SBI Bank
ದುಡಿದ ಹಣವನ್ನು ಅಲ್ಪವಾದರೂ ಉಳಿಸುವುದು ನಾವು ಹಣಕ್ಕೆ ಕೊಡುವ ಗೌರವವಾಗಿದೆ. ನಾವು ಯಾವುದೇ ಶ್ರೀಮಂತ ವ್ಯಕ್ತಿಗೆ ಅಥವಾ ಆರ್ಥಿಕ ತಜ್ಞರಿಗೆ ಹಣಕಾಸಿನ ಬಗ್ಗೆ ಸಲಹೆ ಕೇಳಿದಾಗ ಅವರು ಕೊಡುವ ಮೊದಲ ಸಲಹೆಯೇ ದುಡಿದ ಹಣವನ್ನು ಮೊದಲಿಗೆ ಅಲ್ಪ ಭಾಗ ಉಳಿತಾಯ ಮಾಡಿ ನಂತರ ಉಳಿದ ಹಣವನ್ನು ಖರ್ಚು ಮಾಡಿ ಎಂದು.
ಹೇಗೆ ಹನಿ ಹನಿ ಸೇರಿ ಹಳ್ಳವಾಗುವುದೋ, ಹಾಗೆಯೇ ದುಡಿಯುವ ವಯಸ್ಸಿನಲ್ಲೇ ನನ್ನದಲ್ಲ ಎಂದು ತೆಗೆದಿಟ್ಟ ಸ್ವಲ್ಪ ಹಣವು ಮುಂದೊಂದು ದಿನ ದೊಡ್ಡ ಹಣಕಾಸಿನ ಜವಾಬ್ದಾರಿ ಹೊರೆ ಇಳಿಸಲು ಸಹಾಯವಾಗುವುದರಲ್ಲಿ ಅನುಮಾನವೇ ಇಲ್ಲ ಹೀಗಾಗಿ ನೀವು ಈಗ ದುಡಿಯಲು ಆರಂಭಿಸಿದ್ದರೆ ಅಥವಾ ಸಣ್ಣಪುಟ್ಟ ಪಾರ್ಟ್ ಟೈಮ್ ಕೆಲಸ ಮಾಡಿ ಹಣ ಕೂಡಿಡುತ್ತಿದ್ದರೆ ಅಥವಾ ಗೃಹಿಣಿಯರು ಮನೆ ಖರ್ಚಿನಲ್ಲಿ ಉಳಿತಾಯ ಮಾಡಿ ಅದನ್ನು ಲಕ್ಷ ಮಾಡಬೇಕು ಎಂದುಕೊಂಡಿದ್ದರೆ SBI ಬ್ಯಾಂಕ್ (SBI) ನಿಮ್ಮ ಕನಸುಗಳಿಗೆ ಕೈಜೋಡಿಸುತ್ತಿದೆ.
ಲಕ್ಷಾಧಿಪತಿ ಆಗುವ ಯೋಜನೆಗೆ ಪ್ರತಿಯೊಂದು ಮನೆಯಲ್ಲೂ ಲಕ್ಷಾಧಿಪತಿ ಎನ್ನುವ ಅರ್ಥವಿರುವ ಹರ್ ಘರ್ ಲಕ್ಪತಿ (Har Ghar Lakhpathi) ಎನ್ನುವ ಹೆಸರಿಟ್ಟು ಅನುಕೂಲತೆ ಮಾಡಿಕೊಟ್ಟಿದೆ. ಯೋಜನೆ ಕುರಿತ ಹೆಚ್ಚಿನ ಡೀಟೇಲ್ಸ್ ಹೇಗಿದೆ ನೋಡಿ.
* ಇದೊಂದು RD ಅಂದರೆ ಮರುಕಳಿಸುವ ಠೇವಣಿ (Recurring Deposit) ಯೋಜನೆ ಆಗಿದೆ. RD ಯೋಜನೆಯಲ್ಲಿ ನೀವು ಪ್ರತಿ ತಿಂಗಳು ಸ್ವಲ್ಪ ಮೊತ್ತದ ಹಣವನ್ನು ಕೂಡಿಡುತ್ತೀರಿ ಮತ್ತು ಅವಧಿ ಮುಗಿದ ಬಳಿಕ ಬಡ್ಡಿ ದರದೊಂದಿಗೆ ನಿಮಗೆ ದೊಡ್ಡ ಮೊತ್ತದಲ್ಲಿ ಹಣ ಸಿಗುತ್ತದೆ.
* ನೀವು 1 ಲಕ್ಷ, 2 ಲಕ್ಷ ಅಥವಾ 3 ಲಕ್ಷ ಈ ರೀತಿ ಗುರಿ ಇಟ್ಟುಕೊಳ್ಳಬಹುದು ಮತ್ತು ಅವಧಿಯನ್ನು ಕೂಡ 3-10 ವರ್ಷಗಳವರೆಗೆ ಆರಿಸಿಕೊಳ್ಳಬಹುದು. ಅದಕ್ಕೆ ತಕ್ಕನಾದ ಮೊತ್ತದ ಕಂತನ್ನು ಪ್ರತಿ ತಿಂಗಳು ಕಟ್ಟಬೇಕಾಗುತ್ತದೆ.
* ರೂ. 1 ಲಕ್ಷ ಸಂಗ್ರಹಿಸಲು, ಸಾಮಾನ್ಯ ಗ್ರಾಹಕರು 3 ವರ್ಷಗಳ ಕಾಲ ನಿರ್ಧರಿಸಿದರೆ ಪ್ರತಿ ತಿಂಗಳು ರೂ.2,500 ಠೇವಣಿ ಮೊತ್ತವನ್ನು 36 ತಿಂಗಳ ಕಾಲ ಕಟ್ಟಬೇಕಾಗುತ್ತದೆ 3 ವರ್ಷಗಳಲ್ಲಿ ಗ್ರಾಹಕನ ಉಳಿತಾಯವು ರೂ.90,000 ಆಗಿರುತ್ತದೆ. SBI ನಿಯಮದ ಪ್ರಕಾರವಾಗಿ ಬ್ಯಾಂಕ್ ವಾರ್ಷಿಕ 6.50 ಪ್ರತಿಶತದಷ್ಟು ಬಡ್ಡಿ ನೀಡುವುದರಿಂದ ರೂ.9,950 ಲಾಭದೊಂದಿಗೆ ನೀವು ಸಣ್ಣ ಮೊತ್ತದಲ್ಲಿ ಮೂರೇ ವರ್ಷಕ್ಕೆ ಮಿಲೇನಿಯರ್ ಆಗಿರುತ್ತೀರಿ.
* ಹಿರಿಯ ನಾಗರಿಕರು ಈ ಯೋಜನೆಯಲ್ಲಿ ಶೇ. 7.25% ಬಡ್ಡಿಯನ್ನು ಪಡೆಯುತ್ತಿರುವುದರಿಂದ ಹಿರಿಯ ನಾಗರಿಕರು ಈ ಮೇಲೆ ತಿಳಿಸಿದ ಪ್ಲಾನ್ ಗೆ ರೂ. 10,734 ರೂ.ಗಳನ್ನು ಬಡ್ಡಿ ಪಡೆಯುತ್ತಾರೆ.
* ಭಾರತೀಯ ನಾಗರಿಕರು ಯಾರು ಬೇಕಾದರೂ ಈ ಯೋಜನೆ ಖರೀದಿ ಮಾಡಬಹುದು.
* ಜಂಟಿಯಾಗಿ ಕೂಡ ಖಾತೆಯನ್ನು ತೆರೆಯಬಹುದು.
* ಪೋಷಕರು ತಮ್ಮ ಮಗುವಿನೊಂದಿಗೆ (10 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಸ್ಪಷ್ಟವಾಗಿ ಸಹಿ ಮಾಡುವ ಸಾಮರ್ಥ್ಯವಿರುವವರು) ಖಾತೆಯನ್ನು ತೆರೆಯಬಹುದು.
* RD ಯೋಜನೆಯಿಂದ ಗಳಿಸಿದ ಬಡ್ಡಿಯ ಮೇಲೆ 10% TDS ವಿಧಿಸಲಾಗುತ್ತದೆ. ಗ್ರಾಹಕನ ಬಡ್ಡಿ ಆದಾಯವು ರೂ.40,000 ಒಳಗಿದ್ದರೆ ಮತ್ತು ಹಿರಿಯ ನಾಗರಿಕರಾಗಿದ್ದರೆ ರೂ. 50,000 ಮಿತಿಯೊಳಗಿದ್ದರೆ ಈ ತೆರಿಗೆ ಅನ್ವಯವಾಗುವುದಿಲ್ಲ.
* SBI ಬ್ಯಾಂಕ್ ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಸರ್ಕಾರಿ ಸೌಮ್ಯದ ಬ್ಯಾಂಕ್ ಆಗಿರುವುದರಿಂದ ನಿಮ್ಮ ಹಣಕ್ಕೆ 100% ಗ್ಯಾರಂಟಿ ಇರುತ್ತದೆ, ಹೆಚ್ಚಿನ ಮಾಹಿತಿಗೆ ಹತ್ತಿರದಲ್ಲಿರುವ SBI ಬ್ಯಾಂಕ್ ಶಾಖೆಗೆ ಭೇಟಿ ನೀಡಿ.