PF
ಇನ್ಮುಂದೆ ATM ಮೂಲಕವೂ PF ವಿತ್‌ಡ್ರಾ ಮಾಡಲು ಸಾಧ್ಯವಾಗುವ EPFO 3.0 ಲಾಂಚ್ ಆಗುತ್ತಿದೆ ಹೌದು ಸ್ನೇಹಿತರೆ ದೇಶದಲ್ಲಿ ಕೋಟ್ಯಾಂತರ ಜನರು ಉದ್ಯೋಗಿಗಳ ಭವಿಷ್ಯ ನಿಧಿ (EPF) ಖಾತೆ ಹೊಂದಿದ್ದಾರೆ. ಸಂಘಟಿತ ವಲಯದಲ್ಲಿ ದುಡಿಯುವಂತಹ ಕಾರ್ಮಿಕನ (Employee) ಪ್ರತಿ ತಿಂಗಳ ವೇತನದಲ್ಲಿ 12% ಈ ಖಾತೆಗೆ ಜಮೆ ಆಗುತ್ತದೆ ಹಾಗೂ ಉದ್ಯೋಗದಾತರಿಂದ (Employer) ಕೂಡ 12% ಹಣ ಆ ಕಾರ್ಮಿಕರ PF ಖಾತೆಗೆ ಜಮೆ ಆಗುತ್ತದೆ.
ಕಾರ್ಮಿಕರ ಈ ಉದ್ಯೋಗ ಭವಿಷ್ಯ ನಿಧಿ ಯೋಚನೆಯ ಕಾರ್ಮಿಕರ ಪಾಲಿಗೆ ವರದಾನವಾಗಿದೆ. ಪ್ರತಿ ತಿಂಗಳ ಈ ರೂಪದ ಉಳಿತಾಯವು 5-10 ವರ್ಷಗಳ ಬಳಿಕ ಬಹಳ ದೊಡ್ಡ ಮೊತ್ತವಾಗಿ ಕೈಗೆ ಸೇರುವುದರಿಂದ ಮನೆ ಕಟ್ಟಿ ನೆಲೆಕಂಡುಕೊಳ್ಳಲು, ಮಕ್ಕಳ ವಿದ್ಯಾಭ್ಯಾಸ, ವಿವಾಹದ ಮುಂತಾದ ಖರ್ಚುಗಳಿಗೆ ಅನುಕೂಲವಾಗುತ್ತದೆ.
ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವಂತಹ ಉದ್ಯೋಗ ಭವಿಷ್ಯ ನಿಧಿ ಸಂಸ್ಥೆ (EPFO) ಇದನ್ನು ನಿರ್ವಹಿಸುತ್ತದೆ. ಕೇಂದ್ರ ಸರ್ಕಾರವು (Central Government) ಕಾಲಕಾಲಕ್ಕೆ ಕಾರ್ಮಿಕನ ಹಿತ ದೃಷ್ಟಿಯಿಂದ ಈ PF ಖಾತೆ ಕುರಿತು ಹಲವಾರು ನಿಯಮಗಳನ್ನು ಜಾರಿಗೆ ತರುತ್ತದೆ.
ಈ ಖಾತೆಯ ಮೇಲಿನ ಬಡ್ಡಿ ದರಗಳನ್ನು ಪರಿಷ್ಕೃತಗೊಳಿಸುವುದು, ಹಾಗೆಯೇ PF ಕಡಿತದ ಮೊತ್ತವನ್ನು ಹೆಚ್ಚಿಸುವುದು, ಹತ್ತು ವರ್ಷಗಳು ತುಂಬಿದ ಬಳಿಕ ಉದ್ಯೋಗದಾತನಿಗೆ ಪಿಂಚಣಿ ಬರುವ ಮಾದರಿಯಲ್ಲಿ ಯೋಜನೆಯನ್ನು ಪರಿವರ್ತಿಸಿರುವುದು ಮತ್ತು ಇನ್ನಿತರ ಹಲವು ನಿಯಮಗಳನ್ನು ಜಾರಿಗೊಳಿಸಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಟ್ಟಿದೆ.
ಇದರ ಮುಂದುವರಿದ ಭಾಗವಾಗಿ ಅತಿ ಶೀಘ್ರದಲ್ಲಿ ಬಹುನಿರೀಕ್ಷಿತ EPFO 3.0 ನ್ನು 2025ರಲ್ಲಿ ಬಿಡುಗಡೆಗೊಲಿಸುವುದಾಗಿ ಘೋಷಿಸಿದೆ. ಏನಿದು EPFO 3.0? ಇದರ ಅನುಕೂಲತೆಗಳೇನು? ಇದರ ವಿವರ ಹೀಗಿದೆ ನೋಡಿ. ಫಲಾನುಭವಿಯ ಅನುಕೂಲತೆಯನ್ನು ಹೆಚ್ಚಿಸುವ ಉದ್ದೇಶದಿಂದ, ಈ EPFO 3.0 ಎನ್ನುವ ಹೊಸ ಸಾಫ್ಟ್‌ವೇರ್ ನ್ನು ವಿನ್ಯಾಸಗೊಳಿಸಲಾಗಿದೆ.
ಉದ್ಯೋಗಿಯು ತನ್ನ ಉಳಿತಾಯದ ಹಣವನ್ನು ನಿರ್ವಹಿಸುವುದು ಇದರಿಂದ ಇನ್ನಷ್ಟು ಸುಲಭವಾಗುತ್ಇದರಿ EPF ಪ್ರಕ್ರಿಯೆಗಳನ್ನು ಇನ್ನಷ್ಟು ಸುವ್ಯವಸ್ಥಿತಗೊಳಿಸುವ ಉದ್ದೇಶದಿಂದ EPFO 3.0 ನಲ್ಲಿ ಹಲವು ವೈಶಿಷ್ಟ್ಯಗಳನ್ನು ತರಲಾಗುತ್ತಿದೆ ಎಂಬ ಮಾಹಿತಿಯನ್ನು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಇತ್ತೀಚಿನ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹಾಗಾದರೆ ಈ ಯೋಜನೆಯಿಂದ ಸಿಗುತ್ತಿರುವ ಅನುಕೂಲತೆಗಳೇನು ಗೊತ್ತಾ? ಬ್ಯಾಂಕಿಂಗ್ ವ್ಯವಸ್ಥೆಗಳಂತೆಯೇ ಕಾರ್ಯಕ್ಷಮತೆಯನ್ನು ಈ ಹೊಸ ಬದಲಾವಣೆ ಒದಗಿಸುತ್ತದೆ. ಇದರಿಂದಾಗಿ ಉದ್ಯೋಗಿಗಳು ತಮ್ಮ ನಿವೃತ್ತಿ ನಿಧಿಯನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ. EPFO 3.0 ರ ಎಲ್ಲರ ನಿರೀಕ್ಷೆಯಂತೆ ಪ್ರತಿಯೊಬ್ಬ EPF ಸದಸ್ಯನಿಗೂ ATM ಕಾರ್ಡ್‌ಗಳನ್ನು ನೀಡುತ್ತದೆ.
EPFO 3.0 ಯೋಜನೆ ಲಾಂಚ್ ಆದ ಮೇಲೆ ಉದ್ಯೋಗಿಗಳು ತಮ್ಮ EPF ಉಳಿತಾಯವನ್ನು ಆ ATMಗಳಿಂದಲೇ ನೇರವಾಗಿ ಹಿಂಪಡೆಯಬಹುದು. ಉಳಿತಾಯ ಖಾತೆಯಿಂದ ಹಣ ವಿತ್ ಡ್ರಾ ಮಾಡಿದಷ್ಟು ಸರಾಗವಾಗಿ ಪಿಎಫ್ ಖಾತೆಯ ಹಣವನ್ನು ಕೂಡ ಪಡೆಯಬಹುದು. ತುರ್ತು ಸಂದರ್ಭಗಳಲ್ಲಿ ಉಂಟಾಗುವ ಹಣಕಾಸಿನ ಅಗತ್ಯವನ್ನು ಪೂರೈಸಲು ಇದು ತುಂಬಾ ಅನುಕೂಲಕರವಾಗಿದೆ.
ಸಾಮಾನ್ಯವಾಗಿ ದೇಶದಾದ್ಯಂತ ಎಲ್ಲಾ ಉದ್ಯೋಗಿಗಳು ಕೂಡ EPF ನ್ನು ಭವಿಷ್ಯದ ಉಳಿತಾಯಕ್ಕೆ ಎಂದು ಭಾವಿಸಿದ್ದಾರೆ. ಇದರ ನಡುವೆಯೂ ಹಣಕಾಸಿನ ತುರ್ತು ಪರಿಸ್ಥಿತಿ ಉಂಟಾದಾಗ ಖಂಡಿತವಾಗಿಯೂ ಈ EPF 3.0 ಅನುಕೂಲ ಮಾಡಿಕೊಡಲಿದೆ.
ಹಾಗಾಗಿ ಎಲ್ಲರೂ ನಿರೀಕ್ಷೆಯು ಈ ಯೋಜನೆಯ ಲಾಂಚ್ ಕಡೆ ಇದೆ. ಸದ್ಯಕ್ಕಿರುವ ಅಪ್ಡೇಟ್ಸ್ ಪ್ರಕಾರ ಮೊದಲ ಹಂತದ ವೆಬ್‌ಸೈಟ್ ವಿನ್ಯಾಸ ಮತ್ತು ಸಿಸ್ಟಮ್ ನವೀಕರಣ ಪೂರ್ತಿಯಾಗಿದ್ದು ಜನವರಿ 2025 ರ ಅಂತ್ಯದ ವೇಳೆಗೆ ಇದು ಪೂರ್ಣಗೊಳ್ಳುವ ನಿರೀಕ್ಷೆ ಇದೆ.