಮುಖ ದಿನಾಂಕಗಳು:-
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – ಈಗಾಗಲೇ ಆರಂಭವಾಗಿದೆ
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 31 ಜನವರಿ 2025.