Excise Department ಅಬಕಾರಿ ಇಲಾಖೆ ನೇಮಕಾತಿ, PUC ಆದವರು ಅರ್ಜಿ ಸಲ್ಲಿಸಿ.! ವೇತನ 30,350/-

Excise Department

ಸರ್ಕಾರಿ ಹುದ್ದೆ ಎನ್ನುವುದು ಒಂದು ರೀತಿಯ ಪ್ರತಿಷ್ಠೆ. ಬಡ ಕುಟುಂಬದ ಹುಡುಗನೊಬ್ಬನಿಗೆ ಸರ್ಕಾರಿ ಹುದ್ದೆ ದೊರೆತರೆ ಆತನ ಇಡೀ ಕುಟುಂಬಕ್ಕೆ ಆಸರೆ ದೊರೆತಂತಾಗುತ್ತದೆ. ಹಾಗೆಯೇ ಮಧ್ಯಮ ಹಾಗೂ ಶ್ರೀಮಂತ ವರ್ಗಕ್ಕೂ ಕೂಡ ಸರ್ಕಾರಿ ಹುದ್ದೆ ಎಂದರೆ ಇಷ್ಟೇ ಹಂಬಲ ಹಾಗೂ ಗೌರವವಿದೆ.

WhatsApp Group Join Now
Telegram Group Join Now

ಹೀಗಾಗಿ ಪ್ರತಿ ವರ್ಷವೂ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಆಗುವ ನೇಮಕಾತಿಗೆ ಬಹಳ ದೊಡ್ಡ ಮಟ್ಟದ ಸ್ಪರ್ಧೆ ಇದೆ ಇದರಲ್ಲಿ ಭರವಸೆ ಏನೆಂದರೆ, ಪ್ರತಿಭಾವಂತರಿಗೆ ಖಂಡಿತವಾಗಿಯೂ ಅವಕಾಶವಿದೆ ಎನ್ನುವುದು. ಕಷ್ಟಪಟ್ಟು ಆಸಕ್ತಿಯಿಂದ ಓದಿ ತಮ್ಮ ಭವಿಷ್ಯವನ್ನು ತಾವೇ ಬದಲಾಯಿಸಿಕೊಳ್ಳುವಂತಹ ಅವಕಾಶ ಸಿಗುವುದು ವಿದ್ಯೆಯಲ್ಲಿ ಮಾತ್ರ.

ಅದರಲ್ಲೂ ಹಣದ ಜೊತೆ ಗೌರವ ಮತ್ತು ಭದ್ರತೆ ಸರ್ಕಾರಿ ಹುದ್ದೆಯಲ್ಲಿ ದೊರೆಯುವದರಿಂದ ಈ ಬಗ್ಗೆ ಆಸಕ್ತರಾಗಿರುವ ಎಲ್ಲಾ ಆಕಾಂಕ್ಷಿಗಳಿಗೆ ಅನುಕೂಲವಾಗುವಂತ ವಿಷಯವೊಂದನ್ನು ಹಂಚಿಕೊಳ್ಳುತ್ತಿದ್ದೇವೆ. ಆದೆನೆಂದರೆ, ನಮ್ಮ ರಾಜ್ಯದ ಅಬಕಾರಿ ಇಲಾಖೆಯಲ್ಲಿ ಸುಮಾರು 1000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ.

ಈ ಬಗ್ಗೆ ಇಲಾಖೆಯು ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಗೆ ಸಚಿವ ಸಂಪುಟದಿಂದ ಗ್ರೀನ್ ಸಿಗ್ನಲ್ ದೊರೆತಿರುವುದರಿಂದ ಈ ಪ್ರಕ್ರಿಯ ಕುರಿತ ತಯಾರಿಗಳು ಸಿದ್ಧವಾಗಿವೆ. ಹಾಗಾಗಿ ಆಕಾಂಕ್ಷಿಗಳು ಕೂಡ ಈ ಬಗ್ಗೆ ಮಾಹಿತಿ ತಿಳಿದುಕೊಂಡು ಈ ಕೂಡಲೇ ತಮ್ಮ ಅಭ್ಯಾಸವನ್ನು ಚುರುಕುಗೊಳಿಸಿಕೊಂಡು ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಲಿ ಎನ್ನುವ ಉದ್ದೇಶದಿಂದ ಈ ನೇಮಕಾತಿ ಬಗ್ಗೆ ಮುಂಚಿತವಾಗಿ ತಿಳಿಸುತ್ತಿದ್ದೇವೆ.

ಎಷ್ಟು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ? ಯಾವ ಬಗೆ ಹುದ್ದೆಗಳು? ವೇತನ ಎಷ್ಟಿರುತ್ತದೆ? ಅರ್ಜಿ ಸಲ್ಲಿಸುವುದು ಹೇಗೆ? ಹಾಗೂ ಆಯ್ಕೆ ವಿಧಾನ ಹೇಗಿರುತ್ತದೆ? ಈ ಬಗ್ಗೆ ಸದ್ಯಕ್ಕೆ ತಿಳಿದು ಬಂದಿರುವ ಮಾಹಿತಿಯ ವಿವರ ಹೀಗಿದೆ ನೋಡಿ.

ಉದ್ಯೋಗ ಸಂಸ್ಥೆ:- ಅಬಕಾರಿ ಇಲಾಖೆ(Excise)

ಹುದ್ದೆ ಹೆಸರು:-
* ಅಬಕಾರಿ ಉಪ ನಿರೀಕ್ಷಕರು
* ಅಬಕಾರಿ ಪೇದೆಗಳು

ಹುದ್ದೆಗಳ ವಿವರ:-
* ಅಬಕಾರಿ ಉಪ ನಿರೀಕ್ಷಕರು – 942 ಹುದ್ದೆಗಳು
* ಅಬಕಾರಿ ಪೇದೆಗಳು – 265 ಹುದ್ದೆಗಳು

ಒಟ್ಟು ಹುದ್ದೆಗಳ ಸಂಖ್ಯೆ:-1200+ ಹುದ್ದೆಗಳು

ವೇತನ ಶ್ರೇಣಿ:-
* ಅಬಕಾರಿ ಉಪ ನಿರೀಕ್ಷಕರು ಹುದ್ದೆಗಳಿಗೆ – ರೂ. 30,350
* ಅಬಕಾರಿ ಪೇದೆಗಳು ಹುದ್ದೆಗಳಿಗೆ – ರೂ.21,400

ಉದ್ಯೋಗ ಸ್ಥಳ:- ಕರ್ನಾಟಕದ ಅಬಕಾರಿ ಇಲಾಖೆಗೆ ಸಂಬಂಧಿಸಿದ ವಿವಿಧ ಕಛೇರಿಗಳಲ್ಲಿ…

ಶೈಕ್ಷಣಿಕ ವಿದ್ಯಾರ್ಹತೆ:-
  •  ಅಬಕಾರಿ ಉಪ ನಿರೀಕ್ಷಕರು – ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕರ್ನಾಟಕದಲ್ಲಿ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಯಾವುದಾದರೂ ವಿಷಯದಲ್ಲಿ ಪದವಿ ಪಡೆದಿರಬೇಕು
  •  ಅಬಕಾರಿ ಪೇದೆಗಳು – ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕರ್ನಾಟಕದಲ್ಲಿ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಯಾವುದಾದರೂ ವಿಭಾಗಲ್ಲಿ PUC ಉತ್ತೀರ್ಣರಾಗಿರಬೇಕು.

ವಯೋಮಿತಿ:-
* ಕನಿಷ್ಠ ಬಯೋಮಿತಿ 18 ವರ್ಷಗಳು
* ಗರಿಷ್ಠ ವಯೋಮಿತಿ 35 ವರ್ಷಗಳು

ವಯೋಮಿತಿ ಸಡಲಿಕೆ:-
* SC/ST ಅಭ್ಯರ್ಥಿಗಳಿಗೆ 5 ವರ್ಷಗಳು
* OBC ಅಭ್ಯರ್ಥಿಗಳಿಗೆ 3 ವರ್ಷಗಳು
* ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು

ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು ಶೀಘ್ರದಲ್ಲಿಯೇ ಈ ಬಗ್ಗೆ ಅಪ್ಡೇಟ್ ನೀಡುವುದಾಗಿ ಇಲಾಖೆ ತಿಳಿಸಿದೆ.

ಆಯ್ಕೆ ವಿಧಾನ:-
  •  ಲಿಖಿತ ರೂಪದ ಪರೀಕ್ಷೆ
  • ದೈಹಿಕ ಸಾಮರ್ಥ್ಯದ ಪರೀಕ್ಷೆ
  • ಮೆಡಿಕಲ್ ಟೆಸ್ಟ್
  • ದಾಖಲೆಗಳ ಪರಿಶೀಲನೆ
  •  ನೇರ ಸಂದರ್ಶನ

ಪ್ರಮುಖ ದಿನಾಂಕಗಳು:- ಜನವರಿ ಅಂತ್ಯಕ್ಕೆ ಈ ಬಗ್ಗೆ ಅಧಿಕೃತ ಅಧಿಸೂಚನೆ ನಿರೀಕ್ಷಿಸಲಾಗಿದೆ

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment