Gold Rate:
ಭಾರತೀಯರು (Indians) ಆಭರಣ ಪ್ರಿಯರು. ಹಬ್ಬ, ಶುಭ ಸಂದರ್ಭಗಳು ಮತ್ತು ಇತರ ಆಚರಣೆಗಳ ಸಮಯದಲ್ಲಿ ಚಿನ್ನ(Gold)ಕ್ಕೆ ಬೇಡಿಕೆ ಹೆಚ್ಚಾಗಿ ನೀಡುತ್ತಾದೆ. ಈ ಸಮಯದಲ್ಲಿ ಮಹಿಳೆಯರು ಹೆಚ್ಚಾಗಿ ಚಿನ್ನಾಭರಣಗಳನ್ನು ಖರೀದಿ (Buying gold jewelry) ಮಾಡುತ್ತಾರೆ. ಚಿನ್ನದ ಆಭರಣಗಳು ಮಹಿಳೆಯರಿಗೆ ಅಲಂಕಾರವೂ ಹೌದು. ಅದಕ್ಕಾಗಿಯೇ ಮಹಿಳೆಯರು ಚಿನ್ನಾಭರಣಗಳನ್ನು ಹೆಚ್ಚಾಗಿ ಖರೀದಿ ಮಾಡುತ್ತಾರೆ. ಆದರೆ, ಇತ್ತೀಚೆಗೆ ಚಿನ್ನದ ಬೆಲೆ (Gold price)ಯಲ್ಲಿ ಏರುಪೇರಾಗುತ್ತಿದೆ. ಜನರು ಚಿನ್ನದ ಆಭರಣಗಳನ್ನು ಖರೀದಿಸಲು ಯೋಚಿಸುವಂತಾಗಿದೆ. ಆದ್ರೆ, ಈಗ ಆ ಚಿಂತೆ ಬೇಡ. ಯಾಕಂದ್ರೆ, ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.
ಹೌದು, ಯುಗಾದಿ ಹಬ್ಬ (Ugadi festival)ಕ್ಕೆ ಚಿನ್ನ, ಬೆಳ್ಳಿ (Gold, silver) ಖರೀದಿ ಮಾಡಬೇಕು ಅಂದುಕೊಂಡಿದ್ದರೆ, ಈ ದಿನ ಚಿನ್ನಾಭರಣ ಖರೀದಿಗೆ ಸೂಕ್ತ ಸಮಯ. ಯಾಕೆಂದರೆ, ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಏರಿಕೆಯಾಗಿದ್ದ ಚಿನ್ನದ ಬೆಲೆ ಇಂದು ಭಾರೀ ಇಳಿಕೆಯಾಗಿದೆ.
ಕಳೆದ ತಿಂಗಳಿನಿಂದ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಾಣುತ್ತಿದ್ದು, ಚಿನ್ನಾಭರಣ ಪ್ರಿಯರಿಗೆ ನಿರಾಸೆಯಾಗಿತ್ತು . ಆದರೆ, ಈಗ ಬಂಗಾರದ ಬೆಲೆ ಕೊಂಚ ಕಡಿತಗೊಂಡಿದೆ. 2024ರಲ್ಲಿ ಚಿನ್ನದ ಬೆಲೆಗಳು ಭಾರೀ ಏರಿಳಿತದಿಂದ ಕೂಡಿತ್ತು. ಕಳೆದ ಒಂದು ವರ್ಷದಲ್ಲಿ ಚಿನ್ನದ ಬೆಲೆ ಶೇ. 30ರಷ್ಟು ಏರಿಕೆ ಕಂಡಿದೆ. ಆದರೆ, ಕಳೆದ ಕೆಲ ದಿನಗಳಿಂದ ಬಂಗಾರದ ಬೆಲೆಯಲ್ಲಿ ಅಷ್ಟೇನು ಏರಿಕೆ ಕಂಡುಬಂದಿಲ್ಲ.
ಈ ಕ್ರಮದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಎಷ್ಟರ ಮಟ್ಟಿಗೆ ಕಡಿಮೆಯಾಗಿವೆ?
ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹೇಗಿವೆ ಎಂದು ತಿಳಿದುಕೊಳ್ಳೋಣ.
ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿಯುತ್ತಿದೆ. ಹೀಗಾಗಿ ಹಬ್ಬಕ್ಕೆಮದು ಚಿನ್ನಾಭರಣ ಖರೀದಿ ಮಾಡುವ ಮಹಿಳೆಯರಿಗೆ ಈ ಸಮಯ ಸೂಕ್ತವಾಗಿದೆ. ಇಂದು ಮಂಗಳವಾರ ಜನವರಿ 28ರಂದು ಭಾರತದಲ್ಲಿ 10 ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆ 80,020 ಆಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 370 ರೂ.ಗಳಷ್ಟು ಕಡಿಮೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ 73,095 ತಲುಪಿದೆ. ಮತ್ತೊಂದೆಡೆ ಹೈದರಾಬಾದ್ ಮತ್ತು ವಿಜಯವಾಡದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 80,010 ಕ್ಕೆ ತಲುಪಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 73,343 ಇದೆ.
ಬೆಳ್ಳಿ ಬೆಲೆಯಲ್ಲೂ ಭರ್ಜರಿ ಕುಸಿತ ಕಂಡು ಬಂದಿದ್ದು, ದೆಹಲಿಯಲ್ಲಿ ಒಂದು ಕಿಲೋ ಬೆಳ್ಳಿಯ ಬೆಲೆ 1370ಕ್ಕೆ ಇಳಿಸಲಾಗಿದೆ. ಇದರ ಬೆಲೆ ಈಗ 90,210 ತಲುಪಿದೆ. ವಿಜಯವಾಡ ಮತ್ತು ಹೈದರಾಬಾದ್ನಲ್ಲಿ ಪ್ರತಿ ಕೆಜಿ ಬೆಳ್ಳಿಯ ದರ 90,510 ರೂಪಾಯಿ ಆಗಿದೆ. ಹಾಗಾದರೆ ದೇಶದ ಯಾವ ರಾಜ್ಯಗಳಲ್ಲಿ ಚೆನ್ನದ ಬೆಲೆ ಹೇಗಿದೆ ಎಂದು ಈಗ ತಿಳಿಯೋಣ ಬನ್ನಿ…
ದೇಶದ ಪ್ರಮುಖ ನಗರಗಳಲ್ಲಿ 10 ಗ್ರಾಂನ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆಗಳು:-
- * ಮಣಿಪುರದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 73,535 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 80,220
- * ಕೋಟಾದಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 73,214 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 79,870
- * ಮುಂಬೈನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 73,223 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 79,880
- * ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 73,123 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 79,770
- * ಚೆನ್ನೈನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 73,434 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 80,110
- * ಬೆಂಗಳೂರಿನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 73,278 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 79,940
- * ಹೈದರಾಬಾದ್ನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 73,343 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 80,010
- * ವಿಶಾಖಪಟ್ಟಣಂನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 73,343 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 80,010
- * ದೆಹಲಿಯಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 73,095 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 79,740.
ಚಿನ್ನದ ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಏರಿಳಿತವಾಗುತ್ತದೆ. ಅಂದರೆ, ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾದರೆ, ದೇಶೀಯ ಮಾರುಕಟ್ಟೆಯಲ್ಲೂ ಏರಿಕೆಯಾಗುತ್ತದೆ. ಅಲ್ಲಿ ಬೆಲೆ ಇಳಿಕೆಯಾದರೆ, ಇಲ್ಲಿಯೂ ಬೆಲೆ ಇಳಿಯುತ್ತದೆ. ಆದರೆ, ಕಳೆದ ಕೆಲ ದಿನಗಳಿಂದ ಚಿನ್ನದ ದರಗಳು ಬಹತೇಕ ಸ್ಥಿರವಾಗಿವೆ.
ಅಬಕಾರಿ ಸುಂಕ(excise duty), ಮೇಕಿಂಗ್ ಶುಲ್ಕಗಳು,ಮತ್ತು ರಾಜ್ಯ ತೆರಿಗೆ(GST)ಗಳಂತಹ ಕೆಲವು ನಿಯತಾಂಕಗಳನ್ನು ಆಧರಿಸಿ ದೇಶದ ವಿವಿಧ ಪ್ರದೇಶಗಳಿಗೆ ಚಿನ್ನ-ಬೆಳ್ಳಿಯ ಬೆಲೆ ಬದಲಾಗುತ್ತದೆ.
ಮೇಲೆ ತಿಳಿಸಿರುವ ಚಿನ್ನ- ಬೆಳ್ಳಿ ಬೆಲೆಗಳು ಮಾರುಕಟ್ಟೆ ಬೆಲೆಗಳಾಗಿದ್ದು, ಇದರಲ್ಲಿ ಜಿಎಸ್ಟಿ, ಮೇಕಿಂಗ್ ಶುಲ್ಕಗಳನ್ನು ಸೇರಿಸಿಲ್ಲ. ಜಿಎಸ್ಟಿ ಸೇರಿಸಿದರೆ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗುತ್ತದೆ. ಆಯಾ ರಾಜ್ಯಗಳ ತೆರಿಗೆಯನ್ನು ಆಧರಿಸಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಈ ಕಾರಣಗಳಿಂದ ದೆಹಲಿಯಲ್ಲಿ ಚಿನ್ನದ ದರ ಬೆಂಗಳೂರಿಗಿಂತ ಸ್ವಲ್ಪ ಹೆಚ್ಚಿರುತ್ತದೆ.
