PM Avaas Yojana: ಸರ್ಕಾರದಿಂದ ಉಚಿತ ಮನೆ ಪಡೆಯಲು ಅರ್ಜಿ ಆಹ್ವಾನ.!

PM Avaas Yojana

ಸ್ವಂತ ಮನೆ ಇಲ್ಲದವರಿಗೆ ಗುಡ್ ನ್ಯೂಸ್, ಸರ್ಕಾರದಿಂದ ಉಚಿತ ಮನೆ ಪಡೆಯಲು ಅರ್ಜಿ ಆಹ್ವಾನ.!

WhatsApp Group Join Now
Telegram Group Join Now

ಮನೆಯ ಎನ್ನುವುದು ಮನುಷ್ಯನ ಮೂಲಭೂತ ಅವಶ್ಯಕತೆ. ಪ್ರತಿಯೊಂದು ಕುಟುಂಬಕ್ಕೂ ಕೂಡ ಸ್ವಂತ ಊರಿನ ಆಸರೆ ಸಿಗಬೇಕು. ಆದರೆ ನಮ್ಮ ದೇಶ ಇನ್ನೂ ಅಭಿವೃದ್ಧಿಶೀಲ ದೇಶವಾಗಿರುವ ಕಾರಣ ದೇಶದ ಕೋಟ್ಯಾಂತರ ಕುಟುಂಬಗಳು ವಸತಿ ರಹಿತ ಕುಟುಂಬಗಳಾಗಿವೆ. ಇಂತಹ ಕುಟುಂಬಗಳು ಭದ್ರತೆ ಹಾಗೂ ಅವಶ್ಯಕತೆಯ ಕಾರಣದಿಂದಾಗಿ ತಮ್ಮ ದುಡಿಮೆಯಲ್ಲಿ ದೊಡ್ಡ ಭಾಗವನ್ನು ಬಾಡಿಗೆಗಾಗಿಯೇ ವಿನಿಯೋಗಿಸುತ್ತಿವೆ.

ಸ್ವಂತ ಮನೆ ಎನ್ನುವುದು ಒಂದು ಕನಸು ಹಾಗೂ ಮೂಲಭೂತ ಅವಶ್ಯಕತೆ ಆಗಿದೆ, ಇಂತಹ ಮನೆಯಲ್ಲಿ ವಾಸ ಮಾಡಿದಾಗ ಒಂದು ಸುರಕ್ಷತಾ ಭಾವ ಮೂಡುತ್ತದೆ. ಇದನ್ನು ಪರಿಗಣನೆಗೆ ತೆಗೆದುಕೊಂಡ ಸರ್ಕಾರಗಳು ಅನೇಕ ವಸತಿ ಯೋಜನೆಗಳನ್ನು ಕೈಕೊಂಡು ಬಡಜನರಿಗೂ ಕೂಡ ಸ್ವಂತ ಮನೆ ಕಟ್ಟಿಕೊಳ್ಳಲು ಹಣಕಾಸಿನ ನೆರವು ನೀಡುತ್ತಿವೆ.

ಇಂತಹ ಹತ್ತಾರು ಯೋಜನೆಗಳ ಪೈಕಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಕೂಡ ಒಂದು. ಈ ಯೋಜನೆಯು ನಗರ ಪ್ರದೇಶದಲ್ಲಿ ವಾಸಿಸುವಂತಹ ಜನರಿಗೆ ಸ್ವಂತ ಮನೆ ಕನಸು ನನಸು ಮಾಡಿಕೊಳ್ಳುವಂತಹ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ. ಅಂತೆಯೇ ಪ್ರಸಕ್ತ ಸಾಲಿನಲ್ಲಿ ಯೋಜನೆಗೆ ಅರ್ಹ ಫಲಾನುಭವಿಗಳಿಂದ ಅರ್ಜಿ ಕೂಡ ಆಹ್ವಾನ ಮಾಡಲಾಗಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು? ಬೇಕಾಗುವ ದಾಖಲೆಗಳೇನು? ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಎಲ್ಲಿ ಹಾಗೂ ಯೋಜನೆ ಕುರಿತಾದ ಇನ್ನಿತರ ಮುಖ್ಯ ಮಾಹಿತಿಗಳನ್ನು ಈ ಲೇಖನದ ಮೂಲಕ ಹಂಚಿಕೊಳ್ಳುತ್ತಿದ್ದೇವೆ. ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ಹೆಚ್ಚಿನ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

ಯೋಜನೆ ಹೆಸರು:- ಪ್ರಧಾನಮಂತ್ರಿ ಆವಾಸ್ ಯೋಜನೆ

ಜಾರಿಗೆ ಬಂದ ವರ್ಷ:- ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ 25 ಜೂನ್ 2015 ರಂದು ಈ ಯೋಜನೆಯನ್ನು ಘೋಷಿಸಿತು

ಯೋಜನೆಯ ಉದ್ದೇಶ:-

* ಕೊಳಗೆರೆ ನಿವಾಸಿಗಳು ಸೇರಿದಂತೆ, LIG, MIG ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳಿಗೆ ಎಲ್ಲಾ ಅರ್ಹ ನಗರವಾಸಿ ಕುಟುಂಬಗಳಿಗೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ 75ನೇ ವರ್ಷ ಪೂರೈಸುವ 2022ರ ವರ್ಷದೊಳಗೆ ಸ್ವಂತ ಮನೆಯ ಸೌಕರ್ಯ ದೊರಕಿಸಿಕೊಡುವುದು.

ಸಿಗುವ ನೆರವು:-

* ಸರ್ಕಾರವು EWS ಮತ್ತು LIG ಕುಟುಂಬಗಳಿಗೆ 6.5%, MIG-I 4%ಗೆ ಮತ್ತು MIG-II ಗಳಿಗೆ 3% ಸಬ್ಸಿಡಿ ಬಡ್ಡಿದರದಲ್ಲಿ ಗೃಹ ಸಾಲ ಒದಗಿಸುತ್ತದೆ.
* ಕ್ರೆಡಿಟ್ ಲಿಂಕ್ ಸಬ್ಸಿಡಿ ಯೋಜನೆಯಡಿಯಲ್ಲಿ 20 ವರ್ಷಗಳ ಅವಧಿಗೆ ಫಲಾನುಭವಿಗೆ ಬ್ಯಾಂಕ್ ನಲ್ಲಿ ಸಾಲ ಸೌಲಭ್ಯವಿದೆ. ಸ್ವಂತ ಮನೆ ಖರೀದಿ ಅಥವಾ ನಿರ್ಮಾಣಕ್ಕೆ ಪಡೆಯುವ ಸಾಲದಲ್ಲಿ 2.67 ಲಕ್ಷದವರೆಗೆ ಬಡ್ಡಿ ರಿಯಾಯಿತಿ ಪಡೆಯುತ್ತಾರೆ.
* ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಿರ್ಮಿಸುವ ಮನೆಯನ್ನು ಪರಿಸರ ಸ್ನೇಹಿ ತಂತ್ರಜ್ಞಾನದ ಮೂಲಕ ನಿರ್ಮಿಸಲಾಗುತ್ತದೆ.
* ಅಬಲೆಯರು, ತೃತೀಯ ಲಿಂಗಿಗಳು, ವೃದ್ಧರು ಹಾಗೂ ಅಂಗವಿಕಲರಿಗೆ ಯೋಜನೆಯಡಿ ಆಧ್ಯತೆ ಕೂಡ ಇರುತ್ತದೆ
* ಮನೆ ನವೀಕರಣ ಹಾಗೂ ದುರಸ್ತಿಗೂ ಸಹ ಧನಸಹಾಯ ಪಡೆಯಬಹುದು

ಅರ್ಜಿ ಸಲ್ಲಿಸಲು ಅರ್ಹತೆಗಳು:-

* 18 ವರ್ಷ ಮೇಲ್ಪಟ್ಟ 70 ವಯೋಮಾನದ ಒಳಗಿನ ಯಾವುದೇ ವ್ಯಕ್ತಿ ಅರ್ಜಿ ಸಲ್ಲಿಸಬಹುದು.
* ಆರ್ಥಿಕ ದುರ್ಬಲ ವಿಭಾಗದ (EWS) ಕುಟುಂಬದ ಆದಾಯದ ಮಿತಿಯು ವಾರ್ಷಿಕ ರೂ.3 ಲಕ್ಷಗಳು ಮತ್ತು ಕಡಿಮೆ ಆದಾಯದ ಗುಂಪು ಕುಟುಂಬದ (LIG) ಆದಾಯದ ಮಿತಿಯು ವಾರ್ಷಿಕ ರೂ.6 ಲಕ್ಷಗಳು, ಮತ್ತು ಮಧ್ಯಮ ಆದಾಯ ಗುಂಪಿನ ಕುಟುಂಬದ (MIG-I) ಆದಾಯ ಮಿತಿಯು ವಾರ್ಷಿಕ ರೂ. 6-12 ಲಕ್ಷಗಳ ನಡುವೆ, MIG-II ಮಿತಿಯು ವಾರ್ಷಿಕವಾಗಿ 12-18 ಲಕ್ಷಗಳ ನಡುವೆ ಇರಬೇಕು.
* ಅರ್ಜಿ ಸಲ್ಲಿಸುವ ವ್ಯಕ್ತಿ ಹೆಸರಿನಲ್ಲಿ ಭಾರತದ ಯಾವುದೇ ಭಾಗದಲ್ಲಿ ಸ್ವಂತ ಮನೆ ಇರಬಾರದು
* ಈಗಾಗಲೇ ಕೇಂದ್ರ/ರಾಜ್ಯ ಸರ್ಕಾರದ ಯಾವುದೇ ವಸತಿ ನಿಗಮ ಯೋಜನೆಯ ಪ್ರಯೋಜನ ಪಡೆದವರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ

ಬೇಕಾಗುವ ದಾಖಲೆಗಳು:-

* ಆಧಾರ್ ಕಾರ್ಡ್
* ಇತ್ತೀಚಿನ ಭಾವಚಿತ್ರ
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
* ಬ್ಯಾಂಕ್ ಪಾಸ್ ಬುಕ್ ವಿವರ
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ವೋಟರ್ ಐಡಿ
* ನಿವಾಸ ದೃಢೀಕರಣ ಪತ್ರ ಹಾಗೂ ಇನ್ನಿತರ ಪ್ರಮುಖ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ:-

* ಈ ಮೇಲೆ ತಿಳಿಸಿದ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಫಲಾನುಭವಿಯು ನೇರವಾಗಿ https://pmaymis.gov.in ವೆಬ್ ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಬಹುದು.
* ಹತ್ತಿರದ ಬ್ಯಾಂಕ್ ಶಾಖೆಗಳು ಅಥವಾ CSC ಕೇಂದ್ರಗಳಲ್ಲಿ ಕೂಡ ಅರ್ಜಿ ಸಲ್ಲಿಸಲು ಅವಕಾಶವಿದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment