DCC
ನೀವೇನಾದರೂ ಬ್ಯಾಂಕಿಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಹುಡುಕುತ್ತಿದ್ದರೆ ಹಾಗೂ ಪ್ರಕೃತಿ ಪ್ರಿಯರಾಗಿದ್ದು ನಗರ, ಪಟ್ಟಣ ಪ್ರದೇಶಗಳ ಗದ್ದಲ ಕಲುಷಿತತೆಯಿಂದ ದೂರ ಹೋಗಿ ನಿಸರ್ಗದ ಮಡಿಲಿನಂತಿರುವ ಪ್ರದೇಶಗಳಲ್ಲಿ ಕೆಲಸ ಸಿಕ್ಕರೆ ಸಾಕು ಎಂದುಕೊಳ್ಳುತ್ತಿದ್ದರೆ ಅಂತಹ ಅಭ್ಯರ್ಥಿಗಳಿಗೆಲ್ಲ ಒಂದು ಗುಡ್ ನ್ಯೂಸ್ ಇದೆ.
ಕೊಡಗು ಜಿಲ್ಲಾ ಸಹಕಾರಿ ಬ್ಯಾಂಕ್ (Kodagu DCC Bank) ತನ್ನಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಇಂತಹ ಅವಕಾಶವನ್ನು ನೀಡುತ್ತಿದೆ. ಈ ಹುದ್ದೆಗಳಿಗೆ ಯಾರು ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸುವ ವಿಧಾನ ಹೇಗೆ ನಡೆಯುತ್ತದೆ ಎಂಬ ಸಂಪೂರ್ಣ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ಓದಿ.
ನೇಮಕಾತಿ ಸಂಸ್ಥೆ:- ಕೊಡಗು ಜಿಲ್ಲಾ ಸಹಕಾರಿ ಬ್ಯಾಂಕ್
ಹುದ್ದೆ ಹೆಸರು:- ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 32 ಹುದ್ದೆಗಳು
ಉದ್ಯೋಗ ಸ್ಥಳ:- ಕೊಡಗು
ವೇತನ ಶ್ರೇಣಿ:-
* ಸಹಕಾರಿ ಬ್ಯಾಂಕ್ ನೇಮಕಾತಿ ನಿಯಮಗಳ ಅನುಸಾರವಾಗಿ ಉತ್ತಮ ಮೊತ್ತದ ಮಾಸಿಕ ವೇತನ ನಿಗದಿ ಆಗಿರುತ್ತದೆ.
* ಇದರೊಂದಿಗೆ ಇನ್ನಿತರೆ ಭತ್ಯೆಗಳು ಹಾಗೂ ಸವಲತ್ತುಗಳು ಕೂಡ ಸಿಗುತ್ತವೆ
ಶೈಕ್ಷಣಿಕ ವಿದ್ಯಾರ್ಹತೆ:-
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕರ್ನಾಟಕದಲ್ಲಿ ಮಾನ್ಯತೆ ಪಡೆದ ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ಅಥವಾ ಮಂಡಳಿಗಳಲ್ಲಿ ಯಾವುದಾದರೂ ವಿಷಯದಲ್ಲಿ ಪದವಿ ಪಡೆದಿರಬೇಕು ಅಥವಾ ಡಿಪ್ಲೊಮಾ ಪದವಿ ಉತ್ತೀರ್ಣರಾಗಿರಬೇಕು
* ಕಂಪ್ಯೂಟರ್ ಜ್ಞಾನ ಹೊಂದಿರಬೇಕು
* ಕನ್ನಡ ಭಾಷೆಯನ್ನು ನಿರರ್ಗಳವಾಗಿ ಓದಲು, ಬರೆಯಲು ಮತ್ತು ಮಾತನಾಡಲು ಬಲ್ಲವರಾಗಿರಬೇಕು
ವಯೋಮಿತಿ:-
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷಗಳು
* ಸಹಕಾರಿ ಬ್ಯಾಂಕ್ ನಿಯಮಗಳ ಅನುಸಾರವಾಗಿ ಕೆಲ ವರ್ಗಕ್ಕೆ ವಯೋಮಿತಿ ಸಡಲಿಕ್ಕೆ ನೀಡಲಾಗಿದೆ
ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನ್ ವಿಧಾನದಲ್ಲಿಯೇ ಅರ್ಜಿ ಸಲ್ಲಿಸಬೇಕು
* ಮೊದಲಿಗೆ ಕೊಡಗು ಜಿಲ್ಲಾ ಸಹಕಾರಿ ಬ್ಯಾಂಕ್ ಅಧಿಕೃತ ವೆಬ್ಸೈಟ್ ಆದ https://www.kodagudccbank.com ವೆಬ್ಸೈಟ್ಗೆ ಭೇಟಿ ನೀಡಿ
* ನೀಡಿರುವ ಅಧಿಸೂಚನೆಯ ನಿಯಮಗಳನ್ನು ಓದಾಗಿಕೊಂಡು ಅಗತ್ಯ ದಾಖಲೆಗಳ ಸಿದ್ಧಪಡಿಸಿಕೊಂಡು ಅರ್ಜಿ ಸಲ್ಲಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ
* ಅಪ್ಲಿಕೇಶನ್ ಸಲ್ಲಿಸಲು https://kdcc.deltainfo.in ಈ ಲಿಂಕ್ ಬಳಸಿ
* ಅರ್ಜಿ ಸಲ್ಲಿಕೆ ಪೂರ್ತಿ ಆಗಲು ನಿಮ್ಮ ವರ್ಗಕ್ಕೆ ಸೂಚಿಸಿರುವ ಮೊತ್ತದ ಅರ್ಜಿ ಶುಲ್ಕವನ್ನು ಪಾವತಿಸಬೇಕು
* ಕೊನೆಯಲ್ಲಿ ಅರ್ಜಿ ಶುಲ್ಕ ಪಾವತಿಸಿರುವ ರಶೀದಿ ಪ್ರಿಂಟ್ ಮತ್ತು ಅರ್ಜಿ ಸಲ್ಲಿಕೆ ಪ್ರತಿ ಪ್ರಿಂಟ್ ಪಡೆಯಿರಿ.
ಅರ್ಜಿ ಶುಲ್ಕ:-
* ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – ರೂ.1750
* 2A, 2B, 3A, 3B ವರ್ಗದ ಅಭ್ಯರ್ಥಿಗಳಿಗೆ – ರೂ. 1750
* SC / ST, ಪ್ರವರ್ಗ – 1ರ ಅಭ್ಯರ್ಥಿಗಳಿಗೆ – ರೂ. 1250
ಆಯ್ಕೆ ವಿಧಾನ:-
* ಸ್ಪರ್ಧಾತ್ಮಕ ಪರೀಕ್ಷೆ ವಿಧಾನ ಅನುಸರಿಸಿ ಅರ್ಹರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ
* ಮೊದಲಿಗೆ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳಿಗೂ ಲಿಖಿತ ರೂಪದ ಪರೀಕ್ಷೆ ಇರುತ್ತದೆ ಇದು ಅವರ ಜ್ಞಾನ ಮಟ್ಟದ ಪರೀಕ್ಷೆ ಆಗಿರುತ್ತದೆ
* ನಂತರ ಆಯ್ಕೆ ಆದವರಿಗೆ ನೇರ ಸಂದರ್ಶನ ನಡೆಸಿ ಅವರ ಭಾಷ ಕೌಶಲ್ಯವನ್ನು ಪರೀಕ್ಷೆ ಮಾಡಿ ಆಯ್ಕೆಯಾದ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಿ ಅಂತಿಮ ಪಟ್ಟಿ ಸಿದ್ಧಪಡಿಸಿ ಘೋಷಿಸಲಾಗುತ್ತದೆ
ಪ್ರಮುಖ ದಿನಾಂಕಗಳು :-
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 21.12.2024 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 16.01.2025