ಅಲ್ಲದೆ ಅಂತರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಹಾಗೂ ಡಾಲರ್ ಎದುರು ಮೌಲ್ಯ ಆಧರಿಸಿ, ಆಯಾ ದಿನದ ಬಂಗಾರ ಹಾಗೂ ಬೆಳ್ಳಿಯ ಬೆಲೆಯು ನಿರ್ಧಾರ ಆಗುತ್ತದೆ. ಇಲ್ಲಿರುವ ಚಿನ್ನ-ಬೆಳ್ಳಿಯ ಬೆಲೆ ಜಿಎಸ್ಟಿ ಸೇರ್ಪಡೆ ಆಗಿಲ್ಲ. ಇಲ್ಲಿರುವ ಚಿನ್ನದ ದರ ಪಟ್ಟಿ ಜಿಎಸ್ಟಿ ಹೊರತುಪಡಿಸಿದ ಬೆಲೆಯಾಗಿದೆ. ಪ್ರತೀ ನಗರ ಹಾಗೂ ನೀವು ವಾಸಿಸುವ ನಗರ ಆಯಾ ದಿನದ ಚಿನ್ನ ಮತ್ತು ಬೆಳ್ಳಿಗೆ ಎಷ್ಟು ಬೆಲೆ ಇದೆ ಎಂಬುದು ಇಲ್ಲಿ ಪ್ರತೀ ದಿನ ತಿಳಿದುಕೊಳ್ಳಬಹುದಾಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯ(International market) ಆಮದು(import ) ಸುಂಕಗಳು, ಮತ್ತು ವಿವಿಧ ತೆರಿಗೆಗಳನ್ನು(taxes) ಆಧರಿಸಿ, ಭಾರತದ ಚಿನ್ನದ ಬೆಲೆಗಳು ನಿರ್ಧಾರವಾಗುತ್ತವೆ. ಇತ್ತೀಚೆಗೆ ಬೆಲೆ ಏರಿಕೆಯ ಪರಿಣಾಮವಾಗಿ ಚಿನ್ನ ಖರೀದಿ ಪ್ರಕ್ರಿಯೆ ಕೆಲವು ಮಟ್ಟದಲ್ಲಿ ಕುಂಠಿತವಾಗಿತ್ತು. ಆದರೆ, ಇದೀಗ ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾದ ಹಿನ್ನೆಲೆಯಲ್ಲಿ ಚಿನ್ನ ಖರೀದಿಸುವುದಕ್ಕೆ ಇದು ಸೂಕ್ತ ಸಮಯ ಎನಿಸುತ್ತದೆ.
ಮಾರುಕಟ್ಟೆಯಲ್ಲಿ ಚಿನ್ನವನ್ನು ಖರೀದಿಸಲು ಹೊರಟಿದ್ದರೆ, ಹಾಲ್ಮಾರ್ಕ್ ನೋಡಿದ ನಂತರವೇ ಚಿನ್ನವನ್ನು ಖರೀದಿಸಿ. ಚಿನ್ನದ ಶುದ್ಧತೆಯನ್ನು ಪರಿಶೀಲಿಸಲು ಸರ್ಕಾರಿ ಅಪ್ಲಿಕೇಶನ್ ಅನ್ನು ಸಹ ಬಳಸಬಹುದು. ‘ಬಿಐಎಸ್ ಕೇರ್ ಆ್ಯಪ್’ ಮೂಲಕ ಚಿನ್ನದ ಶುದ್ಧತೆಯನ್ನು ಕಂಡುಕೊಳ್ಳಬಹುದು. ಇದಲ್ಲದೇ ಈ ಆಪ್ ಮೂಲಕ ದೂರು ಕೂಡಾ ನೀಡಬಹುದು.
ತಜ್ಞರ ಪ್ರಕಾರ, ಚಿನ್ನದ ದರ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ, ಚಿನ್ನ ಖರೀದಿಗೆ ಇದು ಉತ್ತಮ ಸಮಯವಾಗಿದ್ದು, ಹಂತ ಹಂತವಾಗಿ ಚಿನ್ನವನ್ನು ಹೂಡಿಕೆ ಮಾಡಿದರೆ, ನಿಮ್ಮ ಉಳಿತಾಯ ಮತ್ತು ಆರ್ಥಿಕ ಯೋಜನೆಗಳಿಗೆ ಸಕಾರಾತ್ಮಕ ಫಲ ನೀಡುತ್ತದೆ.