Gold Rate: ಮಹಿಳೆಯರಿಗೆ ಗುಡ್ ನ್ಯೂಸ್ ಬಂಗಾರದ ಬೆಲೆ ಇಳಿಕೆ

Gold Rate

ನಮ್ಮ ದೇಶದಲ್ಲಿ ಬಡವರು ಮಧ್ಯಮ ವರ್ಗದವರು ಹಾಗೂ ಶ್ರೀಮಂತರು ಎನ್ನುವ ಭೇದವಿಲ್ಲದೆ ಎಲ್ಲರೂ ಕೂಡ ಬಹಳ ಕುತೂಹಲದಿಂದ ವಿಚಾರಿಸಿಕೊಳ್ಳುವ ಒಂದು ಸಂಗತಿ ಎಂದರೆ ಬಂಗಾರದ ಬೆಲೆ ಎನ್ನಬಹುದು. ಯಾಕೆಂದರೆ ಶ್ರೀಮಂತರು ಬಡವರು ಎನ್ನುವ ಯಾವುದೇ ಭೇದ ಇಲ್ಲದೆ ಎಲ್ಲಾ ವರ್ಗದವರಿಗೂ ಕೂಡ ಬಂಗಾರದ ಮೇಲೆ ವ್ಯಾಮೋಹ ಇದ್ದೆ ಇದೆ.

WhatsApp Group Join Now
Telegram Group Join Now

ಕೆಲವು ಕುಟುಂಬಗಳಲ್ಲಿ ಮಹಿಳೆಯರಿಗೆ ಬಂಗಾರದ ಆಭರಣದ ಮೇಲೆ ವಿಪರೀತವಾದ ಆಕರ್ಷಣೆ ಇದ್ದರೆ, ಇನ್ನು ಕೆಲವು ಕುಟುಂಬಗಳು ಅದನ್ನು ತಮ್ಮ ಹೂಡಿಕೆಯ ಭಾಗವನ್ನಾಗಿ ನೋಡುತ್ತವೆ. ನಮ್ಮ ದೇಶದ ವಿಶೇಷತೆ ಏನೆಂದರೆ ದೇಶದಲ್ಲಿ ಬಡ ಜನರು ಕೂಡ ಶುಭ ಕಾರ್ಯಗಳಿಗೆ ತಮ್ಮ ಕೈಲಾದಷ್ಟು ಬಂಗಾರವನ್ನು ಖರೀದಿಸಿ ಉಡುಗೊರೆಯಾಗಿ ಮಕ್ಕಳಿಗೆ ನೀಡ ಬಯಸುತ್ತಾರೆ.

ಹೀಗಾಗಿ ಎಲ್ಲರಿಗೂ ಬಂಗಾರದ ಬೆಲೆಯ ಬಗ್ಗೆ ಗಮನ ಇದ್ದೇ ಇರುತ್ತದೆ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಬಂಗಾರದ ಬೆಲೆಯು ಏರುತ್ತಲೇ ಇದೆ. ಹೀಗೆ ಕಳೆದ ದಶಕಕ್ಕೆ ಹೋಲಿಸಿದರೆ ಅದರ ಎರಡು ಪಟ್ಟುಕಿಂತಲೂ ಹೆಚ್ಚು ಹಾಗೂ 20 ವರ್ಷಗಳ ಹಿಂದೆ ಹೋಲಿಸಿದರೆ ಅದರ 200 ಪಟ್ಟಿನಷ್ಟು ಹೆಚ್ಚಾಗಿದೆ.

ನಿರಂತರವಾಗಿ ಏರುತ್ತಿರುವ ಬಂಗಾರದ ಬೆಲೆಯು ಒಂದು ಕಡೆಯಲ್ಲಿ ಆತಂಕ ಸೃಷ್ಟಿಸಿದರೆ ಮತ್ತೊಂದು ಕಡೆಯಲ್ಲಿ ಈಗಾಗಲೇ ಬಂಗಾರದ ಮೇಲೆ ಹೂಡಿಕೆ ಮಾಡಿರುವವರಿಗೆ ಇದು ಸಮಾಧಾನ ನೀಡುವ ಸಂಗತಿಯೇ ಆಗಿದೆ. ಒಟ್ಟಾರೆಯಾಗಿ ಪ್ರತಿನಿತ್ಯ ಚರ್ಚೆ ಆಗುವ ವಿಷಯಗಳಲ್ಲಿ ಬಂಗಾರದ ಬೆಲೆ ಪರಿಷ್ಕರಣೆ ವಿಚಾರವೂ ಸೇರಿರುತ್ತದೆ.

ಪ್ರತಿನಿತ್ಯವೂ ಕೂಡ ಬಂಗಾರದ ಬೆಲೆ ಪರಿಷ್ಕರಣೆಯಾಗಿ ವ್ಯತ್ಯಾಸವಾಗುವುದರಿಂದ ಸುದ್ದಿ ಮಾಧ್ಯಮಗಳಲ್ಲೂ ಹಾಗೂ ಸುದ್ದಿ ಪತ್ರಿಕೆಗಳಲ್ಲಿ ಕೂಡ ಇದಕ್ಕೆ ಸ್ಥಳಾವಕಾಶ ಇದ್ದೇ ಇರುತ್ತದೆ. ಈ ನಡುವೆ ಸಮಾಧಾನಕರ ಸಂಗತಿ ಏನೆಂದರೆ, ನಿಧಾನವಾಗಿ ಬಂಗಾರದ ಬೆಲೆ ಸ್ವಲ್ಪ ಸ್ವಲ್ಪ ಕಡಿಮೆ ಆಗುತ್ತಿದೆ. ಕಳೆದ ಒಂದು ವಾರಕ್ಕೆ ಹೋಲಿಸಿದರೆ ಜನವರಿ 7 ನೇ ಹಾಗೂ 8ನೇ ತಾರೀಕು ಚಿನ್ನದ ಬೆಲೆ ಇಳಿದಿದೆ.

ಹಾಗಾದರೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆ ಎಷ್ಟಿದೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಆ ಪಟ್ಟಿ ಹೀಗಿದೆ ನೋಡಿ. ದೇಶದಲ್ಲಿ 22 ಕ್ಯಾರೆಟ್ ನ 10 ಗ್ರಾಂ ಬಂಗಾರದ ಬೆಲೆಯು ರೂ. 72,150 ದಿಂದ ರೂ. 72,140ಕ್ಕೆ ಇಳಿಕೆಯಾಗಿದೆ.

ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರವು ರೂ. 78,710 ದಿಂದ ರೂ. 78,700ಕ್ಕೆ ಇಳಿಕೆಯಾಗಿದೆ. 22 ಕ್ಯಾರೆಟ್ 8 ಗ್ರಾಂ ಚಿನ್ನದ ಬೆಲೆ – ರೂ. 57,712 ಮತ್ತು 24 ಕ್ಯಾರೆಟ್ ನ ಅಪರಂಜಿ ಚಿನ್ನದ ಬೆಲೆಯು
ರೂ. 62,960 ಇದೆ

ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೇಟ್‌ ಬಂಗಾರದ ಬೆಲೆ (10 ಗ್ರಾಂ ಗೆ)
  •  ಬೆಂಗಳೂರು – ರೂ. 72,140
  •  ಚೆನ್ನೈ – ರೂ. 72,140
  •  ಮುಂಬೈ – ರೂ. 72,140
  •  ಕೋಲ್ಕತ್ತಾ – ರೂ. 72,140
  •  ನವದೆಹಲಿ – ರೂ. 72,290
  •  ಹೈದರಾಬಾದ್‌ – ರೂ. 72,140
ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೇಟ್‌ ಬಂಗಾರದ ಬೆಲೆ (10 ಗ್ರಾಂ ಗೆ)
  •  ಬೆಂಗಳೂರು – ರೂ. 78,700
  •  ಚೆನ್ನೈ – ರೂ. 78,700
  •  ಮುಂಬೈ – ರೂ. 78,700
  •  ಕೋಲ್ಕತ್ತಾ – ರೂ. 78,700
  •  ನವದೆಹಲಿ – ರೂ. 78,850
  •  ಹೈದರಾಬಾದ್‌ – ರೂ. 78,700
ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment