Jio Sim: ಕೇವಲ 49 ರೂಪಾಯಿಗೆ ಸಿಗಲಿದೆ ಅನ್​ಲಿಮಿಟೆಡ್​ ಡೇಟಾ ಜೊತೆಗೆ ಯೂಟ್ಯೂಬ್​ ಪ್ರೀಮಿಯಂ ಕೂಡ ಉಚಿತ.!

Jio Sim

ಜಿಯೋ(Jio Sim) ಸಿಮ್ ಗ್ರಾಹಕರಿಗಂತು ಡಿಸೆಂಬರ್ ಅಂತ್ಯದಿಂದ ಆಫರ್ ಗಳ ಮೇಲೆ ಆಫರ್ ಗಳ ಸುರಿಮಳೆ ಆಗುತ್ತಿದೆ. ಯಾವಾಗ ಕಳೆದ ಜುಲೈ ತಿಂಗಳಿನಲ್ಲಿ ಇದ್ದಕ್ಕಿದ್ದಂತೆ ಜಿಯೋ ತನ್ನ ರಿಚಾರ್ಜ್ ಆಫರ್ ಬೆಲೆಗಳನ್ನು ಹೆಚ್ಚಿಸಿ, ಕಡಿಮೆ ಬಜೆಟ್ ನ ರೀಚಾರ್ಜ್ ಯೋಜನೆಗಳನ್ನು ಕ್ಯಾನ್ಸಲ್ ಮಾಡಿತು.

WhatsApp Group Join Now
Telegram Group Join Now

ಇದ್ದಕ್ಕಿದ್ದ ಹಾಗೆ ಉಂಟಾದ ರಿಚಾರ್ಜ್ ಬೆಲೆಗಳ ವ್ಯತ್ಯಾಸದಿಂದ ರೊಚ್ಚಿಗೆದ್ದ ಗ್ರಾಹಕರು ಪೋರ್ಟ್ ಟೂ ಬಿಎಸ್ಎನ್ಎಲ್ (Port to BSNL) ಎನ್ನುವ ಅಭಿಯಾನ ಶುರು ಮಾಡಿ ಸರ್ಕಾರಿ ಸ್ವಾಮ್ಯದ BSNL ಕಡೆ ಮುಖ ಮಾಡಿದರು. ಇದೇ ಸಮಯಕ್ಕೆ ಏರ್ಟೆಲ್, VI ಮತ್ತು ಇನ್ನಿತರ ಟೆಲಿಕಾಂ ಸಂಸ್ಥೆಗಳು ಕೂಡ ಜಿಯೋ ದ ಈ ಎಡವಟ್ಟಿನ ಪ್ರತಿಕೂಲ ಪರಿಣಾಮ ಪಡೆದವು.

ತನ್ನ ಗ್ರಾಹಕರ ಅಪಾರ ಆಕ್ರೋಶಕ್ಕೆ ತುತ್ತಾಗಿದ್ದ ಜಿಯೋ ಅದುವರೆಗೂ ದೇಶದ ಟೆಲಿಕಾಂ ಸಂಸ್ಥೆಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿತ್ತು. ದೇಶದಾದ್ಯಂತ 49 ಮಿಲಿಯನ್ ಗ್ರಾಹಕರನ್ನು ಹೊಂದಿದ್ದಂತಹ ಜಿಯೋ ರಿಲಯನ್ಸ್ ಆ ನಂತರ ತನ್ನ ಗ್ರಾಹಕರ ಬೇಡಿಕೆ ಹಾಗೂ ಅಗತ್ಯತೆಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿತು ಎಂದೇ ಹೇಳಬಹುದು.

ಪರಿಣಾಮವಾಗಿ ತನ್ನ ಗ್ರಾಹಕರನ್ನು ಉಳಿಸಿಕೊಳ್ಳುವ ಹಾಗೂ ತನ್ನ ಸಂಸ್ಥೆಯನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶದಿಂದ ಡಿಸೆಂಬರ್ ಅಂತ್ಯಕ್ಕೆ ಬಾರಿ ಆಫರ್ ಗಳ ಸುರಿಮಳೆಯನ್ನೇ ಸುರಿಸಿತು ಮತ್ತು ಹೊಸ ವರ್ಷದ ವಿಶೇಷ ಕೊಡುಗೆಗಳಾಗಿದ್ದ ಇವುಗಳು ಮುಗಿಯುತ್ತಾ ಬಂದ ಬೆನ್ನಲ್ಲೇ ಈಗ ಇನ್ನೆರಡು ವಿಭಿನ್ನ ಆಫರ್ ಗಳನ್ನು ಘೋಷಿಸಿ ತನ್ನ ಸರಣಿಯನ್ನು ಮುಂದುವರಿಸಿದೆ.

ಕೇವಲ ರೂ. 49 ರೂಪಾಯಿಗಳ ರಿಚಾರ್ಜ್ ಗೆ ಅನ್ ಲಿಮಿಟೆಡ್ ಡಾಟಾ ಪ್ರಯೋಜನ ಪಡೆಯುವಂತಹ ಆಫರ್ ಜಿಯೋ ನೀಡುತ್ತಿದ್ದು ಇದು ಯಾವ ರೀತಿ ವರ್ಕ್ ಆಗಲಿದೆ ಎನ್ನುವ ಪ್ಲಾನ್ ಡೀಟೇಲ್ಸ್ ಹೇಗಿದೆ ನೋಡಿ. ಜಿಯೋ ಈಗ ಕೇವಲ ರೂ. 49 ರೂಪಾಯಿಗಳಲ್ಲಿ ಅನ್​ಲಿಮಿಟೆಡ್​ ಡೇಟಾ ಪ್ಲ್ಯಾನ್​ ಆಫರ್ ನೀಡಿದೆ.

ಅಂದರೆ ಗ್ರಾಹಕನು ಜಿಯೋದ ಈ ರೂ.49ರ ಅನ್ಲಿಮಿಟೆಡ್ ಡೇಟ್ ಪ್ಲಾನ್ ಆಫರ್ ರಿಚಾರ್ಜ್ ಮಾಡಿಸಿಕೊಂಡ ನಂತರ 25 ಜಿಬಿಯ ಡೇಟಾ ಪಡೆಯಲಿದ್ದಾರೆ.  ನೀವು ಆ 25GB ಅನ್ನು ಬಳಸಿದರೆ, ನಿಮ್ಮ ಇಂಟರ್ನೆಟ್ ವೇಗವು 40Kbps ಗೆ ಕಡಿಮೆಯಾಗುತ್ತದೆ. ನಿಮ್ಮ ದೈನಂದಿನ ಡೇಟಾ ಮುಗಿದ ಬಳಿಕ  ಅಗತ್ಯವಿದ್ದಲ್ಲಿ ಈ ಪ್ಲ್ಯಾನ್​ ರಿಚಾರ್ಜ್ ಮಾಡಿಸುವುದು ಒಳ್ಳೆಯ ಪ್ಲಾನಿಂಗ್ ಆಗಿದೆ.

ಆದರೆ ಅನ್ಲಿಮಿಟೆಡ್ ಟಾಟಾ ಪ್ಲಾನ್ ಪ್ಯಾಕ್ ವ್ಯಾಲಿಡಿಟಿ ಕೇವಲ 24 ಗಂಟೆ ಮಾತ್ರ ಇರುತ್ತದೆ ಇದು ಒಂದು ದಿನಕ್ಕೆ ಮಾತ್ರ ಸೀಮಿತವಾದ ಆಫರ್ ಮತ್ತು 24 ಗಂಟೆಗಳಲ್ಲಿ ಇದರ ವ್ಯಾಲಿಡಿಟಿ ಮುಗಿಯುವ ಕಾರಣ ಅನೇಕರು ಈ ಬಗ್ಗೆ ಬೇಸರ ಪಟ್ಟುಕೊಂಡಿದ್ದಾರೆ. ಆದರೆ ಹೀಗೆ ಯೋಚನೆ ಮಾಡಿ, ತೀರಾ ಅಗತ್ಯ ಇದ್ದಾಗ ಹೆಚ್ಚಿನ ಡೇಟಾ ಅವಶ್ಯಕತೆ ಇರುವ ಸಂದರ್ಭದಲ್ಲಿ.

ನೀವು ಈ ರೂ. 49 ಕ್ಕೆ ರೀಚಾರ್ಜ್ ಪ್ಲಾನ್ ಖರೀದಿಸಿದರೆ 49 ರೂಪಾಯಿ ಒಂದು ದಿನದ ಮಟ್ಟಿಗೆ ಹಾಕಿಸಿಕೊಂಡು, ನಿಮಗೆ ಅಗತ್ಯ ಇರುವುದನ್ನೆಲ್ಲಾ ಡೌನ್​ಲೋಡ್​ ಮಾಡಿಟ್ಟುಕೊಳ್ಳಲು ಅನುಕೂಲವಾಗುತ್ತದೆ.  ಈ ಹೊಸ ಕೊಡುಗೆಯು ಏರ್‌ಟೆಲ್, VI ಮತ್ತು BSNL ನಂತಹ ಸ್ಪರ್ಧಿಗಳಿಗೆ ಖಂಡಿತವಾಗಿಯೂ ಟಫ್ ಕಾಂಪಿಟೇಶನ್ ಅಗಲಿದೆ

ಇದೇ ವೇಳೆ ಜಿಯೊ ತನ್ನ Jio Fiber ಮತ್ತು Jio Air Fiber ಗ್ರಾಹಕರಿಗೆ ಕೂಡ ಅತ್ಯದ್ಭುತವಾದ ಹೊಸ ಕೊಡುಗೆಗಳನ್ನೂ ನೀಡಿದೆ.  YouTube Premium ಗೆ ಎರಡು ವರ್ಷಗಳ ಉಚಿತ ಚಂದಾದಾರಿಕೆ ನೀಡುವ ಒಪ್ಪಂದದ ಅತ್ಯಾಕರ್ಷಕ ಒಪ್ಪಂದವು. ಜನವರಿ 11, 2025 ರಿಂದ ಪ್ರಾರಂಭವಾಗಿದೆ. ನೀವು ಅರ್ಹ ಗ್ರಾಹಕರಾಗಿದ್ದರೆ, ನೀವು YouTube ನಲ್ಲಿ ವಿಡಿಯೋಗಳ ಜಾಹೀರಾತು-ಮುಕ್ತ ಸ್ಟ್ರೀಮಿಂಗ್ ನ್ನು ಕೂಡ ಪಡೆಯಬಹುದು.

ಜೊತೆಗೆ ವಿಶೇಷ YouTube Originals ಗೆ ವಿಶೇಷ ಪ್ರವೇಶವನ್ನು ಎರಡು ವರ್ಷಗಳವರೆಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಆನಂದಿಸಬಹುದು. ಯೂಟ್ಯೂಬ್ ಪ್ರೀಮಿಯಂ ಸಾಮಾನ್ಯವಾಗಿ ಭಾರತದಲ್ಲಿ ಪ್ರತಿ ತಿಂಗಳು ರೂ 149 ವೆಚ್ಚವಾಗುತ್ತದೆ. ಅದಕ್ಕೆ ಕಂಪೇರ್ ಮಾಡಿ ನೋಡಿದರೆ ಈ ಕೆಳಗೆ ತಿಳಿಸಿದ ಎರಡನೇ ಯೋಜನೆಗೆ ಹೆಚ್ಚು ಪ್ರಯೋಜನ ಆಗಲಿದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment