HSRP
ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ಕಳೆದ ವರ್ಷ ಒಂದು ಪ್ರಮುಖವಾದ ನಿಯಮವನ್ನು ಜಾರಿಗೆ ತಂದಿತ್ತು. ಅದೇನೆಂದರೆ, 2019ಕ್ಕೂ ಮುಂಚೆ ಖರೀದಿಸುವ ಎಲ್ಲಾ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯ ಎನ್ನುವ ನಿಯಮವನ್ನು ಜಾರಿಗೆ ತಂದಿದೆ. ಕರ್ನಾಟಕದಲ್ಲಿ ಮಾತ್ರವಲ್ಲ ಈಗಾಗಲೇ ದೇಶದ ಅನೇಕ ರಾಜ್ಯಗಳು ಕಟ್ಟುನಿಟ್ಟಾಗಿ ಈ ನಿಯಮವನ್ನು ದೇಶದ ಆಂತರಿಕ ರಕ್ಷಣೆ ಹಾಗೂ ವಾಹನ ಮಾಲೀಕರ ಅನುಕೂಲಕ್ಕಾಗಿ ಅಳವಡಿಸಿಕೊಂಡಿವೆ.
ಕರ್ನಾಟಕದಲ್ಲಿ 2023 ರ ಆಗಸ್ಟ್ ತಿಂಗಳಿನಿಂದಲೇ, ಈ ಬಗ್ಗೆ ನಿಯಮ ತಪ್ಪದೇ ಪಾಲಿಸುವಂತೆ ಸೂಚನೆ ಕೊಟ್ಟಿದೆ ಮತ್ತು ಗರಿಷ್ಠ ಆರು ಬಾರಿ HSRP ನಂಬರ್ ಪ್ಲೇಟ್ ಅಳವಡಿಕೆಗೆ ನೀಡಿದ್ದ ಕೊನೆಯ ಗಡ ವನ್ನು ವಿಸ್ತರಿಸಿತ್ತಾ ಬಂದಿದ್ದು ಇದೆ. ಈಗ ಅಂತಿಮವಾಗಿ ಜನವರಿ 31 ಕ್ಕೆ ಕೊನೆಯ ಅವಕಾಶವನ್ನು ನೀಡಿದೆ. ಒಂದು ವೇಳೆ ಇದನ್ನು ಪಾಲಿಸದೆ ಇದ್ದರೆ ಆಗಬಹುದಾದ ನಷ್ಟಗಳೇನು ಮತ್ತು ಕ್ರಮಗಳೇನು ಹಾಗೂ ಯಾವ ಕಾರಣದಿಂದ ಇದು ಮುಖ್ಯ ಮತ್ತು HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವುದು ಹೇಗೆ ಎನ್ನುವ ಮಾಹಿತಿಗಾಗಿ ಅಂಕಣವನ್ನು ಕೊನೆವರೆಗೂ ಓದಿ.
HSRP ಎಂದರೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ (High Security Number Plate) ಸುರಕ್ಷತೆಯ ದೃಷ್ಟಿಯಿಂದ ಮೋಟಾರು ವಾಹನ ಕಾಯ್ದೆ-1989 ಸೆಕ್ಷನ್ 50 ಹಾಗೂ 51 ಅನ್ವಯ ಎಲ್ಲಾ ವಾಹನಗಳಿಗೆ ಗರಿಷ್ಠ ಭದ್ರತೆಯ ನಂಬರ್ ಪ್ಲೇಟ್ಗಳಾಗಿ ಇವುಗಳನ್ನು ಅಳವಡಿಸಬೇಕಿದೆ. ಈ ನಂಬರ್ ಪ್ಲೇಟ್ಗಳು ವಿಶೇಷವಾದದ್ದು ಇವುಗಳನ್ನು ತಿದ್ದಲು ಅಥವಾ ಸುಲಭವಾಗಿ ಬದಲಾಯಿಸಲು ಸಾಧ್ಯವಾಗುವುದಿಲ್ಲ ಜೊತೆಗೆ ಡಾಟಾ ಸಂಗ್ರಹಣೆಯಲ್ಲಿ ವಾಹನ ಮಾಲೀಕರ ಸರಿಯಾದ ಮಾಹಿತಿ ದೊರೆಯುತ್ತದೆ.
ಹೀಗಾಗಿ ಈ ನಿಯಮಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಇದನ್ನು ಪಾಲಿಸುವುದರಿಂದ ಮಾಲೀಕರಿಗೆ ತಮ್ಮ ವಾಹನಗಳು ಕಳುವಾದಾಗ ದೂರು ನೀಡಿದರೆ ಪೊಲೀಸರಿಗೆ ಸುಲಭವಾಗಿ ಪತ್ತೆ ಹಚ್ಚಲು ಮತ್ತು ವಾಹನಗಳು ಅನಧಿಕೃತ ಚಟುವಟಿಕೆಗಳಿಗೆ ತಡೆಗಟ್ಟಲು ಸಾಧ್ಯವಾಗುತ್ತದೆ.
2019 ರ ನಂತರ ಖರೀದಿಸುವ ವಾಹನಗಳಿಗೆ HSRP ನಂಬರ್ ಪ್ಲೇಟ್ ಇರುವುದರಿಂದ ಅದಕ್ಕೂ ಮುಂದೆ ಖರೀದಿಸಿರುವ ವಾಹನಗಳಿಗೆ ಹಳೆಯ ನಂಬರ್ ಪ್ಲೇಟ್ ಬದಲಾಯಿಸಿ ಹೊಸ ನಿಯಮದ ಪ್ರಕಾರವಾದ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿದೆ ಒಂದು ವೇಳೆ ಇದು ತಪ್ಪಿದಲ್ಲಿ ಆಗುವ ಸಮಸ್ಯೆಗಳೆಂದರೆ,
* ಒಂದು ವೇಳೆ ಮಾಲೀಕರು HSRP ಅಳವಡಿಸದಿದ್ದರೆ ಮಾಲೀಕತ್ವದ ಬದಲಾವಣೆ, ವಿಳಾಸ ಬದಲಾವಣೆ, ನಕಲಿ RC ವಿಮೆ ಹಾಗೂ ಇನ್ನಿತರ ಕೆಲಸಗಳನ್ನು ಮಾಡಲಾಗುವುದಿಲ್ಲ ಮತ್ತು ಇನ್ನಿತರ ಸಮಸ್ಯೆಗಳು ಬರುತ್ತವೆ.
ವಿಧಾನ:-
- ಮೊದಲಿಗೆ ಸರ್ಕಾರದ ಅಧಿಕೃತ ವೆಬ್ಸೈಟ್ಗಳಾದ https://transport.karnataka.gov.in ಅಥವಾ www.siam.in ಭೇಟಿ ನೀಡಿ
- Book HSRP ಎನ್ನುವ ಆಪ್ಷನ್ ಮೇಲ ಕ್ಲಿಕ್ ಮಾಡಿ
- ನಿಮ್ಮ ವಾಹನ ಯಾವ ಕಂಪನಿಯದ್ದು ಆಯ್ಕೆಮಾಡಿರಿ.
- ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ, ವಾಹನದ ಬಗ್ಗೆ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಗಳನ್ನು ಆಯ್ಕೆ ಮಾಡಿ
- HSRP ಅಳವಡಿಕೆಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳವನ್ನು ಆಯ್ಕೆಮಾಡಿ.
- HSRP ಶುಲ್ಕವನ್ನು ಆನ್ಲೈನ್ನಲ್ಲಿ ಪಾವತಿಸಿ.
- ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ OTP ರವಾನೆಯಾಗುತ್ತದೆ.
- ನಿಮ್ಮ ಅನುಕೂಲಕ್ಕೆ, ತಕ್ಕಂತೆ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆಮಾಡಿ.
- ಹತ್ತಿರದ ಶೋರೂಮ್ ಅಥವಾ ಡೀಲರ್ ಗಳ ಬಳಿ ನಂಬರ್ ಪ್ಲೇಟ್ ಬದಲಾಯಿಸಿಕೊಳ್ಳಿ.