Post office Recruitment
ದೇಶದ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವಂತಹ ಅಂಚೆ ಇಲಾಖೆ ವತಿಯಿಂದ ನೇಮಕಾತಿ ಕುರಿತಂತೆ ಗುಡ್ ನ್ಯೂಸ್ ಇದೆ. ಪ್ರತಿ ವರ್ಷವೂ ಕೂಡ ಭಾರತೀಯ ಅಂಚೆ ಇಲಾಖೆ ವತಿಯಿಂದ ಸಾವಿರಾರು ಹುದ್ದೆಗಳ ನೇಮಕಾತಿ ನಡೆಯುತ್ತದೆ, ಈ ಮೂಲಕ ದೇಶದ ಲಕ್ಷಾಂತರ ಸರ್ಕಾರಿ ಹುದ್ದೆ ಆಕಾಂಕ್ಷಿಗಳ ಕನಸು ನನಸಾಗುತ್ತಿದೆ.
ಅಂತೆಯೇ 2025ರ ವರ್ಷದ ಮೊದಲ ನೇಮಕಾತಿ ಕುರಿತು ಇಲಾಖೆ ಮಾಹಿತಿ ಹಂಚಿಕೊಂಡಿದೆ. ಇದರಲ್ಲಿ ಮತ್ತೊಂದು ಅನುಕೂಲತೆ ಏನೆಂದರೆ 10ನೇ ತರಗತಿವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದವರು ಕೂಡ ಸರ್ಕಾರಿ ಹುದ್ದೆ ಪಡೆಯುವಂತ ಅವಕಾಶ ಸಿಗುತ್ತಿದೆ. ಈ ನೇಮಕಾತಿ ಕುರಿತ ಪ್ರಕಟಣೆ ವಿವರ ಹೀಗಿದೆ ನೋಡಿ.
ನೇಮಕಾತಿ ಸಂಸ್ಥೆ:- ಭಾರತೀಯ ಅಂಚೆ ಇಲಾಖೆ(Post office)
ಹುದ್ದೆ ಹೆಸರು:- ಬಹುಕಾರ್ಯ ಸಿಬ್ಬಂದಿ (Multi Tasking Staff)
ಒಟ್ಟು ಹುದ್ದೆಗಳ ಸಂಖ್ಯೆ:- 18,200 ಹುದ್ದೆಗಳು
ಉದ್ಯೋಗ ಸ್ಥಳ:- ಭಾರತದಾದ್ಯಂತ…
ವೇತನ ಶ್ರೇಣಿ:-
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ
ಮಾಸಿಕವಾಗಿ ರೂ.15,000 ರಿಂದ ರೂ.29,380 ವೇತನ ಸಿಗುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ:-
* 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
* ಬೇಸಿಕ್ ಕಂಪ್ಯೂಟರ್ ಆಪರೇಟಿಂಗ್ ಬಲ್ಲವರಾಗಿರಬೇಕು
* ಸ್ಥಳೀಯ ಭಾಷೆ ಓದಲು, ಬರೆಯಲು, ಮಾತನಾಡಲು ಬಲ್ಲವರಾಗಿರಬೇಕು.
ವಯೋಮಿತಿ:-
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವರ್ಷಗಳು
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 25 ವರ್ಷಗಳು
ವಯೋಮಿತಿ ಸಡಲಿಕೆ:–
ಕೇಂದ್ರ ಸರ್ಕಾರದ ಅಂಚೆ ಇಲಾಖೆ ನೇಮಕಾತಿ ನಿಯಮಾವಳಿ ಅನುಸಾರವಾಗಿ ಆಯ್ದ ಕೆಲ ವರ್ಗಕ್ಕೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ:-
- ಆನ್‌ಲೈನ್ ನಲ್ಲಿಯೇ ಅರ್ಜಿ ಸಲ್ಲಿಸಬೇಕು
- ನೇರವಾಗಿ ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಬಳಸಿಕೊಂಡು ನೋಂದಾಯಿಸಿಕೊಳ್ಳಿ
- ಕೇಳಲಾಗುವ ಎಲ್ಲ ವೈಯುಕ್ತಿಕ ವಿವರಗಳನ್ನು ಭರ್ತಿ ಮಾಡಿ ಮತ್ತು ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
- ನಿಮ್ಮ ವರ್ಗಕ್ಕೆ ಅನುಸಾರವಾದ ಅರ್ಜಿ ಶುಲ್ಕವನ್ನು ಆನ್ಲೈನ್ ಪೇಮೆಂಟ್ ಮೂಲಕ ಪಾವತಿಸಿ ರಸೀದಿ ಪಡೆಯಿರಿ ಹಾಗೂ ಅದರ ವಿವರಗಳನ್ನು ಭರ್ತಿ ಮಾಡಿ. (ಅರ್ಜಿ ಶುಲ್ಕ ಅನ್ವಯಿಸುವ ವರ್ಗಗಳು ಮಾತ್ರ)
- ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಬ್ಮಿಟ್ ಮಾಡಿ
ಆಯ್ಕೆ ವಿಧಾನ:-
ಅಭ್ಯರ್ಥಿಗಳು ಗಳಿಸಿರುವ ನಿಗದಿತ ಶೈಕ್ಷಣಿಕ ಅಂಕಗಳನ್ನು ಪರಿಶೀಲಿಸಿ, ನಂತರ ಅವರಿಗೆ ಸ್ಕಿಲ್ ಟೆಸ್ಟ್ ನೀಡಿ, ಆಯ್ಕೆಯಾದವರ ದಾಖಲೆಗಳನ್ನು ಪರಿಶೀಲಿಸಿ, ಮುಂದಿನ ಹಂತದಲ್ಲಿ ನೇರ ಸಂದರ್ಶನ ನಡೆಸುವ ಮೂಲಕ ಅರ್ಹರ ಪಟ್ಟಿ ತಯಾರಿಸಿ ಈ ಹುದ್ದೆಗಳಿಗೆ ಆಯ್ದುಕೊಳ್ಳಲಾಗುತ್ತದೆ.
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – ಈಗಾಗಲೇ ಆರಂಭವಾಗಿದೆ
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 28.01.2025
ಬೇಕಾಗುವ ದಾಖಲೆಗಳು:-
- ಅಭ್ಯರ್ಥಿಯ ಆಧಾರ್ ಕಾರ್ಡ್
- 10ನೇ ತರಗತಿ ಅಂಕಪಟ್ಟಿ
- ಕಂಪ್ಯೂಟರ್ ಸಾಕ್ಷರತಾ ಅಂಕ ಪಟ್ಟಿ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಇತ್ತೀಚಿನ ಭಾವಚಿತ್ರ ಮತ್ತು ಸಹಿ
- ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ
- ಇನ್ನಿತರ ಪ್ರಮುಖ ದಾಖಲೆಗಳು