Ration Card: ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ.! ಹೊಸ ಸದಸ್ಯರ ಸೇರ್ಪಡೆ ಮಾಡಲು ಈ ದಾಖಲೆಗಳು ಕಡ್ಡಾಯ.!

Ration Card

ರೇಷನ್ ಕಾರ್ಡ್ (Ration Card) ಎಷ್ಟು ಪ್ರಮುಖವಾದ ದಾಖಲೆ ಎನ್ನುವುದು ಈಗಾಗಲೇ ರಾಜ್ಯದ ಜನತೆಗೆ ಮನವರಿಕೆಯಾಗಿದೆ. ಸ್ಕಾಲರ್ಶಿಪ್ ಪಡೆಯುವ ಶಾಲಾ ವಿದ್ಯಾರ್ಥಿಗಳಿಂದ ಹಿಡಿದು ಸರ್ಕಾರದ ಯೋಜನೆಗಳ ಅನುದಾನ ಪಡೆಯಬೇಕಾಗಿರುವ ರೈತ ವರ್ಗ ಸೇರಿದಂತೆ ಕಾರ್ಮಿಕರು ಹಾಗೂ ಗ್ಯಾರಂಟಿ ಯೋಜನೆಗಳ ಫಲಾನುಭವಿ ಆಗಿರುವ ಮಹಿಳೆಯರು ಸೇರಿದಂತೆ ಎಲ್ಲರಿಗೂ ರೇಷನ್ ಕಾರ್ಡ್ ನಲ್ಲಿ ಹೆಸರಿರುವುದು ಕಡ್ಡಾಯವಾಗಿದೆ.

WhatsApp Group Join Now
Telegram Group Join Now

ಒಂದು ವೇಳೆ ಇತರೆ ದಾಖಲೆಗಳು ಹಾಗೂ ರೇಷನ್ ಕಾರ್ಡ್ ನಲ್ಲಿ ಇರುವ ಹೆಸರಿನಲ್ಲಿ ವ್ಯತ್ಯಾಸವಾದರೆ ಯಾವುದೇ ಯೋಜನೆಗಳ ಪ್ರಯೋಜನ ಸಿಗುವುದಿಲ್ಲ. ಹೀಗಾಗಿ ಇಂತಹ ಸಮಸ್ಯೆಗಳಿಗೆ ತಿದ್ದುಪಡಿ (Correction) ಅನಿವಾರ್ಯ ಆದರೆ ರೇಷನ್ ಕಾರ್ಡ್ ತಿದ್ದುಪಡಿಗೆ ಎಷ್ಟೇ ಮನವಿ ಸಲ್ಲಿಕೆಯಾಗಿದ್ದರೂ ಕಳೆದ ವರ್ಷ ಸರ್ವರ್ ಸಮಸ್ಯೆ ಹಾಗೂ ಇನ್ನಿತರ ಕಾರಣಗಳಿಂದ ಪ್ರಕ್ರಿಯೆ ತಡವಾಗಿತ್ತು.

ಆದರೆ ಈಗ ಸಮಸ್ಯೆ ಬಗೆಹರಿದಿದೆ ಜನವರಿ 31ರವರೆಗೂ ಕೂಡ ರೇಷನ್ ಕಾರ್ಡ್ ನಲ್ಲಿ ಪ್ರಮುಖ ತಿದ್ದುಪಡಿ ಜೊತೆಗೆ ಹೆಸರನ್ನು ಸೇರ್ಪಡೆ ಮಾಡಿಸುವುದು ಹಾಗೂ ಹೆಸರನ್ನು ತೆಗೆದುಹಾಕುವುದು ಇವುಗಳಿಗೂ ಅನುಮತಿ ಮಾಡಿಕೊಡಲಾಗಿದೆ. ಯಾವುದಕ್ಕೆ ಅವಕಾಶವಿದೆ? ಯಾವ ತಿದ್ದುಪಡಿಗೆ ಏನೆಲ್ಲಾ ದಾಖಲೆಗಳನ್ನು ಕೊಡಬೇಕು? ಮತ್ತು ಅಪ್ಲೈ ಮಾಡುವುದು ಹೇಗೆ? ಇತ್ಯಾದಿ ಮಾಹಿತಿಗಾಗಿ ಅಂಕಣವನ್ನು ಕೊನೆಯವರೆಗೂ ಓದಿ.

ಈ ಕೆಳಕಂಡ ತಿದ್ದುಪಡಿ ಗಳಿಗೆ ಅವಕಾಶ:-
  •  ಕುಟುಂಬದ ಮುಖ್ಯಸ್ಥರ ಬದಲಾವಣೆ
  •  ಹೆಸರಿನಲ್ಲಿ ವ್ಯತ್ಯಾಸವಿದ್ದರೆ ತಿದ್ದುಪಡಿ
  •  ನ್ಯಾಯಬೆಲೆ ಅಂಗಡಿ ಬದಲಾವಣೆ
  •  ಭಾವಚಿತ್ರ ಬದಲಾವಣೆ
  •  ಹೊಸ ಸದಸ್ಯರನ್ನು ಸೇರ್ಪಡೆ ಮಾಡುವುದು
  •  ಸದಸ್ಯರ ಹೆಸರನ್ನು ತೆಗೆದು ಹಾಕಿಸುವುದು
ಬೇಕಾಗುವ ದಾಖಲೆಗಳು:-
  • ಹಳೆಯ ರೇಷನ್ ಕಾರ್ಡ್
  • ಸದಸ್ಯರ ಆಧಾರ್ ಕಾರ್ಡ್
  • ಹೊಸ ಸದಸ್ಯರ ಸೇರ್ಪಡೆಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, 6 ವರ್ಷದ ಒಳಗಿನ ಮಕ್ಕಳಾಗಿದ್ದರೆ ಜನರ ಪ್ರಮಾಣ ಪತ್ರ
  • ವಿವಾಹವಾದ ಬಳಿಕ ಹೊಸ ಸದಸ್ಯರ ಸೇರ್ಪಡೆ ಆಗುತ್ತಿದ್ದರೆ ವಿವಾಹ ನೋಂದಣಿ ಪ್ರಮಾಣ ಪತ್ರ ಅಥವಾ ಮದುವೆಯ ಆಮಂತ್ರಣ ಪತ್ರ
  •  ಇನ್ನಿತರ ಪ್ರಮುಖ ದಾಖಲೆಗಳು

ಅಪ್ಲೈ ಮಾಡುವುದು ಹೇಗೆ:-

  •  ಹತ್ತಿರದಲ್ಲಿರುವ ಬೆಂಗಳೂರು ಒನ್ / ಕರ್ನಾಟಕ ಒನ್ / ಗ್ರಾಮ ಒನ್ ಅಥವಾ ಸೇವಾ ಸಿಂಧು ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು
  •  ಫಲಾನುಭವಿಯು ನೇರವಾಗಿ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಕೂಡ ಸ್ವಯಂ ಅರ್ಜಿ ಸಲ್ಲಿಸಬಹುದು
  •  ಗೂಗಲ್ ನಲ್ಲಿ https://ahara.nic.in ವೆಬ್ ಸೈಟ್ ಗೆ ಭೇಟಿ ನೀಡಿ
  • ಹೊಸದಾಗಿ User ID ಕ್ರಿಯೇಟ್ ಮಾಡಿಕೊಳ್ಳಿ
  • Used ID ಬಳಸಿ Login ಆಗಿ.

* ತಿದ್ದುಪಡಿ ಫಾರಂ ಲಿಂಕ್ ಕ್ಲಿಕ್ ಮಾಡಿ ಯಾವ ಬಗೆಯ ತಿದ್ದುಪಡಿ ಎನ್ನುವುದನ್ನು ಆರಿಸಿ ಅದರಲ್ಲಿ ಸೂಚಿಸಿರುವ ಸೂಚನೆಗಳ ಪ್ರಕಾರ ವಿವರಗಳನ್ನು ಭರ್ತಿ ಮಾಡಿ ದಾಖಲೆಗಳನ್ನು ಒದಗಿಸಿ ನೋಂದಣಿ ಮಾಡಿಕೊಂಡು ನೋಂದಣಿ ಕನಿಷ್ಠ ಶುಲ್ಕವನ್ನು ಪಾವತಿಸಿ ರಸೀದಿ ಪಡೆಯಿರಿ.

* ಅಥವಾ ಇಲಾಖೆಗೆ ವೆಬ್ಸೈಟ್ ಗೆ ಲಾಗಿನ್ ಆದ ಬಳಿಕ ಇ-ಸೇವೆಗಳು ಆಪ್ಷನ್ ಕ್ಲಿಕ್ ಮಾಡಿ ತಿದ್ದುಪಡಿ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ವಿಭಾಗವನ್ನು ಆರಿಸಿ ವಿವರಗಳನ್ನು
ಭರ್ತಿ ಮಾಡಿ ದಾಖಲೆಗಳನ್ನು ಒದಗಿಸಿ ಶುಲ್ಕ ಪಾವತಿಸಿ ರಸೀದಿ ಪಡೆಯಿರಿ.

* ಎಲ್ಲ ಮಾಹಿತಿ ಸರಿಯಾಗಿದ್ದರೆ ನಿಮ್ಮ ಮನೆಯ ವಿಳಾಸಕ್ಕೆ ಹೊಸ ರೇಷನ್ ಕಾರ್ಡ್ ಬರುತ್ತದೆ ಮತ್ತು ನೀಡಲಾಗಿರುವ ಆಕ್ನೋಲೇಜಮೆಂಟ್ ನಂಬರ್ ಮೂಲಕ ಅರ್ಜಿ ಸ್ಟೇಟಸ್ ಕೂಡ ಟ್ರ್ಯಾಕ್ ಮಾಡಬಹುದು

ತಿದ್ದುಪಡಿಗೆ ಕೊನೆಯ ದಿನಾಂಕ:- 31 ಜನವರಿ 2025

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment