Post office Recruitment ಅಂಚೆ ಇಲಾಖೆಯಲ್ಲಿ ಉದ್ಯೋಗವಕಾಶ.! ವೇತನ 2,25,937

Post office Recruitment

ಭಾರತೀಯ ಅಂಚೆ ಇಲಾಖೆಯು (Indian Post Payment Bank) ತನ್ನ ವಿಶೇಷವಾದ ಸೇವೆ ಹಾಗೂ ಸೌಕರ್ಯಗಳ ಮೂಲಕ ದೇಶದ ಜನತೆಗೆ ಸಾಕಷ್ಟು ಅನುಕೂಲ ಮಾಡಿಕೊಡುತ್ತಿದೆ. ಅದರಲ್ಲೂ ಯುವಜನತೆಯ ಪಾಲಿಗಂತೂ ಅಂಚೆ ವಿಭಾಗವು ಪ್ರತಿ ವರ್ಷ ಲಕ್ಷಾಂತರ ಉದ್ಯೋಗ ಸೃಷ್ಟಿಸಿ ಕೊಡುವ ವರದಾನವಾಗಿದೆ. ಪ್ರತಿ ವರ್ಷವೂ ಕೂಡ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿರುತ್ತದೆ.

WhatsApp Group Join Now
Telegram Group Join Now

ದೇಶದಾದ್ಯಂತ ಇರುವ ಆಸಕ್ತ ಪ್ರತಿಭಾವಂತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕೇಂದ್ರ ಸರ್ಕಾರದ ಹುದ್ದೆ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ನೀವು ಕೂಡ ಈ ಬಗ್ಗೆ ಆಸಕ್ತಿ ಹೊಂದಿದ್ದರೆ ದೇಶ ಸೇವೆಯ ಜೊತೆಗೆ ಕೈ ತುಂಬಾ ಸಂಬಳ ಪಡೆಯುವಂತಹ ಉದ್ಯೋಗ ಪಡೆಯುವ ಕನಸು ಹೊತ್ತಿದ್ದರೆ ಈ ಲೇಖನದಲ್ಲಿರುವ ಮಾಹಿತಿ ನಿಮಗೆ ಅನುಕೂಲವಾಗಬಹುದು, ಹಾಗಾಗಿ ಅಂಕಣವನ್ನು ಕೊನೆಯವರೆಗೂ ಓದಿ.

ಭಾರತೀಯ ಅಂಚೆ ಇಲಾಖೆಯಲ್ಲಿ ಪ್ರಸ್ತುತವಾಗಿ ಅರ್ಜಿ ಆಹ್ವಾನ ಮಾಡಿರುವ ಹುದ್ದೆಗಳ ಕುರಿತ ವಿವರ ಹೀಗಿದೆ:-
ನೇಮಕಾತಿ ಸಂಸ್ಥೆ:- ಭಾರತೀಯ ಅಂಚೆ ಇಲಾಖೆ

ಹುದ್ದೆ ಹೆಸರು:- ಸ್ಪೆಷಲ್ ಆಫೀಸರ್ ಹುದ್ದೆಗಳು
* ಸೀನಿಯರ್ ಮ್ಯಾನೇಜರ್
* ಮ್ಯಾನೇಜರ್
* ಸಹಾಯಕ ವ್ಯವಸ್ಥಾಪಕರು

ವಿಭಾಗ:-
* ಡ್ರೈವ್ ಐಟಿ
* ಸೈಬರ್ ಸೆಕ್ಯೂರಿಟಿ

ಒಟ್ಟು ಹುದ್ದೆಗಳ ಸಂಖ್ಯೆ:- 68 ಹುದ್ದೆಗಳು

ಉದ್ಯೋಗ ಸ್ಥಳ:- ಭಾರತದಾದ್ಯಂತ ವಿವಿಧ ಶಾಖೆಗಳಲ್ಲಿ

ವೇತನ ಶ್ರೇಣಿ:- ಮಾಸಿಕವಾಗಿ…
* ಸೀನಿಯರ್ ಮ್ಯಾನೇಜರ್ – ರೂ. 2,25,937
* ಮ್ಯಾನೇಜರ್ – ರೂ. 1,77,146
* ಸಹಾಯಕ ವ್ಯವಸ್ಥಾಪಕರು – ರೂ. 1,40,398

ಶೈಕ್ಷಣಿಕ ವಿದ್ಯಾರ್ಹತೆ:-

ಮಾಹಿತಿ ತಂತ್ರಜ್ಞಾನ (IT) ಅಥವಾ ಕಂಪ್ಯೂಟರ್ ಸೈನ್ಸ್ (CS) ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ

ವಯೋಮಿತಿ:-

* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ
1. ಸೀನಿಯರ್ ಮ್ಯಾನೇಜರ್ ಹುದ್ದೆಗಳಿಗೆ 26 ರಿಂದ 35 ವರ್ಷಗಳು
2. ಮ್ಯಾನೇಜರ್ ಹುದ್ದೆಗಳಿಗೆ 23 ರಿಂದ 35 ವರ್ಷಗಳು
3. ಸಹಾಯಕ ವ್ಯವಸ್ಥಾಪಕರು ಹುದ್ದೆಗಳಿಗೆ 21 ರಿಂದ 35 ವರ್ಷಗಳು.

ವಯೋಮಿತಿ ಸಡಿಲಿಕೆ:-
* SC/ST ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 5 ವರ್ಷಗಳು
* OBC ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 3 ವರ್ಷಗಳು
* ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು

ಅರ್ಜಿ ಸಲ್ಲಿಸುವ ವಿಧಾನ:-

* ಆಸಕ್ತ ಅಭ್ಯರ್ಥಿಗಳು ನೇರವಾಗಿ ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ಗೆ (https://www.ippbonline.com) ಭೇಟಿ ನೀಡಿ ಅರ್ಜಿ ಫಾರಂ ಲಿಂಕ್ ಕ್ಲಿಕ್ ಮಾಡುವ ಅರ್ಜಿ ಸಲ್ಲಿಸಲು ಮುಂದುವರಿಯಿರಿ
* ಅರ್ಜಿ ಸಲ್ಲಿಕೆ ಯಶಸ್ವಿ ಆದ ನಂತರ ತಪ್ಪದೇ ಅರ್ಜಿ ಸ್ವೀಕೃತಿ ಪ್ರತಿ ಹಾಗೂ ಅರ್ಜಿ ಶುಲ್ಕ ಪಾವತಿ ಮಾಡಿರುವ ರಸೀದಿ ಪ್ರಿಂಟ್ ಪಡೆಯಿರಿ

ಅರ್ಜಿ ಶುಲ್ಕ:-
* ಆನ್ಲೈನ್ ಪೇಮೆಂಟ್ ಮೂಲಕ ಮಾತ್ರವೇ ಅರ್ಜಿ ಶುಲ್ಕ ಪಾವತಿಸಬೇಕು
* ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೂ ಅರ್ಜಿ ಶುಲ್ಕ ರೂ. 750

ಆಯ್ಕೆ ವಿಧಾನ:-
ಸ್ಪರ್ಧಾತ್ಮಕ ಪರೀಕ್ಷೆ ವಿಧಾನದ ಮೂಲಕ ಮೊದಲಿಗೆ ಲಿಖಿತ ಪರೀಕ್ಷೆ ನಡೆಸಿ, ಆಯ್ಕೆ ಆದ ಅಭ್ಯರ್ಥಿಗಳ ನೇರ ಸಂದರ್ಶನ ದಾಖಲೆಗಳ ಪರಿಶೀಲನೆ ನಡೆಸಿ ಅರ್ಹರನ್ನು ಆಯ್ದುಕೊಳ್ಳಲಾಗುವುದು.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:- 21.12.2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 10.01.2025

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment