Gruhalakshmi: ಗೃಹಲಕ್ಷ್ಮಿ ಯೋಜನೆ 16ನೇ ಕಂತಿನ ಹಣ ಜಮೆ ದಿನಾಂಕ ಘೋಷಣೆ.!

Gruhalakshmi

ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳು (Guarantee Schemes) ದೇಶದಾದ್ಯಂತ ಚರ್ಚೆ ಮಾಡುತ್ತಿವೆ. ಅದರಲ್ಲೂ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಲಿಂಗ ಸಮಾನತೆ ಕಾಯ್ದುಕೊಳ್ಳುವ ಉದ್ದೇಶದಿಂದ ರೂಪಿಸಲಾಗಿರುವ ಗೃಹಲಕ್ಷ್ಮಿ (Gruhalakshmi Scheme) ಯೋಜನೆ ಅತಿ ದೊಡ್ಡ ಮೊತ್ತದ ಬಜೆಟ್ ನ ಯೋಜನೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗ ಆಗಿರುವ ಯೋಜನೆ ಎನ್ನುವ ಖ್ಯಾತಿ ಗಳಿಸಿಕೊಂಡಿದೆ.

WhatsApp Group Join Now
Telegram Group Join Now

2023ರ ಆಗಸ್ಟ್ 2023 ತಿಂಗಳಲ್ಲಿ ಗೃಹಲಕ್ಷ್ಮಿ ಯೋಜನೆ ಲಾಂಚ್ ಆಗಿತ್ತು. ಅಂದಿನಿಂದ ಈವರೆಗೆ ಯಶಸ್ವಿಯಾಗಿ 15 ಕಂತುಗಳನ್ನು ಯೋಜನೆ ಪೂರೈಸಿದೆ. ಈಗ ಜನವರಿ ತಿಂಗಳಲ್ಲಿ 16ನೇ ಕಂತಿನ ( 16 th month Gruhalakshmi amout) ಹಣ ಬಿಡುಗಡೆಯ ಸಮಯ. ಇದು ಯಾವಾಗ ಆಗುತ್ತದೆ? ಮತ್ತು 13 & 14 ಕಂತಿನ ಹಣ ಅನೇಕರಿಗೆ ತಲುಪಿಲ್ಲ ಎನ್ನುವ ದೂರು ಇರುವುದರಿಂದ ಈ ಬಗ್ಗೆ ಸಚಿವರು ಏನು ಹೇಳಿದರು ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇವೆ.

ರಾಜ್ಯದಲ್ಲಿ ಒಟ್ಟು 1.10 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಫಲಾನುಭವಿಗಳ ಖಾತೆಗೆ ನೇರವಾಗಿ ಪ್ರತಿ ತಿಂಗಳು DBT ಮುಖಾಂತರ ಗೃಹಲಕ್ಷ್ಮಿ ಯೋಜನೆಯ ರೂ. 2000 ಅನುದಾನ ಜಮೆ ಮಾಡಲಾಗುತ್ತಿದೆ. ಆದರೆ ಕಡೆಯ 13 ಹಾಗೂ 14ನೇ ಕಂತಿನ ಹಣವನ್ನು ಅನೇಕರು ಪಡೆದಿಲ್ಲ.

ಈ ಬಗ್ಗೆ ಗೊಂದಲಗಳಾಗಿದ್ದು, ಇದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಹಾಗೂ ಗೃಹಲಕ್ಷ್ಮಿ ಯೋಜನೆಯ ರೂವಾರಿಯೂ ಆಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ (Minister Lakshmi Hebbalkat ) ಅವರು ಮಾತನಾಡಿದ್ದಾರೆ. ತಾಂತ್ರಿಕ ದೋಷ ಹಾಗೂ ಇನ್ನಿತರ ಸಮಸ್ಯೆಗಳಿಂದ 13 ಹಾಗೂ 14ನೇ ಕಂತಿನ ಹಣವು ಜಮೆ ತಡವಾಗುತ್ತು ಆದರೆ ಸರ್ಕಾರದಿಂದ ಇಲಾಖೆಗೆ ಹಣ ಬಿಡುಗಡೆಯಾಗಿದೆ. ಡಿಸೆಂಬರ್ ತಿಂಗಳಲ್ಲಿ ಹಲವು ಕಡೆ ಮಹಿಳೆಯರು ಒಟ್ಟಿಗೆ 13 ಹಾಗೂ 14ನೇ ಕಂತಿನ ಹಣ ಪಡೆದಿದ್ದಾರೆ.

ಮೊದಲ ಹಂತದಲ್ಲಿ ಬೆಳಗಾವಿ, ಕಲ್ಬುರ್ಗಿ, ಬೀದರ್, ವಿಜಯಪುರ ಬಳ್ಳಾರಿ, ಗದಗ, ಬಾಗಲಕೋಟೆ, ಹಾವೇರಿ, ಯಾದಗಿರಿ, ಚಿತ್ರದುರ್ಗ, ಬೆಂಗಳೂರು, ಕೊಪ್ಪಳ ಜಿಲ್ಲೆಯ ಮಹಿಳೆಯರು ಪಡೆದಿದ್ದಾರೆ. ಇತರ ಜಿಲ್ಲೆಗಳ ಮಹಿಳೆಯರು ಮುಂದಿನ ಹಂತದಲ್ಲಿದ್ದಾರೆ, ಇನ್ನೊಂದು ವಾರದಲ್ಲಿ ಹಣ ಪಡೆಯಲಿದ್ದಾರೆ.

ಹಾಗೆ ಜನವರಿ ತಿಂಗಳ ಗೃಹಲಕ್ಷ್ಮಿ ಹಣವು ಜನವರಿ 12 ರಂದು ಬಿಡುಗಡೆ ಆಗುವುದು ಎಂದು ಅಪ್ಡೇಟ್ ನೀಡಿದ್ದಾರೆ. ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಮಹಿಳೆಯರ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಮುಖ್ಯ ದಾಖಲೆಗಳಾಗಿದೆ.

ಅಲ್ಲದೇ ಈ ಎಲ್ಲ ದಾಖಲೆಗಳಲ್ಲಿ ಮಹಿಳೆಯ ಹೆಸರು ಒಂದೇ ರೀತಿಯಲ್ಲಿ ಇರಬೇಕು ಹಾಗೂ ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು. ಈ ಯೋಜನೆಗೆ ಮಹಿಳೆಯು ಅರ್ಹರಾಗಿತ್ತು ಅರ್ಜಿ ಸಲ್ಲಿಸಿದ್ದರೆ ದಾಖಲೆಗಳು ಸರಿ ಇದ್ದರೆ ಪ್ರತಿ ತಿಂಗಳು ಗೃಹಲಕ್ಷ್ಮಿಯ ಹಣ ಜಮೆಯಾದ ಕೂಡಲೇ ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ SMS ಬರುತ್ತದೆ.

ಸರ್ವರ್ ಅಥವಾ ಇನ್ನಿತರ ತಾಂತ್ರಿಕ ಸಮಸ್ಯೆಯಿಂದ ನೀವು ಬ್ಯಾಂಕ್ ನಿಂದ SMS ರಿಸೀವ್ ಮಾಡದೆ ಇದ್ದರೆ ಸ್ಟೇಟ್ DBT ಕರ್ನಾಟಕ App ಡೌನ್ಲೋಡ್ ಮಾಡಿಕೊಂಡು ಕೂಡ ನಿಮಗೆ ಗೃಹಲಕ್ಷ್ಮಿ ಯೋಜನೆ, ಮತ್ತು ಇನ್ಯಾವುದಾದರೂ ಸರ್ಕಾರದ ಯೋಜನೆಯ ಫಲಾನುಭವಿಗಳಾಗಿದ್ದರೆ ಆ ಹಣವು ಜಮೆಯಾಗಿದೆಯೇ ಎನ್ನುವುದನ್ನು ಚೆಕ್ ಮಾಡಿಕೊಳ್ಳಬಹುದು.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment