Toyoto
ಈಗಿನ ಕಾಲದಲ್ಲಿ ವಿದ್ಯಾಭ್ಯಾಸ ಮುಗಿದ ತಕ್ಷಣ ಕೆಲಸ ಹುಡುಕುವುದೇ ಒಂದು ದೊಡ್ಡ ಸವಾಲಾಗಿದೆ. ಯಾಕೆಂದರೆ ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ನೆರೆ ಹೊರೆ, ಬಂಧು ಬಾಂಧವರಿಂದ ಇಂತಹದೊಂದು ಒತ್ತಡದ ವಾತಾವರಣ ಸೃಷ್ಟಿಯಾಗುತ್ತದೆ. ಅದೇ ರೀತಿ ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಂಡು ಬೆಳೆದ ನಮಗೆ ನಾವು ಕೂಡ ಆದಷ್ಟು ಬೇಗ ಕೆಲಸಕ್ಕೆ ಸೇರಬೇಕು ಎನ್ನುವ ಗುರಿ ಇರುತ್ತದೆ.
ಕಲಿತ ವಿದ್ಯಾಭ್ಯಾಸಕ್ಕೆ ತಕ್ಕಂತ ಹುದ್ದೆ ಹಿಡಿದು ವೃತ್ತಿಯಲ್ಲಿ ತೊಡಗಿ ಕೊಂಡಾಗ ಮಾತ್ರ ನಾವು ಪಡೆದ ವಿದ್ಯೆಯು ಸಾರ್ಥಕ ಇಂತಹದೊಂದು ನಿಖರವಾದ ಉದ್ದೇಶ ಮೊದಲೇ ನಿರ್ಧಾರವಾಗಿದ್ದರೆ ಅಂತಹ ವಿದ್ಯಾರ್ಥಿಗಳು ನೇರವಾಗಿ ಹತ್ತನೇ ತರಗತಿ ವಿದ್ಯಾಭ್ಯಾಸ ಮುಗಿಸಿದ ತಕ್ಷಣವೇ ವೃತ್ತಿಪರ ಕೋರ್ಸ್ ಗಳಿಗೆ (Job Oriented Course) ಸೇರುತ್ತಾರೆ.
ಇಂತಹ ವಿದ್ಯಾರ್ಥಿಗಳ ಪಾಲಿಗೆ ಡಿಪ್ಲೋಮಾ ಪದವಿ (Diploma Course) ಎನ್ನುವುದು ಒಂದು ವರದಾನವಾಗಿದೆ. ಮೂರು ವರ್ಷಗಳ ಈ ಕೋರ್ಸ್ ಮುಗಿಸುವುದರಿಂದ ಕೋರ್ಸ್ ಮುಗಿದ ತಕ್ಷಣವೇ ಕೆಲಸ ಸಿಗುತ್ತದೆ. ಅಂತೆಯೇ ನೀವು ಕೂಡ ಡಿಪ್ಲೋಮ ಪದವೀಧರರಾಗಿದ್ದರೆ ಈ ರೀತಿ ಹುದ್ದೆ ಕುರಿತು ಒಂದು ಬಿಗ್ ಅಪ್ಡೇಟ್ ಇದೆ. ಅದೇನೆಂದರೆ, ಪ್ರತಿಷ್ಠಿತ ಟೊಯೋಟಾ ಕಿರ್ಲೋಸ್ಕರ್ (Toyota Kiloskar) ಸಂಸ್ಥೆ ನಿಮ್ಮನ್ನ ಕೈ ಬೀಸಿ ಕರೆಯುತ್ತಿದೆ.
ಈ ವರ್ಷ ಡಿಪ್ಲೊಮಾ ಪದವಿ ಮುಗಿಸಿರುವ ಹಾಗೂ ಈಗಾಗಲೆ ಡಿಪ್ಲೋಮಾ ಪದವಿ ಮುಗಿಸಿ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳು ಕೂಡ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ದೇಶದಲ್ಲಿ ಟೊಯೋಟಾ ಕಿಲಾಸ್ಕಾರ್ ಸಂಸ್ಥೆಗೆ ಉತ್ತಮ ಹೆಸರಿದೆ ಅಲ್ಲದೆ ಈ ಹುದ್ದೆಗಳಿಗೆ ನೇಮಕಾತಿ ಹೊಂದುವ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಇದ್ದುಕೊಂಡು ಕಾರ್ಯ ನಿರ್ವಹಿಸುವಂತಹ ಅವಕಾಶ ಸಿಗುತ್ತಿದೆ.
ಅತ್ಯುತ್ತಮ ವೇತನ ಶ್ರೇಣಿಯ ಜೊತೆಗೆ ಹಲವಾರು ಸೌಕರ್ಯಗಳು ಈ ಅಭ್ಯರ್ಥಿಗಳ ಪಾಲಾಗಲಿದೆ ಹಾಗಾಗಿ ತಪ್ಪದೆ ಎಲ್ಲಾ ಡಿಪ್ಲೋಮಾ ಪದವೀಧರ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಇದಕ್ಕೆ ಸಂಬಂಧಿಸಿದಂತೆ ಹಂಚಿಕೊಂಡಿರುವ ಅಧಿಕೃತ ನೋಟಿಫಿಕೇಶನ್ ನಲ್ಲಿರುವ ಮಾಹಿತಿ ಹೇಗಿದೆ ನೋಡಿ.
ಯೂನಿವರ್ಸ್ ಟೆಕ್ನಾಲಜಿಸ್ ಕನ್ಸಲ್ಟೆಂಟ್ ಪ್ರೈವೇಟ್ ಲಿಮಿಟೆಡ್ (Universe Technology Consultant Private Ltd) ಕಂಪನಿ ಟೊಯೋಟಾ ಕಿಲೋಸ್ಕರ್ ನಲ್ಲಿ ಉದ್ಯೋಗ ಅವಕಾಶ ಕಲ್ಪಿಸುತ್ತಿದೆ. ಹೀಗಾಗಿ ಪ್ಲೇಸ್ಮೆಂಟ್ ಅಧಿಕಾರಿಗಳು ತಮ್ಮ ಕಾಲೇಜಿನಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳ ಮಾಹಿತಿಯನ್ನು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರು ನೀಡಬೇಕೆಂದು ಕೇಳಿಕೊಂಡಿದ್ದಾರೆ.
ಈ ಹುದ್ದೆಗಳ ವಿವರವನ್ನು ತಿಳಿಸಿ ಇದಕ್ಕೆ ಅರ್ಹರಾಗಿರುವ ವಿದ್ಯಾರ್ಥಿಗಳ ಹೆಸರು, ವಿಳಾಸ, ದೂರವಾಣಿ ಸಂಖ್ಯೆ , ಇಮೇಲ್ ಐಡಿ ಸೇರಿದಂತೆ ಇನ್ನಿತರ ಮಾಹಿತಿಯನ್ನು ಹಂಚಿಕೊಳ್ಳಬೇಕೆಂದು ಪಾಲಿಟೆಕ್ನಿಕ್ ಕಾಲೇಜುಗಳ ಪ್ರಾಂಶುಪಾಲರಿಗೆ ತಿಳಿಸಲಾಗಿದೆ. ಅಲ್ಲದೆ ವಿದ್ಯಾರ್ಥಿಗಳಿಗೂ ಕೂಡ ವೈಯಕ್ತಿಕವಾಗಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ ಯಾವ ವಿಭಾಗದಲ್ಲಿ ಹುದ್ದೆಗಳು ಖಾಲಿ ಇವೆ ಯಾವ ವಿಭಾಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸುವ ಅಥವಾ ಬಯೋಡೇಟಾ ಹಂಚಿಕೊಳ್ಳುವ ಇಮೇಲ್ ಇತ್ಯಾದಿ ವಿವರ ಕೆಳಕಂಡಂತಿದೆ.
- ಮೆಕಾನಿಕಲ್ ಇಂಜಿನಿಯರಿಂಗ್
- ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್
- ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಶನ್
- ಆಟೋಮೊಬೈಲ್
- ಮೆಕಟ್ರಾನಿಕ್ಸ್
- ಟೂಲ್ ಅಂಡ್ ಡೈ ಕೋರ್ಸ್ ಅಭ್ಯಾಸ ಮಾಡಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸಬಹುದು ಬೇಕಾದ ವಿಳಾಸ:-
* prakashsjp@gmail.com
* pavithra@uftech.com
* gayathri@uftech.com
ಈ ಕುರಿತ ಇನ್ನೂ ಹೆಚ್ಚಿನ ಮಾಹಿತಿಗಾಗಿ ಕಂಪನಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಮಾಹಿತಿ ಪಡೆಯಿರಿ.