Gas ವರ್ಷದ ಮೊದಲ ದಿನವೇ ಗುಡ್​​ನ್ಯೂಸ್​ ಕೊಟ್ಟ ಸರ್ಕಾರ ಸಿಲಿಂಡರ್ ಬೆಲೆ ಇಳಿಕೆ.!

Gas

ಪ್ರಪಂಚದಾದ್ಯಂತ ಎಲ್ಲರೂ ಹೊಸ ವರ್ಷದ (New Year) ಸಂಭ್ರಮಾಚರಣೆಯಲ್ಲಿ ಇದ್ದಾರೆ. ನೋಡ ನೋಡುತ್ತಿದ್ದಂತೆ 2024ರ ಇಸವಿಯು ಕಣ್ಮುಂದೆ ಕರಗಿ ನೂತನ ವರ್ಷವಾದ 2025ರ 365 ಪುಟಗಳುಳ್ಳ ಹೊಸ ಪುಸ್ತಕ ತೆರೆದುಕೊಂಡಿದೆ. ಸಾಮಾನ್ಯವಾಗಿ ಹೊಸ ವರ್ಷ ಹೊಸತನದ ಹುರುಪು, ಸಡಗರ ಸಂಭ್ರಮ ತಂದು ಬದುಕಿಗೆ ಹೊಸ ಚೈತನ್ಯ ತುಂಬುತ್ತದೆ.

WhatsApp Group Join Now
Telegram Group Join Now

ಇದಿಷ್ಟು ಮಾತ್ರವಲ್ಲದೇ ಅನೇಕರಿಗೆ ಹೊಸ ಅಭ್ಯಾಸ ಶುರು ಮಾಡಲು ಅಥವಾ ದುರಭ್ಯಾಸ ಬಿಡಲು ರೆಸಲ್ಯೂಷನ್ ಮಾಡಿಕೊಳ್ಳುವ ಸಮಯವಾಗಿದೆ. ಈ ಹೊಸ ವರ್ಷದ ಸಮಯದಲ್ಲಿ ವೈಯಕ್ತಿಕ ವಿಚಾರಗಳು ಮಾತ್ರವಲ್ಲದೆ ಮಾರುಕಟ್ಟೆ ವಿಚಾರವಾಗಿ ಕೂಡ ಅನೇಕ ಬದಲಾವಣೆಗಳು ಉಂಟಾಗುತ್ತವೆ.

ಹೊಸ ವರ್ಷದಲ್ಲಿ ಅನೇಕ ಖರೀದಿಗೆ ಆಫರ್ ಗಳು ಕೂಡ ಸಿಗುತ್ತೆ. ಆ ಹಾದಿ ಯಾಗಿ ಇದೀಗ ಸಿಲಿಂಡರ್ ಬೆಲೆಯಲ್ಲಿ ಹೊಸ ವರ್ಷದ ಪ್ರಯುಕ್ತ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ, ಈ ವಿಚಾರದ ಬಗ್ಗೆ ಲೇಖನದಲ್ಲಿ ವಿವರಣೆ ನೀಡುತ್ತಿದ್ದೇವೆ. ಸಾಮಾನ್ಯವಾಗಿ ಪ್ರತಿ ತಿಂಗಳ ಮೊದಲನೇ ದಿನದಂದು ಸಿಲಿಂಡರ್ ಬೆಲೆಯು (revised rate) ಪರಿಷ್ಕೃತಗೊಳ್ಳುತ್ತದೆ.

ಗೃಹಬಳಕೆಯ ಸಿಲಿಂಡರ್ ಹಾಗೂ ವಾಣಿಜ್ಯ ಸಿಲಿಂಡರ್ ಗಳ ದರ ಪರಿಷ್ಕರಣೆಯಾಗುತ್ತದೆ. ಸರ್ಕಾರಿ ತೈಲ ಕಂಪನಿಗಳು ಇದನ್ನು ಪರಿಷ್ಕರಿಸಿ ನಿರ್ಧರಿಸಿ ನಂತರ ಜಾರಿಗೊಳಿಸುತ್ತವೆ ಹಾಗೂ ಮುಂದಿನ ಘೋಷಣೆಯವರೆಗೂ ದೇಶದಲ್ಲಿ ಇದು ಚಾಲ್ತಿಯಲ್ಲಿರುತ್ತದೆ ಆದರೆ ಗೃಹ ಬಳಕೆಯ ಸಿಲಿಂಡರ್ ವಿಚಾರ ಬಂದಾಗ ಇದು ಕೊಂಚ ಭಿನ್ನ.

