Jio Sim ಗ್ರಾಹಕರಿಗೆ ಸಿಗಲಿದೆ 2150 ಗಿಫ್ಟ್.!

Jio Sim

ಅಂಬಾನಿ ಒಡೆತನದ ರಿಲಯನ್ಸ್ ಕಂಪನಿಯು ಸದಾ ಕಾಲ ತನ್ನ ಗ್ರಾಹಕರಿಗೆ ಸಂತಸ ಪಡಿಸುವ ವಿಚಾರವನ್ನು ಹಂಚಿಕೊಳ್ಳುತ್ತದೆ. ಹೊಸ ವರ್ಷದ ಸಂದರ್ಭದಲ್ಲಿ ಬ್ಯಾಕ್ ಟು ಬ್ಯಾಕ್ ಹಲವು ಬಗೆಯ ರಿಚಾರ್ಜ್ ಪ್ಯಾಕ್ ಗಳನ್ನು ಘೋಷಿಸಿ ಗುಡ್ ನ್ಯೂಸ್ ಕೊಟ್ಟಿದ್ದ ಜಿಯೋ (Jio) ಕಡೆಯಿಂದ ಈಗ ಮತ್ತೊಂದು ಬಂಪರ್ ಆಫರ್ ಲಭ್ಯವಿದೆ.

WhatsApp Group Join Now
Telegram Group Join Now

ಹೊಸ ವರ್ಷದ ಸಂಭ್ರಮಾಚರಣೆಯ ಉದ್ದೇಶದಿಂದ ತನ್ನ ಗ್ರಾಹಕರಿಗೆ ಗಿಫ್ಟ್ ನೀಡಲು ವೋಚರ್ (Gift and Voucher on Recharge packs) ಒಂದನ್ನು ರಿಚಾರ್ಜ್ ಪ್ಯಾಕ್ ಗಳ ಮೇಲೆ ನೀಡುತ್ತಿರುವ ಕಂಪನಿಯು km ಬಹಳ ವಿಭಿನ್ನವಾಗಿ ಇದನ್ನು ಪ್ಲಾನ್ ಮಾಡಿದೆ.

2025ರ ಶುಭಾರಂಭದಲ್ಲಿ ರೂ. 2,150 ಮೌಲ್ಯದ ಈ ವೋಚರ್ ಗಿಫ್ಟ್ ಸಿಗುತ್ತಿದ್ದು ಜಿಯೋ ಸಿಮ್ ಬಳಕೆದಾರರೆಲ್ಲರೂ ಇದನಬ ಪಡೆದುಕೊಳ್ಳಬಹುದು ಅಂತಹ ಆಫರ್ ಇದಾಗಿದೆ ಇದನ್ನು ಪಡೆಯುವುದು ಹೇಗೆ? ಮತ್ತು ವೋಚರ್ ಹೇಗೆಲ್ಲ ಬಳಕೆಯಾಗುತ್ತದೆ ಎನ್ನುವ ಡೀಟೇಲ್ಸ್ ಹೀಗಿದೆ ನೋಡಿ.

2025ರ ಪ್ರಯುಕ್ತವಾಗಿ ರಿಲಯನ್ಸ್ ಜಿಯೋ ಕಂಪನಿಯು ನ್ಯೂ ಇಯರ್ ವೆಲ್‌ಕಮ್ ಎಂಬ ಹೆಸರಿನಲ್ಲಿ ರೀಚಾರ್ಜ್ ಪ್ಯಾಕ್ ಘೋಷಿಸಿದೆ. ಇದೀಗ ಜಿಯೋ ಬಳಕೆದಾರರು 2025 ರೂಪಾಯಿ ಮೌಲ್ಯದ ಈ ಪ್ರಿಪೇಯ್ಡ್ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡರೆ ಈ ಪ್ಲಾನ್ ಆಕ್ಟಿವ್ ಆದ ಬಳಿಕ ಗ್ರಾಹಕರಿಗೆ 2 ಸಾವಿರಕ್ಕೂ ಅಧಿಕ ಮೌಲ್ಯದ ವೋಚರ್ ಗಿಫ್ಟ್ ರೂಪದಲ್ಲಿ ಸಿಗುತ್ತದೆ. ಈ ಪ್ಲಾನ್ ಡಿಸೆಂಬರ್ 11ರಂದೇ ಲಾಂಚ್ ಆಗಿತ್ತು ಜನವರಿ 11ರಂದು ಈ ಆಫರ್ ಪ್ಲಾನ್ ಮುಗಿಯುತ್ತಿದೆ.

ಹಾಗಾಗಿ ನೀವು ಜಿಯೋ ಗ್ರಾಹಕರಾಗಿದ್ದರೆ ತಡ ಮಾಡದೆ ಇದರ ಅನುಕೂಲ ಪಡೆದುಕೊಳ್ಳಿ. ಈ ರೂ.2025ರ ರಿಚಾರ್ಜ್ ಪ್ಲಾನಿಂಗ್ ಫೀಚರ್ಸ್ ಬಗ್ಗೆ ಹೇಳುವುದಾದರೆ ಇದು ಭರ್ತಿ 200 ದಿನಗಳ ವ್ಯಾಲಿಡಿಟಿ ಹೊಂದಿದೆ ಮತ್ತು 200 ದಿನಗಳವರೆಗೆ ಪ್ರತಿನಿತ್ಯವೂ ಅನ್‌ಲಿಮಿಟೆಡ್ ವಾಯ್ಸ್ ಕಾಲ್, ಉಚಿತ 100 SMS, ಅನ್‌ಲಿಮಿಟೆಡ್ 2.5GB 5G ಡೇಟಾ ಸಹ ಸಿಗುತ್ತದೆ.

200 ದಿನಗಳಲ್ಲಿ ಬಳಕೆದಾರರಿಗೆ ಒಟ್ಟು 500 GB ಲಭ್ಯವಾಗುತ್ತದೆ. ಇದಿಷ್ಟು ಮಾತ್ರವಲ್ಲದೆ 200 ದಿನಗಳ ವ್ಯಾಲಿಡಿಟಿ ವರೆಗೂ ಈ ಪ್ಲಾನ್‌ನಲ್ಲಿ ಜಿಯೋ ಟಿವಿ, ಜಿಯೋ ಕ್ಲೌಡ್  ಸೇರಿದಂತೆ ವಿವಿಧ ಅಪ್ಲಿಕೇಶನ್‌ಗಳ ಸಬ್‌ಸ್ಕ್ರಿಪ್ಷನ್ ಕೂಡ ಉಚಿತವಾಗಿ ಪಡೆಯಬಹುದು. ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡ ಬಳಿಕ ಗ್ರಾಹಕರಿಗೆ ವೋಚರ್ ಗಿಫ್ಟ್ ಮೂಲಕ ಹೆಚ್ಚುವರಿಯಾಗಿ ಸಿಗುವ ಲಾಭಗಳೇನೆಂದರೆ, ರೂ. 2,150 ರೂಪಾಯಿ ಲಾಭವಾಗಲಿದೆ.

ಈ ವೋಚರ್ ಬಳಸಿ ಫ್ಲೈಟ್ ಟಿಕೆಟ್ ಬುಕಿಂಗ್ ಮಾಡಿದರೆ ಬಳಕೆದಾರರಿಗೆ ಅಧಿಕ ಲಾಭ ಸಿಗಲಿದೆ. EaseMyTrip ಮೂಲಕ ಟ್ರಿಪ್ ಪ್ಲಾನ್ ಮಾಡಿದ್ರೆ 1,500 ರೂಪಾಯಿವರೆಗೆ ಡಿಸ್ಕೌಂಟ್ ಸಿಗಲಿದೆ. ಈ ಪ್ರಯೋಜನಗಳನ್ನು ವೆಬ್‌ಸೈಟ್ ಅಥವಾ ಆಪ್ ಬಳಸಿಕೊಂಡು ಗ್ರಾಹಕರು ಪಡೆದುಕೊಳ್ಳಬಹುದು. ಇದಲ್ಲದೆ ಫುಡ್ ಡೆಲಿವರಿ ಪ್ಲಾಟ್‌ಫಾರಂ ಆದ ಸ್ವಿಗ್ಗಿಯಲ್ಲಿ ಕೂಡ (Swigg) ಯಲ್ಲಿ ರೂ. 499 ಹೆಚ್ಚಿನ ಆರ್ಡರ್ ಮೇಲೆ ರೂ. 150 ರವರೆಗೆ ರಿಯಾಯಿತಿ ಪಡೆಯಬಹುದು.

Aji ಪ್ಲಾಟ್‌ಫಾರಂನಲ್ಲಿ ರೂ. 2,500 ಮೌಲ್ಯಕ್ಕಿಂತ ಅಧಿಕ ಮೊತ್ತದ ಶಾಪಿಂಗ್ ಮಾಡಿದರೆ ವೋಚರ್ ಪರವಾಗಿ  ರೂ.500 ಡಿಸ್ಕೌಂಟ್ ಸಿಗಲಿದೆ. ಈ ರೀತಿಯಾಗಿ ನ್ಯೂ ಇಯರ್ ವೆಲ್‌ ಕಮ್ ಪ್ಲಾನ್ ರೀಚಾರ್ಜ್ ಮಾಡಿಸಿಕೊಂಡ ಬಳಕೆದಾರರು ಎಂದಿನ ರಿಚಾರ್ಜ್ ನೊಂದಿಗೆ ಉಚಿತವಾಗಿ ಖಚಿತವಾಗಿ ರೂ. 2,150 ವರೆಗೆ ಹೆಚ್ಚುವರಿ ಲಾಭ ಪಡೆಯುತ್ತಾರೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment