Ration Card
ರೇಷನ್ ಕಾರ್ಡ್ (Ration-card) ಈಗ ಇನ್ನಿತರ ಗುರುತಿನ ಚೀಟಿಗಳಂತೆ ಅತ್ಯಂತ ಪ್ರಮುಖವಾದ ದಾಖಲೆಯಾಗಿದೆ. ಕರ್ನಾಟಕದ ಮಟ್ಟಕ್ಕೆ ಹೇಳುವುದಾದರೆ ಅನ್ನಭಾಗ್ಯ, ಗೃಹಲಕ್ಷ್ಮಿ ಮುಂತಾದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯಲು ವೈದ್ಯಕೀಯ ಹಾಗೂ ಶೈಕ್ಷಣಿಕ ಶುಲ್ಕಗಳಲ್ಲಿ ರಿಯಾಯಿತಿ ಪಡೆಯಲು ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗಾಗಿ ಸರ್ಕಾರ ರೂಪಿಸುವ ಯೋಜನೆಗಳ ಅನುಕೂಲತೆ ಪಡೆಯಲು ರೇಷನ್ ಕಾರ್ಡ್ ದಾಖಲೆಯಾಗಿ ಕಡ್ಡಾಯ.
ರೇಷನ್ ಕಾರ್ಡ್ ಪಡೆಯುವುದು ಮಾತ್ರವಲ್ಲದೆ, ಕಾಲಕಾಲಕ್ಕೆ ತಕ್ಕ ಹಾಗೆ ಅದನ್ನು ಅಪ್ಡೇಟ್ ಮಾಡುವುದು ಕೂಡ ಮುಖ್ಯವಾಗಿರುತ್ತದೆ. ಅನೇಕ ಕಾರಣಗಳಿಂದ ರೇಷನ್ ಕಾರ್ಡ್ ಗಳಲ್ಲಿ ತಿದ್ದುಪಡಿ (Correction) ಮಾಡಿಸಬೇಕಾಗಿರುತ್ತದೆ ಆಹಾರ ಇಲಾಖೆಯು ಕೂಡ ಇದಕ್ಕೆ ಅವಕಾಶ ನೀಡುತ್ತದೆ.
ಕಳೆದೊಂದು ವರ್ಷದಿಂದ ಸಾಕಷ್ಟು ಬಾರಿ ಅವಕಾಶ ನೀಡಲಾಗಿದ್ದರೂ ಸಮರ್ಪಕವಾಗಿ ಕಾರ್ಯ ನಡೆದಿಲ್ಲ ಎನ್ನುವ ದೂರು ಜನಸಾಮಾನ್ಯರಿಂದ ಕೇಳಿ ಬಂದಿತ್ತು. ಹಾಗಾಗಿ ವರ್ಷಾಂತ್ಯದಲ್ಲೂ ಕೂಡ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ಅವಕಾಶ ನೀಡಿತ್ತು.
ಡಿಸೆಂಬರ್ 31 ಇದಕ್ಕೆ ಕಡೆ ದಿನಾಂಕವಾಗಿತ್ತು, ಈ ಕುರಿತು ಇನ್ನು ಮನವಿಗಳು ಹೆಚ್ಚಾದ್ದರಿಂದ ಸರ್ಕಾರವು ಹೊಸ ವರ್ಷದಲ್ಲೂ ಕೂಡ ಮತ್ತೊಮ್ಮೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟಿದೆ. ಫೆಬ್ರವರಿ 28, 2025 ರವರೆಗೆ ರೇಷನ್ ಕಾರ್ಡ್ ಗಳಲ್ಲಿ ಪ್ರಮುಖ ತಿದ್ದುಪಡಿ ಮಾಡಿಕೊಳ್ಳಲು ರಾಜ್ಯದ ಜನತೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಏನೆಲ್ಲಾ ತಿದ್ದುಪಡಿಗೆ ಅವಕಾಶವಿದೆ? ಯಾವೆಲ್ಲ ದಾಖಲೆಗಳಲ್ಲಿ ನೀಡಬೇಕು? ಎಲ್ಲಿ ತಿದ್ದುಪಡಿ ಮಾಡಿಸಬೇಕು? ಇತ್ಯಾದಿ ವಿವರಕ್ಕಾಗಿ ಅಂಕಣವನ್ನು ಕೊನೆಯವರೆಗೂ ಓದಿ.
ಯಾವುದಕ್ಕೆ ಅವಕಾಶ:-
- 1. ಮನೆ ಯಜಮಾನರ ಹೆಸರು ಬದಲಾವಣೆ,
- ಹೊಸ ಸದಸ್ಯರ ಹೆಸರು ಸೇರಿಸುವುದು
- ಆಧಾರ್ ಕಾರ್ಡ್ ನಲ್ಲಿ ಇರುವಂತೆ ಹೆಸರು ಸರಿಪಡಿಸಿ ಕೊಳ್ಳುವುದು
- ರೇಷನ್ ಕಾರ್ಡ್ ನಿಂದ ಹೆಸರು ತೆಗೆಸುವುದು
- ಮರಣ ಹೊಂದಿದ ಸದಸ್ಯರ ಹೆಸರು ತೆಗೆಸುವುದು
- ಫೋಟೊ ಚೇಂಜ್ ಮಾಡುವುದು
- ನ್ಯಾಯಬೆಲೆ ಅಂಗಡಿಯನ್ನು ಬದಲಾಯಿಸಿಕೊಳ್ಳುವುದು.
ಬೇಕಾಗುವ ದಾಖಲೆಗಳು:-
- ಸೇರ್ಪಡೆಯಾಗುವ ಹೊಸ ಸದಸ್ಯರ, ಹೆಸರಿನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಎಲ್ಲಾ ಸದಸ್ಯರ ಆಧಾರ್ ಕಾರ್ಡ್
- ಹಳೆಯ ರೇಷನ್ ಕಾರ್ಡ್
- ಯಾವುದಾದರೂ ಒಬ್ಬ ಸದಸ್ಯರ ಮೊಬೈಲ್ ಸಂಖ್ಯೆ
- ಆರು ವರ್ಷದ ಒಳಗಿನ ಮಕ್ಕಳಾಗಿದ್ದರೆ ಜನನ ಪ್ರಮಾಣ ಪತ್ರ
ತಿದ್ದುಪಡಿ ಮಾಡಿಸುವುದು ಹೇಗೆ:-
* ಹತ್ತಿರದಲ್ಲಿರುವ ಯಾವುದೇ ಗ್ರಾಮ ಒನ್ / ಕರ್ನಾಟಕ ಒನ್ / ಬೆಂಗಳೂರು ಒನ್ ಅಥವಾ CSC ಕೇಂದ್ರಗಳಿಗೆ ಹೋಗಿ ಮೇಲೆ ತಿಳಿಸಿದ , ಎಲ್ಲಾ ದಾಖಲೆಗಳ ಪ್ರತಿಗಳನ್ನು ನೀಡಿ ಆನ್ಲೈನ್ ನಲ್ಲಿಯೇ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಮತ್ತೊಂದು ಮುಖ್ಯವಾದ ವಿಚಾರವೇನೆಂದರೆ, ಈಗಾಗಲೇ ಸರ್ಕಾರವು ಅಕ್ರಮವಾಗಿ BPL ರೇಷನ್ ಕಾರ್ಡ್ ಹೊಂದಿರುವವರ ಅಂದರೆ ಸರ್ಕಾರಿ ನೌಕರರಾಗಿದ್ದರು ಹಾಗೂ ಆದಾಯ ತೆರಿಗೆ ಪಾವತಿದಾರರಾಗಿದ್ದರೂ BPL ರೇಷನ್ ಕಾರ್ಡ್ ಹೊಂದಿದ್ದರೆ ಅಂತಹ ಸದಸ್ಯರ ರೇಷನ್ ಕಾರ್ಡ್ ಗಳನ್ನು ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದೆ.
ಅಲ್ಲದೆ ಇದೇ ಸಂದರ್ಭದಲ್ಲಿ ನಿಮ್ಮ ರೇಷನ್ ಕಾರ್ಡ್ ಮಾಹಿತಿಗಳು ಸರಿಯಾಗಿರದೇ ಇದ್ದರೆ ನಿಮ್ಮ ಕಾರ್ಡ್ ಕೂಡ ತಡೆ ಹಿಡಿಯಲ್ಪಡಬಹುದು ಅಥವಾ ರದ್ದಾಗಬಹುದು. ಹಾಗಾಗಿ ಕೂಡಲೇ ನಿಮ್ಮ ರೇಷನ್ ಕಾರ್ಡ್ ಸಮಸ್ಯೆಯನ್ನು ಸರಿಪಡಿಸಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಹೆಚ್ಚಿನ ಜನರಿಗೆ ಶೇರ್ ಮಾಡಿ.