Gold Rate:
ಬಂಗಾರ ಎಂದ ತಕ್ಷಣ ಹೆಂಗೆಳೆಯರ ಮನಸ್ಸು ಹಿಗ್ಗುತ್ತದೆ. ಯಾಕೆಂದರೆ ಬಂಗಾರವು ಸೌಂದರ್ಯವನ್ನು ಹೆಚ್ಚಿಸುವುದರೊಂದಿಗೆ ಪ್ರತಿಷ್ಠೆಯ ಪ್ರತಿಕವೂ ಆಗಿದೆ. ಹಾಗಾಗಿ ನಮ್ಮ ಹೂಡಿಕೆಯ ಭಾಗವಾಗಿ ಅಂತಸ್ಥನ್ನು ಅಳತೆಯು ಮಾಪನವಾಗಿ ಹಾಗೂ ಹೆಣ್ಣು ಮಕ್ಕಳಿಗೆ ಅಚ್ಚುಮೆಚ್ಚಿನ ಲೋಹವಾಗಿ ಚಿನ್ನಾಭರಣಗಳು ಮನ್ನಣೆ ಗಳಿಸಿವೆ. ಇಡೀ ಪ್ರಪಂಚಕ್ಕೆ ಹೋಲಿಸಿದರೆ ಈ ಬಂಗಾರದ ಆಭರಣಗಳ ವ್ಯಾಮೋಹ ಭಾರತದ ಮಹಿಳೆಯರಲ್ಲಿ ಹೆಚ್ಚು ಎನ್ನುವುದನ್ನು ಒಪ್ಪಲೇಬೇಕು.
ಆದುದರಿಂದಲೇ ಚಿನ್ನದ ಬೆಲೆ ಗಗನಕ್ಕೆ ಏರಿರಬೇಕು. ಹೀಗಾಗಿ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರಿಗೆ ಇನ್ನು ಮುಂದೆ ಚಿನ್ನ ಎನ್ನುವುದು ಆಕಾಶ ಕುಸುಮವಾಗುತ್ತದೆಯೇ ಎನ್ನುವ ಭಯ ಹುಟ್ಟಿದೆ. ಈ ನಡುವೆ ಒಂದು ಸಮಾಧಾನಕರ ಸಂಗತಿ ಎಂದರೆ ಕಳೆದೆರಡು ದಿನಗಳಿಂದ ಚಿನ್ನದ ಬೆಲೆ ಸ್ವಲ್ಪ ಇಳಿಕೆ ಕಂಡಿದೆ.
ಸಾಮಾನ್ಯವಾಗಿ ನಮ್ಮ ರಾಜ್ಯದಲ್ಲಿ ಮದುವೆ ಹಾಗೂ ಶುಭಕಾರ್ಯದ ಸೀಸನ್ ಗಳಲ್ಲಿ ಮತ್ತು ವರಮಹಾಲಕ್ಷ್ಮಿ ದೀಪಾವಳಿ, ಅಮಾವಾಸ್ಯೆ, ಮುಖ್ಯವಾಗಿ ಅಕ್ಷಯ ತೃತೀಯ ಇಂತಹ ಸಂದರ್ಭಗಳಲ್ಲಿ ಬಂಗಾರಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ. ಹಾಗೆ ಅದಕ್ಕೆ ವಿರುದ್ಧವಾಗಿ ಕರ್ನಾಟಕದಲ್ಲಿ ಆಷಾಢ ಮಾಸದಲ್ಲಿ ಶುಭ ಕಾರ್ಯಗಳು ಕಡಿಮೆ ಇರುವುದರಿಂದ ಅದೇ ರೀತಿ ಶೂನ್ಯ ಮಾಸವೆಂದು ಕರೆಸಿಕೊಳ್ಳುವ ಈ ಡಿಸೆಂಬರ್ ತಿಂಗಳ ಸಮಯದಲ್ಲಿ ಶುಭಕಾರ್ಯಗಳು ಕಡಿಮೆ ಇರುವುದರಿಂದ ಈ ಸಮಯದಲ್ಲೂ ಬಂಗಾರದ ಬೆಲೆಯೂ ಕೊಂಚ ತಗ್ಗುತ್ತದೆ ಇಲ್ಲಿಯವರೆಗೂ ನಂಬಿಕೊಂಡು ಬಂದಿರುವ ಒಂದು ಸಂಗತಿ.
ಈ ಬಗ್ಗೆ ಇಂದಿಗೂ ಕೂಡ ಅನೇಕರು ನಿರೀಕ್ಷೆ ಇಟ್ಟುಕೊಂಡು ಕಾಯುತ್ತಾರೆ. ಈಗ ಅವರಿಗೆ ಸಿಹಿ ಸುದ್ದಿ ಇದೆ. ಕಳೆದ ತಿಂಗಳಿಗೆ ಕಂಪೇರ್ ಮಾಡಿದರೆ ಚಿನ್ನದ ಬೆಲೆ ಪ್ರತಿ ನಿತ್ಯ ಸ್ವಲ್ಪ ಸ್ವಲ್ಪ ಇಳಿಕೆ ಕಾಣುತ್ತಿದೆ. ಹೀಗಾಗಿ ಆಭರಣ ಪ್ರಿಯರೆಲ್ಲರಿಗೋಸ್ಕರ ಈ ಲೇಖನದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ಬೆಲೆ ಹೇಗಿದೆ ಅನ್ನುವ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ.
ನಮ್ಮ ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಬಂಗಾರವು ರೂ. 72,140 ಸರಾಸರಿ ಇದೆ. ಹಾಗೆಯೇ 24 ಕ್ಯಾರೆಟ್ ನ ಬಂಗಾರವು 10 ಗ್ರಾ ಗೆ ರೂ. 78,700 ರೂ. ಇದೆ. ಕಳೆದ ತಿಂಗಳಿನಲ್ಲಿ ಈ ಬೆಲೆಗಳು ಇನ್ನೂ ಹೆಚ್ಚಿಗೆ ಇದ್ದವು. ಇಂದಿನ ಬೆಲೆಗಳ ಬಗ್ಗೆ ತಿಳಿದುಕೊಳ್ಳಿ ಹಾಗೂ ಈ ಮಾಹಿತಿಯನ್ನು ಆಸಕ್ತರಿಗೆ ಶೇರ್ ಮಾಡಿ.
8 ಗ್ರಾಂ ಬಂಗಾರದ ಬೆಲೆ ಪಟ್ಟಿ:-
* 22 ಕ್ಯಾರೆಟ್ – ರೂ. 57,712
* 24 ಕ್ಯಾರೆಟ್ (ಅಪರಂಜಿ) – ರೂ. 62,960
10 ಗ್ರಾಂ ಬಂಗಾರದ ಬೆಲೆ ಪಟ್ಟಿ:-
* 22 ಕ್ಯಾರೆಟ್ – ರೂ. 72,140
* 24 ಕ್ಯಾರೆಟ್ (ಅಪರಂಜಿ) – ರೂ. 78,700
ದೇಶದ ವಿವಿಧ ನಗರಗಳಲ್ಲಿ ಬಂಗಾರದ ಬೆಲೆ 22 ಕ್ಯಾರೇಟ್ 10 ಗ್ರಾಂ ಗೆ
- ಬೆಂಗಳೂರು – ರೂ. 72,140
- ಚೆನ್ನೈ – ರೂ. 72,140
- ಮುಂಬೈ – ರೂ. 72,140
- ಕೋಲ್ಕತ್ತಾ – ರೂ. 72,140
- ನವದೆಹಲಿ – ರೂ. 72,290
- ಹೈದರಾಬಾದ್ – ರೂ. 72,140
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ 10 ಗ್ರಾಂ ಗೆ:-
- ಬೆಂಗಳೂರು – ರೂ. 78,700
- ಚೆನ್ನೈ – ರೂ. 78,700
- ಮುಂಬೈ – ರೂ. 78,700
- ಕೋಲ್ಕತ್ತಾ – ರೂ. 78,700
- ನವದೆಹಲಿ – ರೂ. 78,850
- ಹೈದರಾಬಾದ್ – ರೂ. 78,700