Jio
ರಿಲಾಯನ್ಸ್ ಜಿಯೋ (Reliance Jio) ಗ್ರಾಹಕರಿಗೆ ಒಂದು ಬಂಪರ್ ಆಫರ್ ಇದೆ. ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಸಂಸ್ಥೆಯು ತನ್ನ ಗ್ರಾಹಕರಿಗೆ ಸದಾ ಕಾಲ ವಿಶೇಷವಾದ ಕೊಡುಗೆಗಳನ್ನು ನೀಡುತ್ತಿರುತ್ತದೆ. ಇದೇ ಕಾರಣಕ್ಕಾಗಿ ಇಂದಿಗೂ ದೇಶದ ಪ್ರತಿಷ್ಠಿತ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾಗಿ ಜಿಯೋ ಸಂಸ್ಥೆ ಹೆಸರುವಾಸಿಯಾಗಿದೆ.
ಭಾರತದ ಇತಿಹಾಸದಲ್ಲಿ ಅತಿ ಕಡಿಮೆ ಬೆಲೆಗೆ ಮತ್ತು ಆರಂಭದಲ್ಲಿ ಉಚಿತವಾಗಿ ಇಂಟರ್ನೆಟ್ ಸೌಲಭ್ಯ ನೀಡಿ ಜೊತೆಗೆ ಉಚಿತ ಅನ್ಲಿಮಿಟೆಡ್ ಕರೆಗಳ ಅನೂಕೂಲತೆಗಳನ್ನು ನಮ್ಮ ದೇಶದ ಹಳ್ಳಿ ಹಳ್ಳಿಯ ಮೂಲೆ ಮೂಲೆಗಳಿಗೂ ತಲುಪಿಸಿದ ಖ್ಯಾತಿ ಖಂಡಿತವಾಗಿಯೂ ಜಿಯೋ ನೆಟ್ವರ್ಕ್ ಗೆ ಸೇರಬೇಕು.
ಹಾಗಾಗಿ ಇಂದಿಗೂ ಕೂಡ ಜನಸಾಮಾನ್ಯರಿಗೆ ಜಿಯೋ ಎಂದರೆ ಒಂದು ಬಗೆಯ ಸೆಂಟಿಮೆಂಟ್ ಎಂದರೂ ತಪ್ಪಾಗಲಾರದು. ಭಾರತದಾದ್ಯಂತ ಕೋಟ್ಯಾಂತರ ಗ್ರಾಹಕರನ್ನು ಹೊಂದಿರುವ ಜಿಯೋ ತನ್ನ ಗ್ರಾಹಕರ ಆಸಕ್ತಿ, ಅನುಕೂಲತೆ ಹಾಗೂ ಸಂತೋಷಕ್ಕಾಗಿ ಆಗಾಗ ತನ್ನ ರಿಚಾರ್ಜ್ ದರಗಳನ್ನು ಪರಿಷ್ಕರಿಸಿ ಪೋಷಿಸುತ್ತದೆ.
ಆದರೆ ತೀರ ಇತ್ತೀಚಿಗೆ ಜಿಯೋ ನೆಟ್ವರ್ಕ್ ನ ರಿಚಾರ್ಜ್ ಗಳು ದುಬಾರಿ ಎನ್ನುವ ದೂರು ಕೇಳಿಬಂದಿತ್ತು. ಅಲ್ಲದೆ ಆರಂಭದಲ್ಲಿ ಉಚಿತವಾಗಿ ಹಾಗೂ ಅಗ್ಗವಾಗಿ ಇಂಟರ್ನೆಟ್ ಸೌಲಭ್ಯ ಕೊಟ್ಟು ಈಗ ಒಂದೇ ಬಾರಿಗೆ ರಿಚಾರ್ಜ್ ದರಗಳನ್ನು ಏರಿಸಿದ್ದರಿಂದ ಪರಿಣಾಮವಾಗಿ ತನ್ನ ಗ್ರಾಹಕರಿಂದಲೇ ದೂರನ್ನು ಕೇಳಬೇಕಾಗಿ ಬಂತು.
ಈ ನಡುವೆ ಪೋರ್ಟ್ ಟೂ BSNL ಎನ್ನುವ ಅಭಿಯಾನ ಕೂಡ ಶುರುವಾಗಿತ್ತು ಇದೆಲ್ಲದರ ಬಳಿಕ ಗ್ರಾಹಕರನ್ನು ಸುಧಾರಿಸುವ ಉದ್ದೇಶದಿಂದ ಹೊಸ ವರ್ಷದ ಸಂದರ್ಭದಲ್ಲಿ ಹೊಸ ರಿಚಾರ್ಜ್ ಪ್ಯಾಕ್ ಗಳನ್ನು ಕೂಡ ಜಿಯೋ ಘೋಷಿಸಿದೆ. ಈಗ ಮುಂದುವರೆದ ಭಾಗವಾಗಿ 11 ರೂಪಾಯಿಗೆ 10gb ಡಾಟಾ ನೀಡುವ ಯೋಜನೆಯಲ್ಲಿದೆ ಈ ಪ್ಲಾನಿಂಗ್ ವಿವರಗಳು ಹಾಗೂ ಇದೇ ಮಾದರಿಯ ಇನ್ನೆಷ್ಟು ಪ್ಲಾನಿಂಗ್ ಜಿಯೋ ಹೊಂದಿದೆ ಎನ್ನುವುದರ ವಿವರ ಹೀಗಿದೆ ನೋಡಿ.
ರೂ. 11, ರೂ. 19, ರೂ.29 ಹಾಗೂ ರೂ. 49ರ ಡಾಟಾ ಪ್ಯಾಕ್ ಬೇಸ್ಡ್ ರಿಚಾರ್ಜ್ ಪ್ಲಾನ್ ಗಳನ್ನು ಜಿಯೋ ಘೋಷಿಸಿದೆ. ಇದರಲ್ಲಿ ರೂ. 11 ರಿಚಾರ್ಜ್ ಗೆ ಒಂದು ಗಂಟೆ ವ್ಯಾಲಿಡಿಟಿಯಲ್ಲಿ 10GB ವರೆಗೆ ಡೇಟಾವನ್ನು ಪಡೆಯಬಹುದು. ಆದರೆ ಆಕ್ಟಿವ್ ಬೇಸ್ ಪ್ರಿಪೇಯ್ಡ್ ಪ್ಲಾನ್ ರಿಚಾರ್ಜ್ ಮಾಡಿದ್ದರೆ ಮಾತ್ರ ಈ ರಿಚಾರ್ಜ್ ಪ್ಲಾನ್ ಬಳಸಬಹುದು ಎನ್ನುವ ಕಂಡೀಶನ್ ಇದೆ.
ರೂ. 19 ರ ವೌಚರ್ ಪ್ಲಾನ್ ಬಗ್ಗೆ ಹೇಳುವುದಾದರೆ ಇದು 1 ದಿನ ವ್ಯಾಲಿಡಿಟಿಯಲ್ಲಿ 1.5GB ಡೇಟಾವನ್ನು ನೀಡುತ್ತದೆ. ಈ ಪ್ಲಾನ್ ಕೂಡ ಬೇಸ್ ಪ್ಲಾನ್‌ನ ವ್ಯಾಲಿಡಿಟಿವರೆಗೂ ಮಾತ್ರ ಮಾನ್ಯವಾಗಿರುತ್ತದೆ. ರೂ. 29ರ ವೌಚರ್ ಬಗ್ಗೆ ವಿವರಿಸುವುದಾದರೆ ಇದು 2 ದಿನಗಳ ವ್ಯಾಲಿಡಿಟಿಯಲ್ಲಿ 2GB ಡೇಟಾವನ್ನು ನೀಡುತ್ತದೆ.
2 ದಿನಗಳ ನಂತರ ಉಳಿದ ಡೇಟಾ ಒಂದು ವೇಳೆ ಉಳಿತಾಯವಾಗಿದ್ದರು ಕೊನೆಗೊಳ್ಳುತ್ತದೆ. ಈ ಪ್ರಯೋಜನಕ್ಕಾಗಿ ಕೂಡ ಬೇಸ್ ಪ್ಲಾನ್ ರಿಚಾರ್ಜ್ ಆಗಿರಬೇಕು. ರೂ. 49ರ ರಿಚಾರ್ಜ್ ಗೆ ಗ್ರಾಹಕರಿಗೆ 25GB ಡೇಟಾವನ್ನು ಒಂದು ದಿನವರೆಗೆ ನೀಡಲು, ಅವಕಾಶ ನೀಡಲಾಗಿದೆ. ಒಂದು ದಿನದ ಡೇಟಾ ಬೇಕಾದರೆ ಇದು ಉತ್ತಮ ಆಯ್ಕೆ ಅಭಿಪ್ರಾಯ. ಆಕ್ಟಿವ್ ಬೇಸ್ ಪ್ಲಾನ್ ಇದ್ದರೆ ಮಾತ್ರ ಕಾರ್ಯನಿರ್ವಹಿಸುವುದು.