Sewing Machine
ಗ್ರಾಮೀಣ ಭಾಗದ ಮಹಿಳೆಯರಿಗೆ ಸಾಮಾನ್ಯವಾಗಿ ಉದ್ಯೋಗಾವಕಾಶ ಕಡಿಮೆ ಇರುತ್ತದೆ ಹಾಗೂ ಸರಿಯಾದ ಬಸ್ ವ್ಯವಸ್ಥೆ ಇಲ್ಲದಿರುವುದು, ಸಮಯ ಹೊಂದಾಣಿಕೆ ಆಗದೆ ಇರುವುದು, ಕುಟುಂಬದಲ್ಲಿ ಹೊರ ಹೋಗಿ ದುಡಿಯಲು ಅನುಮೋದಿ ಸಿಗದೇ ಇರುವುದು ಮತ್ತಿತರ ಕಾರಣಗಳಿಂದ ಹಳ್ಳಿ ಭಾಗದಲ್ಲಿ ಹೆಣ್ಣು ಮಕ್ಕಳು ಆಚೆ ಹೋಗಿ ದುಡಿಯುವುದು ದಯ ಬಹಳ ಕಡಿಮೆ ಆದರೂ ಕೂಡ ಮಹಿಳೆಯರಿಗೂ ಆರ್ಥಿಕ ಸ್ವಾತಂತ್ರ್ಯವನ್ನು ಮತ್ತು ಸ್ವಾವಲಂಬಿ ಜೀವನ ನಡೆಸಬೇಕೆನ್ನುವ ಬಯಕೆ ಇರುತ್ತದೆ.
ಈ ಉದ್ದೇಶದಿಂದ ಇದನ್ನರಿತ ಸರ್ಕಾರವು ಗ್ರಾಮೀಣ ಭಾಗದ ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಕೈಗೊಂಡಿದೆ. ಇಂತಹ ಯೋಜನೆಗಳ ಪೈಕಿ ಗ್ರಾಮೀಣ ಕೈಗಾರಿಕೆ ಇಲಾಖೆ ವತಿಯಿಂದ ನೀಡಲಾಗುವ ಉಚಿತ ಹೊಲಿಗೆ ಯಂತ್ರ ವಿತರಣೆ (free Tailoring machine for womens) ಕೂಡ ಒಂದು ಪ್ರತಿ ವರ್ಷ ಇಲಾಖೆ ವತಿಯಿಂದ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ ವಿತರಣೆ ಮಾಡಲಾಗುತ್ತದೆ. ಅಂತೆಯೇ ಪ್ರಸಕ್ತ ಸಾಲಿನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಯಾರು ಅರ್ಹರು? ಏನೆಲ್ಲ ದಾಖಲೆ ನೀಡಬೇಕು? ಅರ್ಜಿ ಸಲ್ಲಿಸುವುದು ಹೇಗೆ? ಇತ್ಯಾದಿ ವಿವರ ಹೇಗಿದೆ ನೋಡಿ.
ಯೋಜನೆ ಹೆಸರು:- ಉಚಿತ ಹೋಲಿಕೆ ಯಂತ್ರ ವಿತರಣೆ ಕಾರ್ಯಕ್ರಮ(Sewing Machine)
ಉದ್ದೇಶ:- ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಸಬಲೀಕರಣ
ಅನುದಾನ ನೀಡುತ್ತಿರುವ ಸಂಸ್ಥೆ:- ಗ್ರಾಮೀಣ ಕೈಗಾರಿಕೆ ಇಲಾಖೆ
ಅರ್ಹತೆಗಳು:-
- ಅರ್ಜಿ ಸಲ್ಲಿಸುವ ಮಹಿಳೆಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು
- ಮಹಿಳೆಯ ವಯಸ್ಸು 18 ವರ್ಷ ಮೇಲ್ಪಟ್ಟು 65 ವರ್ಷದ ಒಳಗಿರಬೇಕು
- ಆದಾಯ ತೆರಿಗೆ ಪಾವತಿ ಮಾಡುವ ಅಥವಾ ಸರ್ಕಾರಿ ನೌಕರರ ಕುಟುಂಬದ ಮಹಿಳೆಯರು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ
- ಮಹಿಳೆಯರು ಹಿಂದುಳಿದ ವರ್ಗಕ್ಕೆ ಸೇರಿದವರಾಗಿರಬೇಕು
- ಕುಟುಂಬದ ವಾರ್ಷಿಕ ವರಮನವೂ ಹಳ್ಳಿಗಾಡಿನಲ್ಲಿ ರೂ. 98,000 ಹಾಗೂ ಪಟ್ಟಣ ಪ್ರದೇಶಗಳಲ್ಲಿ ರೂ. 1,20,000 ಮಿತಿಯ ಒಳಗಿರಬೇಕು
- ಮಹಿಳೆಯು ಈ ಹಿಂದೆ ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವುದೇ ಯೋಜನೆಯಿಂದ ಉಚಿತ ಹೊಲಿಗೆ ಯಂತ್ರ ಪಡೆದಿರಬಾರದು
- ಕುಟುಂಬದಲ್ಲಿ ಒಬ್ಬ ಮಹಿಳೆಗೆ ಮಾತ್ರ ಅವಕಾಶ ಅರ್ಜಿ ಸಲ್ಲಿಸಲು ಅವಕಾಶ
- ಮುಖ್ಯವಾಗಿ ಟೈಲರಿಂಗ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಮತ್ತು ತರಬೇತಿ ಪಡೆದಿರುವ ಮಹಿಳೆಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
ಅರ್ಜಿ ಸಲ್ಲಿಸುವ ವಿಧಾನ:-
* ಈ ಮೇಲೆ ತಿಳಿಸಿದ ಎಲ್ಲ ದಾಖಲೆ ಪ್ರತಿಗಳನ್ನು ಸಿದ್ಧಪಡಿಸಿಕೊಂಡು ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು
* ಸೇವಾ ಸಿಂಧು ಪೋರ್ಟಲ್ ಮೂಲಕ ಕೂಡ ಅರ್ಜಿ ಸಲ್ಲಿಸಲು ಅವಕಾಶ ಇದೆ
ಆಯ್ಕೆ ವಿಧಾನ:-
* ಪ್ರತಿ ವರ್ಷವೂ ಕೂಡ ಈ ಯೋಜನೆಗೆ ಅರ್ಜಿ ಆಹ್ವಾನಿಸಲಾಗುತ್ತಿದೆ ಹಾಗೂ ಈ ಬಾರಿ ಲಭ್ಯವಿರುವ ಅನುದಾನದ ಮೇಲೆ ಅಭ್ಯರ್ಥಿಗಳನ್ನು ಆರಿಸಲಾಗುತ್ತದೆ
ಹತ್ತಿರದಲ್ಲಿರುವ ಇಲಾಖೆಯ ಕಛೇರಿಗೆ ನೀಡಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು
ಅರ್ಜಿ ಸಲ್ಲಿಸುವುದಕ್ಕೆ ಬೇಕಾಗುವ ದಾಖಲೆಗಳು:-
- ಮಹಿಳೆಯ ಆಧಾರ್ ಕಾರ್ಡ್
- ಮಹಿಳೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಇತ್ತೀಚಿನ ಭಾವಚಿತ್ರ ಮತ್ತು ಸಹಿ
- ಮೊಬೈಲ್ ಸಂಖ್ಯೆ,
- ಮಹಿಳೆಯ ಜನನ ಪ್ರಮಾಣ ಪತ್ರ ಅಥವಾ ಜನ್ಮ ದಿನಾಂಕಕ್ಕೆ ಸಂಬಂಧಿಸಿದ ದಾಖಲೆ
- ಕುಟುಂಬದ ರೇಷನ್ ಕಾರ್ಡ್
- ಮಹಿಳೆಯ ಮತದಾರರ ಗುರುತಿನ ಚೀಟಿ
- ಟೈಲರಿಂಗ್ ತರಬೇತಿ ಪಡೆದಿರುವ ಬಗ್ಗೆ ಸರ್ಟಿಫಿಕೇಟ್
- ಇನ್ನಿತರ ಪ್ರಮುಖ ದಾಖಲೆಗಳು