Jio ಜಿಯೋ ಸಿಮ್ ಗ್ರಾಹಕರಿಗೆ ಗುಡ್ ನ್ಯೂಸ್.! ಅತ್ಯಂತ ಕಡಿಮೆ ಬೆಲೆ ರಿಚಾರ್ಜ್ ಪ್ಲಾನ್ ಬಿಡುಗಡೆ.!

Jio

ನೋಡನೋಡುತ್ತಿದ್ದಂತೆಯೇ ನಾವು 2024ರ ಅಂತ್ಯಕ್ಕೆ ತಲುಪಿದ್ದೇವೆ. ನೂತನ ವರ್ಷವಾದ 2025ರ ಸ್ವಾಗತಕ್ಕೆ ಅಣಿಯಾಗುತ್ತಿದ್ದೇವೆ. ಮನೆ-ಮನೆಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ಕಛೇರಿಗಳಲ್ಲಿ ಸಂತೋಷ ಕೂಟದ ತಯಾರಿಯೂ ನಡೆಯುತ್ತಿದೆ. ಸಾಮಾನ್ಯವಾಗಿ ಹೊಸ ವರ್ಷದ ವಿಶೇಷಕ್ಕೆ ಮತ್ತೊಂದು ನಿರೀಕ್ಷೆ ಏನೆಂದರೆ ಮಾರುಕಟ್ಟೆಯಲ್ಲಿ ಕೂಡ ಅನೇಕ ಬಗೆಯ ರಿಯಾಯಿತಿ (New Year Offer) ಆಫರ್ ಕೂಡ ಇರುತ್ತದೆ, ಇದರಿಂದ ಸಂಭ್ರಮವೂ ದುಪ್ಪಟ್ಟು.

WhatsApp Group Join Now
Telegram Group Join Now

2025ರಲ್ಲಿ ನೀವು ಕೂಡ ಈ ರೀತಿಯ ಕೊಡುಗೆಗಳನ್ನು ನಿರೀಕ್ಷಿಸುತ್ತಿದ್ದರೆ ಎಂದಿನ ಆಫರ್ಗಳೊಂದಿಗೆ ಟೆಲಿಕಾಂ ಸಂಸ್ಥೆ ಕಡೆಯಿಂದ ಕೂಡ ಗಿಫ್ಟ್ ಇದೆ. ದೇಶದ ಪ್ರತಿಷ್ಠಿತ ಕಲಿಕಾ ಸಂಸ್ಥೆಗಳಲ್ಲಿ ಒಂದಾಗಿ ಹೆಸರು ಮಾಡಿರುವ ಮುಖೇಶ್ ಅಂಬಾನಿ ಒಡೆತನದ ಜಿಯೋ ಸಿಮ್ (Jio Sim) ಬಳಕೆದಾರರಿಗೆ ಹೊಸ ವರ್ಷಕ್ಕೂ ಮುಂಚೆಯೇ ಈ ಉಡುಗೊರೆ ಸಿಗುತ್ತಿದೆ.

ರಿಲಯನ್ಸ್ ಜಿಯೋ ನಮ್ಮ ದೇಶದಲ್ಲಿ ಕೋಟ್ಯಾಂತರ ಗ್ರಾಹಕರನ್ನು ಹೊಂದಿದೆ. ಈಗ ಈ ಬಳಕೆದಾರರಿಗೆಲ್ಲಾ ಜಿಯೋದಿಂದ ಹೊಸ ವರ್ಷದ ಕೊಡುಗೆಯ ರೂಪದಲ್ಲಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಬಿಡುಗಡೆಯಾಗಿದೆ. ಇತ್ತೀಚೆಗೆ ರಿಲಯನ್ಸ್ ಕಂಪನಿಯು ತನ್ನ ರಿಚಾರ್ಜ್ ಬೆಲೆಯನ್ನು ಹೆಚ್ಚಾಗಿಸಿತ್ತು.

ಇದರಿಂದ ಬೇಸತ್ತ ಗ್ರಾಹಕರು ಅಪಾರ ಅಸಮಾಧಾನವನ್ನು ಕೂಡ ಹೊರ ಹಾಕಿದ್ದರು. ಇದೇ ಕಾರಣದಿಂದ ಪೋರ್ಟ್ ಟೂ ಬಿಎಸ್ಎನ್ಎಲ್ (Port to BSNL) ಎನ್ನುವ ಅಭಿಯಾನ ಕೂಡ ಶುರು ಆಗಿತ್ತು. ಇತ್ಯಾದಿ ಬೆಳವಣಿಗಳಿಂದ ಕಂಪನಿ ಎಚ್ಚೆತ್ತುಕೊಂಡಂತೆ ಕಂಡು ಬಂದಿದೆ. ಹೀಗಾಗಿ ಹೊಸ ವರ್ಷದ ನೆಪದಲ್ಲಿ ರಿಚಾರ್ಜ್ ಬೆಲೆ ತಗ್ಗಿಸುವ ಹಾಗೂ ಅಗ್ಗದ ರಿಚಾರ್ಜ್ ನಲ್ಲಿಯೇ ಅತಿ ಹೆಚ್ಚು ಸೌಲಭ್ಯಗಳನ್ನು ಒದಗಿಸುವ ನಿರ್ಧಾರ ತಳೆದಿದೆ.

ದೇಶದಲ್ಲಿ ಇಂಟರ್ನೆಟ್ ಬಳಕೆ ವಿಚಾರದಲ್ಲಿ ಹೊಸದೊಂದು ಕ್ರಾಂತಿಯ ಅಲೆಯನ್ನೇ ಎಬ್ಬಿಸಿ ಪ್ರಖ್ಯಾತಿಯಾಗಿದ್ದ ಜಿಯೋ ಸಿಮ್ ಆರಂಭದಲ್ಲಿ ಉಚಿತ ಇಂಟರ್ನೆಟ್ ಮತ್ತು ಉಚಿತ ಅನ್ಲಿಮಿಟೆಡ್ ಕರೆಗಳ ಸೇವೆ ಕಾರಣದಿಂದ ಪ್ರಸಿದ್ಧಿಯಾಗಿತ್ತು. ಭಾರತದ ಕಟ್ಟ ಕಡೆಯ ಗ್ರಾಮದ ವ್ಯಕ್ತಿಯೂ ಕೂಡ ಜಿಯೋ ಸಿನಿಮಾದ ಪ್ರಯೋಜನಗಳ ಬಗ್ಗೆ ಕೊಂಡಾಡಿದ್ದ.

ಇದೇ ವೇಗದಲ್ಲಿ ದೇಶದಾದ್ಯಂತ ಅತಿ ಹೆಚ್ಚು ಗ್ರಾಹಕರನ್ನು ಪಡೆದ ಕಂಪನಿಗೆ ಕೂಡ ಆಗಿತ್ತು ಆದರೆ ಇದ್ದಕ್ಕಿದ್ದಂತೆ ರಿಚಾರ್ಜ್ ಪ್ಲಾನ್ ಮೊತ್ತ ಹೆಚ್ಚಾಗಿ ಜಿಯೋ ರಿಚಾರ್ಜ್ ಬಹಳ ದುಬಾರಿ ಎನ್ನುವ ದೂರು ಹೊತ್ತಿಕೊಳ್ಳಬೇಕಾಗಿ ಬಂದಿತ್ತು. ಹೀಗಾಗಿ ಈ ನಡುವೆ ಮತ್ತೊಂದು ಬದಲಾವಣೆ ಕಂಡು ಬಂದಿದೆ ಅದರಲ್ಲೂ ಹೊಸ ವರ್ಷದ ಸಲುವಾಗಿ ಕಂಪನಿ ಕಡೆಯಿಂದ ವಿಶೇಷ ಆಫರ್ ರೂಪದಲ್ಲಿ 90 ದಿನಗಳ ಅಗ್ಗದ ರೀಚಾರ್ಜ್ ಪ್ಲಾನ್ ಸಿಗುತ್ತಿದೆ. ಈ ಆಫರ್ ನ ವಿಶೇಷತೆಗಳು ಹೀಗಿವೆ.

ಒಟ್ಟು 90 ದಿನಗಳಿಗೆ ಕೇವಲ ರೂ. 899ರಲ್ಲಿ ದಿನಕ್ಕೆ 10 ರೂ.ಗಿಂತಲೂ ಕಡಿಮೆ ಖರ್ಚಿಯಲ್ಲಿ ಪ್ರತಿನಿತ್ಯ 2GB 5G ಸ್ಪೀಡ್ ಇಂಟರ್ನೆಟ್ ಉಚಿತವಾಗಿ ಸಿಗಲಿದೆ. ಅಲ್ಲದೆ, ಇದರೊಂದಿಗೆ ಪೂರ್ತಿ ಮೂರು ತಿಂಗಳವರೆಗೂ ಕೂಡ ಪ್ರತಿ ದಿನ 100 ಉಚಿತ SMS ಸೌಲಭ್ಯವೂ ಸಹ ಸಿಗಲಿದೆ.

ಇಷ್ಟೇ ಅಲ್ಲದೆ ಇದೇ ರಿಚಾರ್ಜ್ ಪ್ಲಾನ್ ನಲ್ಲಿ ಹೆಚ್ಚುವರಿ ಸೌಲಭ್ಯ ಕೂಡ ಲಭ್ಯವಿದೆ. ಜಿಯೋ 899 ರೂ.ಗಳ ರಿಚಾರ್ಜ್ ನಲ್ಲಿಯೇ ಮೇಲೆ ತಿಳಿಸಿದ ಅನುಕೂಲತೆಗಳ ಜೊತೆಗೆ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ಉಚಿತ ಪ್ರವೇಶವೂ ಲಭ್ಯವಿರಲಿದೆ ಎಂದು ಕಂಪನ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment