Ration Card eKYC:
ಇಂದಿಗೂ ಭಾರತದಲ್ಲಿ ಎರಡು ಹೊತ್ತಿನ ಊಟವೂ ಸಿಗದ ಲಕ್ಷಾಂತರ ಜನರಿದ್ದಾರೆ. ಇದಕ್ಕಾಗಿ ಅವರು ಕಷ್ಟಪಟ್ಟು ತಮ್ಮ ಕುಟುಂಬವನ್ನು ಪೋಷಿಸುತ್ತಾರೆ. ಆದರೆ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಜನರು ಆಹಾರವಿಲ್ಲದೆ ಪರದಾಡಿದರು. ಇದನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನದಿಂದಾಗಿ ದೇಶಾದ್ಯಂತ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರವನ್ನು ನೀಡಲಾಗುತ್ತಿದೆ. ಸರ್ಕಾರದ ಈ ಯೋಜನೆಯು ಕೋವಿಡ್ ಸಾಂಕ್ರಾಮಿಕದ ನಂತರ ಪ್ರಾರಂಭವಾಯಿತು.
ಈಗ ಸರ್ಕಾರದ ಸೂಚನೆಯ ಮೇರೆಗೆ ಕಾರ್ಡ್ ಹೊಂದಿರುವವರು ಪಡಿತರ ಚೀಟಿ ಮೂಲಕ ಪಡಿತರವನ್ನು ಪಡೆಯಲು ಇಕೆವೈಸಿ ಮಾಡಬೇಕಾಗಿದೆ. ಎಲ್ಲಾ ಪಡಿತರ ಚೀಟಿದಾರರಿಗೆ ಆಹಾರ ಮತ್ತು ಜಾರಿ ಇಲಾಖೆಯಿಂದ ಈ ಸೂಚನೆಗಳನ್ನು ನೀಡಲಾಗಿದೆ. ಪಡಿತರ ಚೀಟಿದಾರರು ಇಕೆವೈಸಿ ಮಾಡದಿದ್ದರೆ ಪಡಿತರ ಪಡೆಯಲು ತೊಂದರೆಯಾಗಬಹುದು. ಆದ್ದರಿಂದ ಯಾವುದೇ ಪಡಿತರ ಚೀಟಿದಾರರು eKYC ಅನ್ನು ಹೇಗೆ ಮತ್ತು ಎಲ್ಲಿ, ಇದರ ಕೊನೆಯ ದಿನಾಂಕದ ಬಗ್ಗೆ ತಿಳಿಯೋಣಾ ಬನ್ನಿ..
ಪಡಿತರ ಚೀಟಿ (Ration Card) ಪ್ರಮುಖ ದಾಖಲೆಗಳಲ್ಲಿ ಕೂಡ ಒಂದಾಗಿದೆ. ಇದರಿಂದ ಮಧ್ಯಮ ವರ್ಗದವರಿಗೆ ಕಡಿಮೆ ದರದಲ್ಲಿ ಪಡಿತರವನ್ನು ವಿತರಣೆ ಮಾಡಲಾಗುತ್ತದೆ. ಇದೇ ರೇಷನ್ ಕಾರ್ಡ್ (Ration Card) ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಆಗಾಗ ಹೊಸ ನಿಯಮ (New rule)ಗಳನ್ನು ಜಾರಿ ಮಾಡುತ್ತಲೇ ಇರುತ್ತದೆ. ಹಾಗೆಯೇ, ಇದೀಗ ಮಹತ್ವದ ಅಪ್ಡೇಟ್‌ವೊಂದನ್ನು ಕೊಟ್ಟಿದೆ. ಈ ಬಗ್ಗೆ ಇಂದಿನ ಈ ಲೇಖನದಲ್ಲಿ ತಿಳಿಯೋಣ ಬನ್ನಿ.
ಭಾರತ ಸರ್ಕಾರವು ಪಡಿತರ ಚೀಟಿ ಹೊಂದಿರುವವರಿಗೆ ಹಲವು ಯೋಜನೆಗಳನ್ನು ನೀಡುತ್ತಲೇ ಇರುತ್ತದೆ. ಅದರಲ್ಲೂ ಜನರು ಹಸಿವಿನಿಂದ ಇರಬಾರದು ಎಂಬ ಕಾರಣಕ್ಕೆ ಭಾರತ ಸರ್ಕಾರ ಪಡಿತರವನ್ನು ಕೂಡ ವಿತರಣೆ ಮಾಡುತ್ತಿದೆ. ದೇಶದ ಹಲವೆಡೆ ಇಂದಿಗೂ ಕೂಡ ಒಂದೊತ್ತಿನ ಊಟಕ್ಕೂ ಕಷ್ಟಪಡುವವರಿದ್ದಾರೆ. ಇಂತಹವರಿಗಾಗಿಯೇ ಸರ್ಕಾರವು ಹಲವು ಯೋಜನೆಗಳನ್ನ ತಂದಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ, ಕಡಿಮೆ ದರ ಮತ್ತು ಉಚಿತವಾಗಿ ಪಡಿತರ ವಿತರಣೆ (Free ration distribution) ಮಾಡುತ್ತಿದೆ. ಈ ಯೋಜನೆಯು ದೇಶದ ಎಲ್ಲಾ ರಾಜ್ಯಗಳಲ್ಲಿ ಜಾರಿಯಲ್ಲಿದೆ. ದೇಶದ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರ ನೀಡಲಾಗುತ್ತಿದೆ.
ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಮಾತ್ರ ಕಡಿಮೆ ದರದಲ್ಲಿ ಪಡಿತರವನ್ನು ವಿತರಣೆ ಮಾಡಲಾಗುತ್ತದೆ. ಆದ್ದರಿಂದ, ಸರ್ಕಾರವು ಫಲಾನುಭವಿಗಳನ್ನ ಗುರುತಿಸಲು ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಿದ್ದು, ಈ ಅರ್ಹತಾ ಮಾನದಂಡಗಳನ್ನಾಧರಿಸಿ ಪಡಿತರ ಚೀಟಿ ವಿತರಣೆ ಮಾಡಲಾಗುತ್ತಿದೆ. ಪಡಿತರ ಚೀಟಿ ಹೊಂದಿದವರಿಗೆ ಮಾತ್ರ ಕಡಿಮೆ ದರದಲ್ಲಿ ಆಹಾರ ಧಾನ್ಯಗಳನ್ನು ನೀಡಲಾಗುತ್ತಿದೆ. ಇನ್ನು ಇದೀಗ ಪಡಿತರ ಚೀಟಿದಾರರಿಗೆ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಈ ಮಾರ್ಗಸೂಚಿ ಪಾಲನೆ ಮಾಡದವರಿಗೆ ಫೆಬ್ರವರಿ 15ರಿಂದ ಪಡಿತರ ಸಿಗುವುದಿಲ್ಲ ಅಂತಲೂ ತಿಳಿಸಿದೆ.
eKYC ಪಡೆಯುವ ಪ್ರಕ್ರಿಯೆ;-
ನಿಮ್ಮ ಪಡಿತರ ಚೀಟಿಗೆ KYC ಮಾಡುವ ಪ್ರಕ್ರಿಯೆಯು ತುಂಬಾ ಸರಳವಾಗಿದೆ. ಇದಕ್ಕಾಗಿ, ನೀವು ಅದೇ ಪಡಿತರ ಅಂಗಡಿಗೆ ಅಥವಾ ನಿಮ್ಮ ರಾಜ್ಯದ ಅಡಿಯಲ್ಲಿ ಯಾವುದೇ ಪಡಿತರ ಅಂಗಡಿಗೆ ತೆರಳಿ ಅಲ್ಲಿ ನಿಮ್ಮ KYC ಮಾಡಿಸಿಕೊಳ್ಳಬೇಕು. ಗಮನಿಸಬೇಕಾದ ವಿಷಯವೆಂದರೆ, ಕೆವೈಸಿಗಾಗಿ ಪಡಿತರ ಚೀಟಿಯಲ್ಲಿ ಯಾರ ಹೆಸರು ನೋಂದಾಯಿಸಲ್ಪಟ್ಟಿದೆ ಮತ್ತು ಯಾರ ಹೆಸರಿನಲ್ಲಿ ಪಡಿತರವನ್ನು ತೆಗೆದುಕೊಳ್ಳಲಾಗುತ್ತಿದೆ ಅವರೆಲ್ಲರೂ ಪಡಿತರ ಅಂಗಡಿಗೆ ತೆರಳಬೇಕಾಗುತ್ತದೆ.
ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಸೂಚನೆ ನೀಡಿದೆ. ಆದ್ದರಿಂದ ಎಲ್ಲಾ ಪಡಿತರ ಚೀಟಿದಾರರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಲೇಬೇಕಾಗುತ್ತದೆ. ಒಂದು ವೇಳೆ ಇ-ಕೆವೈಸಿ ಮಾಡಿಸಿಕೊಳ್ಳದ ಫಲಾನುಭವಿಗಳಿಗೆ ಪಡಿತರ ವಿತರಣೆಯನ್ನು ನಿಲ್ಲಿಸಲಾಗುತ್ತದೆ ಅಂತಲೂ ತಿಳಿಸಿದೆ. ಆದ್ದರಿಂದ ನೀವು ಇ-ಕೆವೈಸಿ ಮಾಡಿಕೊಳ್ಳದೇ ಇದ್ದರೆ, ಶೀಘ್ರದಲ್ಲಿಯೇ ಮಾಡಿಸಿಕೊಳ್ಳಬೇಕಿದೆ.
ಪಡಿತರ ಚೀಟಿಗಾಗಿ ಇ-ಕೆವೈಸಿ ಮಾಡಲು, ನೀವು ನಿಮ್ಮ ಹತ್ತಿರದ ಆಹಾರ ಪೂರೈಕೆ ಕೇಂದ್ರಕ್ಕೆ ಭೇಟಿ ನೀಡಬಹುದಾಗಿದೆ.ಇ-ಕೆವೈಸಿ ಮಾಡಿಸಲು ಆಧಾರ್ ಕಾರ್ಡ್ ಕಡ್ಡಾಯ ಆಗಿದೆ. ಆನ್‌ಲೈನ್ ಮೂಲಕವೂ ಪಡಿತರ ಚೀಟಿಯ ಇ-ಕೆವೈಸಿಯನ್ನ ಮಾಡಿಸಬಹುದಾಗಿದೆ.
ಹೊಸ ಸದಸ್ಯರ ಸೇರ್ಪಡೆ ಹೇಗೆ.?
- ಅಧಿಕೃತ ವೆಬ್‌ಸೈಟ್ https://ahara.karnataka.gov.in/ ಭೇಟಿ ನೀಡಿ.
- ಪಬ್ಲಿಕ್ ಯೂಸ್ ಎಂಬ ಮೆನು ಬಾರ್ ಕೆಳಗೆ ಜಿಲ್ಲಾವಾರು ಮಾಹಿತಿ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಹೊಸ ಪಡಿತರ ಚೀಟಿ ಮತ್ತು ಪಡಿತರ ಚೀಟಿ ತಿದ್ದುಪಡಿ ಅಯ್ಕೆ ವಿಭಾಗಗಳು ಇವೆ.
- ಹೊಸ ರೇಷನ್ ಕಾರ್ಡ್ ಬೇಕಾದರೆ ಅಪ್ಲೈ ಫಾರ್ ನ್ಯೂ ರೇಷನ್ ಕಾರ್ಡ್ ಮತ್ತು ಪಡಿತರ ಚೀಟಿ ತಿದ್ದುಪಡಿಗಾದರೆ ಅಪ್ಲೈ ಫಾರ್ ರೇಷನ್
- ಕಾರ್ಡ್ ಕರೆಕ್ಷನ್ಸ್ ಆಯ್ಕೆ ಸೆಲೆಕ್ಟ್ ಮಾಡಬೇಕಾಗುತ್ತದೆ.
- ಹೊಸ ಪೇಜ್‌ನಲ್ಲಿ ಕಾಣಸುವ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ.
- ನಂತರ ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಬೇಕು.
- ಪರಿಷ್ಕೃತ ಪಡಿತರ ಚೀಟಿ, ಹೊಸ ಪಡಿತರ ಚೀಟಿ ವಿತರಣೆ ಆಗುತ್ತದೆ.
ರೇಷನ್ ಕಾರ್ಡ್ ತಿದ್ದುಪಡಿಗೆ ಬೇಕಾದ ಅಗತ್ಯ ದಾಖಲೆಗಳು
- ಕುಟುಂಬದ ಸದಸ್ಯರ ಆಧಾರ್ ಕಾರ್ಡ್
- ಕುಟುಂಬದ ಸದಸ್ಯರ ಜಾತಿ ಪ್ರಮಾಣ ಪತ್ರ
- ಕುಟುಂಬದ ಸದಸ್ಯರ ಆದಾಯ ಪ್ರಮಾಣ ಪತ್ರ
- ಮಕ್ಕಳ ಜನನ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ರೇಷನ್ ಕಾರ್ಡ್
- ಇತರ ಅಗತ್ಯ ದಾಖಲಾತಿಗಳು
ಪಡಿತರ ಅಂಗಡಿಯನ್ನು ತಲುಪಿದ ನಂತರ, ನೀವು ಪಡಿತರ ಚೀಟಿದಾರರನ್ನು ಭೇಟಿಯಾಗಿ ಪಡಿತರ ಚೀಟಿಯ ಇಕೆವೈಸಿಗಾಗಿ ಬಂದಿರುವಾಗಿ ತಿಳಿಸಿ. ಇದರೊಂದಿಗೆ ನಿಮ್ಮ ಪಡಿತರ ಚೀಟಿ, ಅದರ ನಕಲು ಪ್ರತಿ ಮತ್ತು ಆಧಾರ್ ಕಾರ್ಡ್ ಅನ್ನು ಸಹ ನೀವು ಪಡಿತರ ಅಂಗಡಿಗೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಪಡಿತರ ವಿತರಕರು ನಿಮ್ಮ ದಾಖಲೆಗಳನ್ನು ತೆಗೆದುಕೊಂಡು ಪೋಸ್ ಯಂತ್ರದಲ್ಲಿ ನಿಮ್ಮ ಬೆರಳಚ್ಚುಗಳನ್ನು ಸ್ಕ್ಯಾನ್ ಮಾಡುತ್ತಾರೆ. ಅವುಗಳನ್ನು ನೋಂದಾಯಿಸಿದ ನಂತರ ನಿಮ್ಮ KYC ರೆಡಿಯಾಗುತ್ತದೆ.
ಇ – ಕೆವೈಸಿ ಸ್ಥಿತಿ ಚೆಕ್ ಮಾಡುವುದು ಹೇಗೆ ?
ಹಂತ 1: ಮೊದಲಿಗೆ ಆಹಾರ ಸರಬರಾಜು ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ತೆರಳಬೇಕು ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ https://ahara.kar.nic.in/lpg/ ಇಲ್ಲಿ ನಿಮ್ಮ ವಿಭಾಗದ ಜಿಲ್ಲೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ, ಉದಾಹರಣೆಗೆ ನಿಮ್ಮ ಜಿಲ್ಲೆ ಹಾವೇರಿ ಆಗಿದ್ದಲ್ಲಿ ಮೂರನೇ ಲಿಂಕನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು.
ಹಂತ 2- ಇಲ್ಲಿ ಎಡಗಡೆ ಭಾಗದಲ್ಲಿ ‘ಪಡಿತರ ಚೀಟಿ ವಿವರ’ ಆಪ್ಷನ್ ಸೆಲೆಕ್ಟ್ ಮಾಡಿಕೊಳ್ಳಿ
ಹಂತ 3- ನಂತರ ಇಲ್ಲಿ ನಿಮಗೆ ಎರಡು ಆಪ್ಶನ್ ಕಾಣಿಸಿಕೊಳ್ಳುತ್ತೆ with out OTP ಆಪ್ಷನ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ Go ಮೇಲೆ ಕ್ಲಿಕ್ ಮಾಡಿ
ಹಂತ 4- ಇಲ್ಲಿ ನಿಮ್ಮ ರೇಷನ್ ಕಾರ್ಡ್ ನ ಸಂಪೂರ್ಣವಾದ ಸ್ಥಿತಿ ಕಾಣಿಸಿಕೊಳ್ಳುತ್ತದೆ, ಇಲ್ಲಿ ನೀವು ಗಮನಿಸಬಹುದು ekyc Remaining ಜಾಗದಲ್ಲಿ ನಿಮ್ಮ ಮನೆಯ ಸದಸ್ಯರ ekyc ಆಗದೆ ಇದ್ದಲ್ಲಿ ನಂಬರ್ ತೋರಿಸುತ್ತದೆ.
KYC ಮಾಡಲು ಕಾರಣವೇನು?:
ಕೋವಿಡ್ ಸಾಂಕ್ರಾಮಿಕವಾಗಿ ನಾಲ್ಕು ವರ್ಷಗಳಿಗಿಂತ ಹೆಚ್ಚು ಕಳೆದಿದೆ. ಈ ಅವಧಿಯಲ್ಲಿ, ಪಡಿತರ ಚೀಟಿಯಲ್ಲಿ ಹೆಸರು ನೋಂದಾಯಿಸಿದ ಕೆಲವು ಸದಸ್ಯರು ನಿಧನರಾದ ಹಲವಾರು ಕುಟುಂಬಗಳು ದೇಶದಲ್ಲಿವೆ. ಆದರೆ ಅವರ ಸಾವಿನ ನಂತರವೂ ಅವರ ಹೆಸರಿನಲ್ಲಿ ಪಡಿತರವನ್ನು ತೆಗೆದುಕೊಳ್ಳಲಾಗುತ್ತಿದ್ದು, ಇದರಿಂದ ಸರ್ಕಾರಕ್ಕೆ ಹೆಚ್ಚುವರಿ ಹೊರೆಯಾಗುತ್ತಿದೆ. ಆದ್ದರಿಂದ, ಮರಣ ಹೊಂದಿದ ಸದಸ್ಯರ ಹೆಸರನ್ನು ತೆಗೆದುಹಾಕಲು ಮಾತ್ರ eKYC ಮಾಡಲಾಗುತ್ತಿದೆ.