ಈಗ ದೇಶದಾದ್ಯಂತ ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್ ಕನೆಕ್ಷನ್ ಹಾಗೂ ಸಬ್ಸಿಡಿ ದರದಲ್ಲಿ ಗ್ಯಾಸ್ ಫಿಲ್ಲಿಂಗ್ ಸಿಗುತ್ತಿರುವುದರಿಂದ ಒಂದು ರೀತಿಯ ಕ್ರಾಂತಿಯೇ ನಡೆದಿದೆ ಎನ್ನಬಹುದು. ಹೀಗಾಗಿ ಸರ್ಕಾರವು ವಿಶೇಷ ಸಂದರ್ಭಗಳನ್ನು ಗೃಹಬಳಕೆ ಸಿಲಿಂಡರ್ ಬೆಲೆ ಇಳಿಕೆ ಮಾಡುವುದರಿಂದ ಹೊಸ ವರ್ಷದ ಸಂದರ್ಭದಲ್ಲಿಯೂ ಜನಸಾಮಾನ್ಯರಿಗೆ ಈ ನಿರೀಕ್ಷೆ ಇತ್ತು.

ಅಂತೆಯೇ ಹೊಸ ವರ್ಷದ ಮೊದಲ ದಿನವೇ ಗ್ರಾಹಕರಿಗೆ ಗುಡ್​​ನ್ಯೂಸ್ ಸಿಕ್ಕಿದೆ. LPG ಗ್ಯಾಸ್ ಸಿಲಿಂಡರ್ ರಿಫಿಲ್ ಬೆಲೆಯು (Cylinder refil) ಇಳಿಕೆಯಾಗಿದೆ. ಸರ್ಕಾರಿ ತೈಲ ಕಂಪನಿಗಳು ಹೊಸ ವರ್ಷದ ಪ್ರಯುಕ್ತವಾಗಿ LPG ಸಿಲಿಂಡರ್‌ಗಳ ಬೆಲೆಯಲ್ಲಿ ಇಳಿಕೆ ಮಾಡಲು ನಿರ್ಧಾರ ಮಾಡಿದೆ ಮತ್ತು ಡಿಸೆಂಬರ್ ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರವು ದೇಶದಲ್ಲೆಡೆ ಜಾರಿಯಲ್ಲಿದೆ.

ಆ ಪ್ರಕಾರ LPG ಸಿಲಿಂಡರ್ ಬೆಲೆಯಲ್ಲಿ 14.50 ರೂಪಾಯಿ ಇಳಿಕೆಯಾಗಿದ್ದು ದೇಶದ ಪ್ರಮುಖ ವಾಣಿಜ್ಯ ನಗರಗಳಲ್ಲಿ ಈ ಪರಿಷ್ಕೃತ ಹೊಸ ಬೆಲೆಯು ಕೆಳಗೆ ನೀಡಿರುವ ಪಟ್ಟಿಯ ಪ್ರಕಾರವಾಗಿ ಅನ್ವಯವಾಗಲಿದೆ.

1. ದೆಹಲಿಯಲ್ಲಿ 14KG LPG ಸಿಲಿಂಡರ್‌ನ ಬೆಲೆ ಈವರೆಗೆ ರೂ. 1818.50 ಇತ್ತು, ಇದೀಗ ರೂ. 1804 ಗೆ ಇಳಿಕೆ ಆಗಿದೆ. ಮತ್ತು 19KG LPG ಸಿಲಿಂಡರ್‌ಗಳ ಬೆಲೆ ಕಡಿಮೆ ಮಾಡಲು ಕೂಡ ನಿರ್ಧರಿಸಲಾಗಿದೆ.
2. ಕೋಲ್ಕತ್ತಾದಲ್ಲಿ 14KG LPG ಸಿಲಿಂಡರ್ ರೂ. 1911 ಗೆ ಸಿಗಲಿದೆ. ಕಳೆದ ತಿಂಗಳು ರೂ. 1927 ಪಾವತಿ ಮಾಡಬೇಕಾಗಿತ್ತು.
3. ಮುಂಬೈನಲ್ಲಿ ಈ ತಿಂಗಳಲ್ಲಿ 14KG ಸಿಲಿಂಡರ್ ರೂ. 1756ಗೆ ಸಿಗಲಿದೆ.
4. ಚೆನ್ನೈನಲ್ಲಿ ಈ ತಿಂಗಳಲ್ಲಿ 19KG ಸಿಲಿಂಡರ್​ ರೂ. 1966 ಗೆ ಸಿಗಲಿದೆ.
ಹೀಗೆ ದೇಶದ ಎಲ್ಲಾ ಪ್ರಮುಖ ನಗರಗಳಲ್ಲೂ ಕೂಡ ಸಿಲಿಂಡರ್ ರಿಫೀಲ್ ಬೆಲೆಯ ದರವನ್ನು ಕಡಿಮೆಗೊಳಿಸಲಾಗಿದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment