KPTCL Recruitment:
ರಾಜ್ಯ ಸರ್ಕಾರ(State Government) ಹಾಗೂ ಕೇಂದ್ರ ಸರ್ಕಾರ(Central Government)ಗಳು ಹಲವು ಕ್ಷೇತ್ರಗಳಲ್ಲಿ ನಿರುದ್ಯೋಗಿಗಳಿಗೆ (Unemployed) ಉದ್ಯೋಗಾವಕಾಶ (Job opportunity) ದೊರಯುವ ಅವಕಾಶ ಕಲ್ಪಿಸಿಕೊಡುತ್ತಿದೆ. ಹಾಗೆಯೇ, ಇದೀಗ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (Karnataka Electricity Transmission Corporation Limited – KPTCL) ಅಕ್ಟೋಬರ್‌ನಲ್ಲಿ ಕರೆದಿದ್ದ ಅರ್ಜಿಗಳನ್ನು ಇದೀಗ ನೇಮಕ (Appointment) ಮಾಡಿಕೊಳ್ಳಲು ಮುಂದಾಗಿದೆ. ಹಾಗಾದರೆ, ಇಲ್ಲಿ ಎಷ್ಟು ಹುದ್ದೆಗಳ ಖಾಲಿಯಿವೆ ಎನ್ನುವ ಮಾಹಿತಿಯನ್ನು ಇಲ್ಲಿ ಸಂಪೂರ್ಣವಾಗಿ ನೀಡಲಾಗಿದೆ. ಈ ಬಗ್ಗೆ ಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ..
ಕೆಪಿಟಿಸಿಲ್ 2024ರ ಅಕ್ಟೋಬರ್‌ನಲ್ಲಿ 2,975 ಉದ್ಯೋಗಗಳಿಗೆ ಅರ್ಜಿಗಳನ್ನು ಇಲಾಖೆ ಕರೆದಿತ್ತು. ಸದ್ಯ ಈ ಉದ್ಯೋಗಗಳನ್ನು ಏಪ್ರಿಲ್ ಒಳಗೆ ನೇಮಕ ಮಾಡಲಾಗುತ್ತದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಅವರು ಹೇಳಿದ್ದಾರೆ.
ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಉದ್ಯೋಗ ಭರ್ತಿ ಕುರಿತು ಮಾತನಾಡಿದ ಇಂಧನ ಸಚಿವ ಕೆ.ಜೆ ಜಾರ್ಜ್ ಅವರು, ಈಗಾಗಲೇ ಅರ್ಜಿ ಕರೆಯಲಾದ ಉದ್ಯೋಗಗಳನ್ನು ಶೀಘ್ರದಲ್ಲೇ ಅಂದರೆ, ಏಪ್ರಿಲ್ ಒಳಗೆ ಭರ್ತಿ ಮಾಡಲಾಗುತ್ತದೆ. ಇಲಾಖೆಯಲ್ಲಿ ಖಾಲಿ ಇರುವಂತಹ ಕೆಲಸಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭ ಆಗಿದೆ. ಇಡೀ ರಾಜ್ಯದಲ್ಲಿ ಒಂದೇ ದಿನದಲ್ಲಿ ದೈಹಿಕ ಪರೀಕ್ಷೆ ನಡೆಸಲು ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಧರಿಸಲಾಗಿದೆ ಎಂದು ಹೇಳಿದರು.
ಈ ಹುದ್ದೆಗಳು ಭರ್ತಿಯಾದ ಮೇಲೆ ಎಇಇ, ಜೆಇ ಸೇರಿದಂತೆ ಇತರೆ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡು ಯೋಜನೆ ಹಾಕಿಕೊಳ್ಳಲಾಗಿದೆ. ಅಷ್ಟೇ ಅಲ್ಲದೇ ಮತ್ತಷ್ಟು ಉದ್ಯೋಗಗಳಿಗೆ ಅರ್ಜಿ ಆಹ್ವಾನ ಮಾಡುವ ಸಾಧ್ಯತೆಯಿದೆ. ಆ ಬಗ್ಗೆ ಈಗಲೇ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸಚಿವರು ಹೇಳಿದ್ದಾರೆ.
ಸದ್ಯ ಸಚಿವರು ಮಾತನಾಡಿರುವ ಉದ್ಯೋಗಗಳನ್ನು ಈ ಹಿಂದೆ ಅಂದರೆ 2024ರ ಅಕ್ಟೋಬರ್ 21ರಂದು ಅರ್ಜಿ ಆರಂಭಿಸಿ, ನವೆಂಬರ್ 20ಕ್ಕೆ ಅರ್ಜಿ ಕೊನೆಗೊಂಡಿದ್ದವು. ಕಿರಿಯ ಸ್ಟೇಷನ್ ಪರಿಚಾರಕ ಹುದ್ದೆ 433, ಕಿರಿಯ ಪವರ್ಮ್ಯಾನ್ ಉದ್ಯೋಗಗಳು 2542 ಸೇರಿ ಒಟ್ಟು 2,975 ಉದ್ಯೋಗಗಳಿಗೆ ಅರ್ಜಿ ಪ್ರಕ್ರಿಯೆ ಈಗಾಗಲೇ ಮುಗಿದಿದೆ.
30 ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ 30 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹಾಗಾದರೆ ಅರ್ಜಿ ಸಲ್ಲಿಸಬಯಸುವವರು ಯಾವೆಲ್ಲ ಅರ್ಹತೆಗಳನ್ನು ಹೊಂದಿರಬೇಕು, ಕೊನೇ ದಿನಾಂಕ ಯಾವಾಗ ಹಾಗೂ ಮಾಸಿಕ ವೇತನ ಎಷ್ಟಿರಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗ್ರೂಪ್-ಎ ಹುದ್ದೆಗಳಿಗೆ ಮತ್ತೆ ಅರ್ಜಿ ಆಹ್ವಾಸಿಸಲಾಗಿದೆ. 2024ರ ಸೆಪ್ಟೆಂಬರ್ 18ರಂದು ಅಧಿಸೂಚನೆ ಹೊರಡಿಸಿ ಅರ್ಹ ಅಭ್ಯರ್ಥಿಗಳಿಂದ ಈಗಾಗಲೇ ಅರ್ಜಿಗಳನ್ನು ಸ್ವೀಕಾರ ಮಾಡಲಾಗಿತ್ತು. ಆದರೆ, ಇದೀಗ ಇದೇ ಉದ್ಯೋಗಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಅರ್ಜಿಗಳನ್ನು ಮತ್ತೆ ಆಹ್ವಾನಿಸಿದೆ.
ವಯೋಮಿತಿಯ ವಿವರ:
ಗ್ರೂಪ್-ಎ 30 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಈ ಪೈಕಿ 29 ಹುದ್ದೆಗಳು ಮುಕ್ತ ಸ್ಪರ್ಧೆ ಅಭ್ಯರ್ಥಿಗಳನ್ನು ಹಾಗೂ 01 ಕೆಲಸಕ್ಕೆ ಸೇವಾನಿರತ ಸ್ಪರ್ಧೆ ಅಭ್ಯರ್ಥಿಯನ್ನು ಭರ್ತಿ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಕೆ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಈ ಕನಿಷ್ಠ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು. ಸಾಮಾನ್ಯ ವರ್ಗ 13, ಪರಿಶಿಷ್ಟ ಜಾತಿ 05, ಪರಿಶಿಷ್ಟ ಪಂಗಡ 02, ಪ್ರವರ್ಗ1 01, ಪ್ರವರ್ಗ-2ಎ 05, ಪ್ರವರ್ಗ-2ಬಿ 01, ಪ್ರವರ್ಗ-3ಎ 01, ಪ್ರವರ್ಗ-3ಬಿ 01, ಎಸ್ಸಿ 01, ಸೇರಿದಂತೆ ಒಟ್ಟು 30 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತೆ ಮತ್ತು ಅಗತ್ಯ ವಿದ್ಯಾರ್ಹತೆ:
ಇನ್ನು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವರು ಇಂಜಿನಿಯರಿಂಗ್ ಪದವಿ ಪಡೆದಿರಬೇಕಾಗುತ್ತದೆ. ಸಿವಿಲ್ ಇಂಜಿನಿಯರ್, ಕನ್ಸ್ಟ್ರಕ್ಷನ್ ಟೆಕ್ನಲಾಜಿ, ಬಿಲ್ಡಿಂಗ್ ಅಂಡ್ ಕಂಸ್ಟ್ರಕ್ಷನ್ ಟೆಕ್ನಾಲಜಿ, ಸಿವಿಲ್ ಟೆಕ್ನಾಲಜಿ ಕಂಸ್ಟ್ರಕ್ಷನ್ ಟೆಕ್ನಾಲಜಿ, ಕಂಸ್ಟ್ರಕ್ಷನ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್, ಜಿಯೋಮೆಕಾನಿಕ್ಸ್ ಮತ್ತು ಸ್ಟ್ರಕ್ಚರ್ಸ್, ಸ್ಟ್ರಕ್ಚರಲ್ ಅಂಡ್ ಫೌಂಡೇಷನ್ ಇಂಜಿನಿಯರಿಂಗ್, ಸ್ಟ್ರಕ್ಚರಲ್ ಇಂಜಿನಿಯರಿಂಗ್ ಮತ್ತು ಕಂಸ್ಟ್ರಕ್ಷನ್ ಪದವಿ ಇದರಲ್ಲಿ ಯಾವುದಾದರೊಂದನ್ನ ಪೂರ್ಣಗೊಳಿಸಿರಬೇಕು.
ಮೇಲೆ ತಿಳಿಸಲಾದ ವಿದ್ಯಾರ್ಹತೆಯನ್ನು ಹೊರತುಪಡಿಸಿ ಇತರೆ ಯಾವುದೇ ಸಮನಾಂತರ ವಿದ್ಯಾರ್ಹತೆಯನ್ನು (Equivalent Qualification) ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ. ಬಾಹ್ಯ ಅಥವಾ ಮುಕ್ತ ವಿಶ್ವವಿದ್ಯಾಲಯ ಅಥವಾ ಮುಕ್ತ ಶಾಲೆಯಿಂದ ಪಡೆದ ಎಸ್.ಎಸ್.ಎಲ್.ಸಿ./ 10ನೇ ತರಗತಿ (ಬ್ರಿಡ್ಜ್ ಕೋರ್ಸ್) ಉತ್ತೀರ್ಣತೆಯನ್ನು ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ. ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು, ಅಭ್ಯರ್ಥಿಗಳು ಈ ಮೇಲೆ ನಿಗದಿಪಡಿಸಿರುವ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಉತ್ತೀರ್ಣಗೊಂಡಿರತಕ್ಕದ್ದು ಹಾಗೂ ಅಂಕಪಟ್ಟಿಯನ್ನು ಹೊಂದಿರತಕ್ಕದ್ದು.
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಈ ಮೇಲಿನ ನಿಗದಿತ ಶೈಕ್ಷಣಿಕ ವಿದ್ಯಾರ್ಹತೆ ಪರೀಕ್ಷೆ ಬರೆದು, ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು, ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ. ಈ ಅಧಿಸೂಚನೆಯನ್ವಯ ನೇಮಕಾತಿಗೆ ಪರಿಗಣಿಸಬೇಕಾಗುವ ವಿದ್ಯಾರ್ಹತೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಹಕ್ಕನ್ನು ಕವಿಪ್ರನಿನಿ/ ಎಸ್ಕಾಂಗಳು ಮಾತ್ರ ಹೊಂದಿರುತ್ತದೆ ಹಾಗೂ ಅಭ್ಯರ್ಥಿಗಳು ಅದಕ್ಕೆ ಬದ್ಧರಾಗಿರತಕ್ಕದ್ದು.
ಇತರ ಅರ್ಹತೆಗಳು
- ಕನ್ನಡದಲ್ಲಿ ಓದುವ ಮತ್ತು ಬರೆಯುವ ಜ್ಞಾನ ಹೊಂದಿರತಕ್ಕದ್ದು.
- ತೃಪ್ತಿಕರವಾದ ನೇತ್ರದೃಷ್ಟಿಯನ್ನು ಹೊಂದಿರತಕ್ಕದ್ದು.
- ತೃಪ್ತಿಕರ ದೇಹದಾರ್ಡ್ಯವನ್ನು ಹೊಂದಿರತಕ್ಕದ್ದು. ಕಠಿಣ ಕೆಲಸಗಳಾದ ಗುಂಡಿ ತೆಗೆಯುವುದು, ಗೋಪುರ ಅಥವಾ ಕಂಬ ಹತ್ತುವುದು, ಭಾರವಾದ ವಸ್ತುಗಳನ್ನು ಸಾಗಿಸುವುದು, ತಂತಿಗಳನ್ನು ಅಳವಡಿಸುವುದು, ಕಂಬಗಳನ್ನು ಬದಲಾಯಿಸುವುದು, ಇತ್ಯಾದಿ ಕೆಲಸಕಾರ್ಯಗಳನ್ನು ನಿರ್ವಹಿಸಲು ಶಕ್ತರಿರಬೇಕು ಮತ್ತು ಸಹನ ಶಕ್ತಿ ಪರೀಕ್ಷೆಯಲ್ಲಿ ಅರ್ಹತೆ ಗಳಿಸಬೇಕು. ಈ ಮೇಲೆ ತಿಳಿಸಿರುವ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಎಲ್ಲಾ ರೀತಿಯಲ್ಲಿಯೂ ದೈಹಿಕವಾಗಿ ಸಾಮರ್ಥ್ಯ ಹೊಂದಿರತಕ್ಕದ್ದು.
ಅರ್ಜಿ ಶುಲ್ಕ
ಸಾಮಾನ್ಯ ವರ್ಗದ ಅಭ್ಯರ್ಥಿಗಳು 590 ರೂ. (ಜಿಎಸ್‌ಟಿ ಸೇರಿ), ಪ್ರವರ್ಗ -1, 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳು 614 ರೂ., ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಅಭ್ಯರ್ಥಿಗಳು 378 ರೂ. ಶುಲ್ಕ ಪಾವತಿಸಬೇಕು. ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಸಂಭಾವನೆ:-
ಆಯ್ಕೆಯಾಗುವ ಅಭ್ಯರ್ಥಿಗಳನ್ನು ಕವಿಪ್ರನಿನಿ ನೌಕರಿ ಭರ್ತಿ ಮತ್ತು ಬಡ್ತಿ ನಿಯಮಾವಳಿಗಳು ಹಾಗೂ ವಿದ್ಯುತ್ ಸರಬರಾಜು ಕಂಪನಿಗಳ ನೌಕರಿ ಭರ್ತಿ ಮತ್ತು ಬಡ್ತಿ ನಿಯಮಾವಳಿಗಳ ಅಧ್ಯಾಯ-1 ರ 6(1) (ಇ) ರಂತೆ ಕೆಲವು ಷರತ್ತುಗಳಿಗೊಳಪಟ್ಟು 3 ವರ್ಷಗಳ ಅವಧಿಗೆ ತರಬೇತಿಗೆ ಒಳಪಡಿಸಲಾಗುವುದು. ತರಬೇತಿಯ ಅವಧಿಯಲ್ಲಿ, ಕೆಳಗೆ ತಿಳಿಸಿರುವ ಕ್ರೋಢೀಕೃತ ಸಂಭಾವನೆಯನ್ನು ಹೊರತುಪಡಿಸಿ, ಇನ್ನಿತರ ಯಾವುದೇ ಭತ್ಯೆ ಹಾಗೂ ಸೌಲಭ್ಯಗಳನ್ನು ಪಡೆಯತಕ್ಕದ್ದಲ್ಲ.
ಒಂದು ವೇಳೆ ಇ-ಸೈನ್ ಪ್ರಕ್ರಿಯೆ ಪೂರ್ಣಗೊಳಿಸದೇ, ನೇರವಾಗಿ ಅರ್ಜಿ ಶುಲ್ಕ ಪಾವತಿಸಿ ಅರ್ಜಿ ಪ್ರಿಂಟ್‌ಔಟ್ ಪಡೆದಂತಹ ಅಭ್ಯರ್ಥಿಗಳು, ಮುಂದಿನ ಹಂತದಲ್ಲಿ ಸಹನಾ ಶಕ್ತಿ ಪರೀಕ್ಷೆಗೆ ಹಾಜರಾಗಲು ತಿಳಿಸಿದ್ದಲ್ಲಿ, ಆ ಸಮಯದಲ್ಲಿ ಇ-ಸೈನ್ ಪ್ರಕ್ರಿಯೆ ಪೂರ್ಣಗೊಳಿಸಿ ತಮ್ಮ ಅರ್ಜಿಗಳನ್ನು ಹಾಜರುಪಡಿಸಲು ಅವಕಾಶ ನೀಡಲಾಗಿದೆ. ಉದ್ಯೋಗ ಪ್ರಕಟಣೆಯ ಇನ್ನುಳಿದ ಯಾವುದೇ ಅಂಶಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸೂಚಿಸಲಾಗಿದೆ.
ಕ್ರೋಢೀಕೃತ ಸಂಭಾವನೆ:-
- (ಮೊದಲ 3 ವರ್ಷಗಳು) 1ನೇ ವರ್ಷ 17,000 ಮಾಸಿಕ,
- 2ನೇ ವರ್ಷ 19,000 ಮಾಸಿಕ ಮತ್ತು
- 3ನೇ ವರ್ಷ 21,000 ಮಾಸಿಕ.
- ಮೂರು ವರ್ಷದ ತರಬೇತಿಯನ್ನು ತೃಪ್ತಿಕರವಾಗಿ ಪೂರೈಸಿದ ನಂತರ ಅಭ್ಯರ್ಥಿಗಳನ್ನು ವೇತನ ಶ್ರೇಣಿ 28550- 600(5)-31550-750(5)-35300-950(5)-40050-1200(5)-46050-1450(6)-54750-1650(5)-63000 ರಲ್ಲಿ ಎರಡು 2 ವರ್ಷಗಳ ಕಾಲ ಪರೀಕ್ಷಾರ್ಥ ಅವಧಿಯಲ್ಲಿ ಇರಿಸಲಾಗುವುದು.