PMFME: ಸ್ವಂತ ಉದ್ಯಮ ಸ್ಥಾಪನೆ ಮಾಡಲು ಸರ್ಕಾರದಿಂದ 15 ಲಕ್ಷ ಸಹಾಯಧನ ಘೋಷಣೆ.!

PMFME

ಆತ್ಮ ನಿರ್ಭರ ಭಾರತ ಕಾನ್ಸೆಪ್ಟ್ ಭಾಗವಾಗಿ 2020-21ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣ ಕೈಗಾರಿಕಾ ಮಂತ್ರಾಲಯವು ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯನ್ನು (PM Micro Food Processing Scheme-PMFME) 2020-21 ರಲ್ಲಿ ಜಾರಿಗೊಳಿಸಿತು.

WhatsApp Group Join Now
Telegram Group Join Now

ರೈತರು ಮತ್ತು ರೈತ ಮಹಿಳೆಯರಿಗೆ ತಾವು ಬೆಳೆದ ಬೆಳೆಗಳನ್ನೇ ಬಳಸಿಕೊಂಡು ಕಿರು ಉದ್ದಿಮೆ ಆರಂಭಿಸಿಕೊಳ್ಳಲು ಈ ಯೋಜನೆಯು ಅದ್ಭುತ ವೇದಿಕೆ ಸೃಷ್ಟಿಸಿ ಕೊಟ್ಟಿದೆ ಎಂದರೆ ತಪ್ಪಾಗುವುದಿಲ್ಲ. ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯ ಸರ್ಕಾರಗಳ ಜೊತೆಯಾಗಿ ಕೇಂದ್ರ ಸರ್ಕಾರವು ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡುವ ಸದುದ್ದೇಶದಿಂದ ಯೋಜನೆಯನ್ನು ಅನುಷ್ಠಾನಗೊಳಿಸಿದೆ.

ಈ ಯೋಜನೆ ಮೂಲಕ ಗರಿಷ್ಠ ರೂ. 15 ಲಕ್ಷದವರೆಗೆ ತಮ್ಮ ಉದ್ಯಮ ಸ್ಥಾಪನೆಗೆ ಹಾಗೂ ಅಭಿವೃದ್ಧಿಗಾಗಿ ಫಲಾನುಭವಿಗಳು ಸಬ್ಸಿಡಿ ಪಡೆಯುತ್ತಾರೆ. ಈ ಯೋಜನೆಯಿಂದ ಒಟ್ಟು ಎಷ್ಟು ಅನುದಾನ ಪಡೆಯಬಹುದು? ಹೇಗೆ ಅರ್ಜಿ ಸಲ್ಲಿಸಬೇಕು? ಏನೆಲ್ಲ ದಾಖಲೆ ನೀಡಬೇಕು? ಎನ್ನುವ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ಓದಿ.

ಯೋಜನೆಯ ಹೆಸರು:- ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯನ್ನು (PM Micro Food Processing Scheme-PMFME)

ಯೋಜನೆಯ ಉದ್ದೇಶ:-
  •  ಅಸಂಘಟಿತ ವಲಯದ ಸಣ್ಣ ಆಹಾರ ಸಂಸ್ಕರಣ ಉದ್ದಿಮೆ ಗಳಿಗೆ ಪ್ರೋತ್ಸಾಹ ನೀಡಿ ಅವುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಿ ಸಂಘಟಿತ ವಲಯಕ್ಕೆ ತರುವುದು
  •  ಈ ಮೂಲಕ ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು ಹಾಗೂ ರೈತ ಉತ್ಪಾದಕ ಸಹಕಾರಿ ಸಂಘಗಳಿಗೆ ಉತ್ತೇಜನ ನೀಡಿ ಈ ಗುಂಪುಗಳನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು.
ಸಿಗುವ ಅನುದಾನ:-
  1.  ಈ ಯೋಜನೆಯ ಗರಿಷ್ಠ ಮೊತ್ತ ರೂ. 30 ಲಕ್ಷ
  2.  ಈ ಯೋಜನೆಯ ವೆಚ್ಚದ ಶೇ.35% ರಷ್ಟು ಮೌಲ್ಯದ ಸಾಲ-ಸಂಪರ್ಕವಿರುವ ಕೇಂದ್ರ ಸರ್ಕಾರದ ಸಹಾಯಧನ ಜೊತೆಗೆ ಹೆಚ್ಚುವರಿ ಶೇ.15% ರಷ್ಟು ರಾಜ್ಯ ಸರ್ಕಾರದಿಂದ ಸಹಾಯಧನ ಸಿಗುತ್ತದೆ.
  3.  ಸಬ್ಸಿಡಿ ಗರಿಷ್ಠ ಮಿತಿ 15 ಲಕ್ಷಗಳು
  4.  ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಚಟುವಟಿಕೆಗಳಾದ ಪ್ಯಾಕೇಜಿಂಗ್, ಜಾಹೀರಾತು, ಸಾಮಾನ್ಯ ಬ್ರಾಂಡ್ ಅಭಿವೃದ್ಧಿ, ಚಿಲ್ಲರೆ ಮಾರಾಟ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮತ್ತಿತರಗಳಿಗೆ ಸರ್ಕಾರದಿಂದ ಹೆಚ್ಚಿನ ಸಹಾಯಧನ ಸಿಗುತ್ತದೆ.
ಅರ್ಜಿ ಸಲ್ಲಿಸಲು ಮಾನದಂಡಗಳು:-

* ಅರ್ಜಿದಾರರಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು
* ಪ್ರಸ್ತುತವಾಗಿ ಕಿರು ಆಹಾರ ಸಂಸ್ಕರಣಾ ಘಟಕಗಳಾಗಿ ಕಾರ್ಯ ನಿರ್ವಹಿಸುತ್ತಿರಬೇಕು.
* ODOP ಉತ್ಪನ್ನಗಳಿಗಾಗಿ SLUPಯಲ್ಲಿ ಗುರುತಿಸಿಕೊಂಡ ಘಟಕವಾಗಿರಬೇಕು (or) ವೈಯಕ್ತಿಕವಾಗಿ ಸಂಪನ್ಮೂಲ ವ್ಯಕ್ತಿಯೇ ಪರಿಶೀಲನೆ ಮಾಡಿರುವಂತಹ ಘಟಕಗಳಾಗಿರಬೇಕು.

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು:-
  •  ರೊಟ್ಟಿ / ಚಪಾತಿ ತಯಾರಿಕೆ
  •  ಶಾವಿಗೆ ತಯಾರಿಕೆ
  •  ಹಪ್ಪಳ ತಯಾರಿಕೆ
  •  ಬೇಕರಿ ಪದಾರ್ಥಗಳು
  •  ಚಕ್ಕಲಿ ತಯಾರಿಕೆ
  •  ಸಿರಿಧಾನ್ಯ ಸಂಸ್ಕರಣೆ
  •  ಹಿಟ್ಟು ಅಥವಾ ರವಾ ತಯಾರಿಕೆ
  •  ಶೇಂಗಾ ಪದಾರ್ಥಗಳು
  •  ಅಡುಗೆ ಎಣ್ಣೆ ತಯಾರಿಕೆ
  •  ಖಾರದಪುಡಿ ಹಾಗೂ ಮಸಾಲೆ ಪದಾರ್ಥ ತಯಾರಿಕೆ
  •  ಹುಣಸೆ ಹಣ್ಣಿನ ಪದಾರ್ಥಗಳ ತಯಾರಿಕೆ
  •  ಸಾವಯವ ಉದ್ಯಮ
  •  ಕುರುಕಲು ತಿಂಡಿ ತಯಾರಿಕೆ
  •  ಉಪ್ಪಿನಕಾಯಿ ತಯಾರಿಕೆ
  •  ಹಾಲಿನ ಉತ್ಪನ್ನಗಳು ತಯಾರಿಕೆ
  •  ಇತ್ಯಾದಿ ಕಿರು ಉದ್ಯಮಗಳು
ಅರ್ಜಿ ಸಲ್ಲಿಸುವ ವಿಧಾನ:-

https://pmfme.mofpi.gov.in ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ನೋಂದಾಯಿಸಬೇಕು.
* ಹೆಚ್ಚಿನ ಮಾಹಿತಿಗಾಗಿ PMFME ವಿಭಾಗ, ಜಂಟಿ ಕೃಷಿ ನಿರ್ದೇಶಕರ ಕಛೇರಿ ಸಂಪರ್ಕಿಸಬಹುದು.

ಬೇಕಾಗುವ ದಾಖಲೆಗಳು:-

  • ಆಧಾರ್ ಕಾರ್ಡ್
  •  ಪ್ಯಾನ್ ಕಾರ್ಡ್
  •  ಬ್ಯಾಂಕ್ ಪಾಸ್ ಬುಕ್ ವಿವರ
  •  ಯೋಜನಾ ಘಟಕದ ವಿವರ
  •  ಉದ್ಯೋಗ ಸ್ಥಳದ ಉತಾರ
  •  ವಿದ್ಯುತ್ ಬಿಲ್
  •  MSME ಲೈಸೆನ್ಸ್
  •  ಯೋಜನಾ ಘಟಕದಲ್ಲಿ ಬಳಿ ನಿಂತು ತೆಗೆಸಿಕೊಂಡಿರುವ ಫೋಟೋ
  • ಇನ್ನಿತ್ಯಾದಿ ಪ್ರಮುಖ ದಾಖಲೆಗಳು.
ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment