TRAI: ಜಿಯೋ, ಏರ್ಟೆಲ್, BSNL, VI ಸಿಮ್ ಗ್ರಾಹಕರಿಗೆ ಗುಡ್ ನ್ಯೂಸ್ TRAI ನಿಂದ ಹೊಸ ನಿಯಮ ಜಾರಿ.!

TRAI

ಸಂಪರ್ಕ ಸಾಧನಗಳ ಬಳಕೆ ವಿಚಾರವಾಗಿ ಅದರಲ್ಲೂ ಮೊಬೈಲ್ ಬಳಕೆ ವಿಚಾರದಲ್ಲಿ ಕಳೆದೊಂದು ದಶಕದಲ್ಲಿ ಮಹತ್ವಪೂರ್ಣವಾದ ಬದಲಾವಣೆ ನಡೆದಿದೆ. ಪ್ರತಿಮನೆ ಮನೆಗಳಲ್ಲೂ ಮನೆಗೆ ಎಲ್ಲಾ ಸದಸ್ಯರಿಗೂ ಇಂದು ಮೊಬೈಲ್ ಫೋನ್ ಬೇಕೇ ಬೇಕು. ಕೆಲವರು ಒಂದಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಗಳನ್ನು ಕೂಡ ಬಳಸುವವರು ಇದ್ದಾರೆ, ಕೆಲವರು ಸಂಪರ್ಕ ಸಾಧನವಾಗಿ ಮಾತ್ರವಲ್ಲದೇ ಇಂಟರ್ನೆಟ್ ಸಹಾಯದಿಂದ ಆಂಡ್ರಾಯ್ಡ್ ಹಾಗೂ ಸ್ಮಾರ್ಟ್ ಫೋನ್ ಗಳಿಂದ ಇನ್ನಷ್ಟು ಸವಲತ್ತುಗಳನ್ನು ಪಡೆಯುತ್ತಿದ್ದಾರೆ.

WhatsApp Group Join Now
Telegram Group Join Now

ಇದೇ ಸಮಯದಲ್ಲಿ ಕೈಯಲ್ಲಿ ಮೊಬೈಲ್ ಫೋನ್ ಇದ್ದರೂ ಕೂಡ ಅದನ್ನು ಕೇವಲ ಕರೆಗಳಿಗಷ್ಟೇ ಸೀಮಿತವಾಗಿ ಇಟ್ಟುಕೊಂಡಿರುವ ಅಥವಾ ಸಿಮ್ ಗಳನ್ನು ಅಷ್ಟೇ ಮಾತ್ರ ಆಕ್ಟಿವೇಟ್ ಆಗಿ ಇಟ್ಟುಕೊಳ್ಳುವ ವರ್ಗವು ಸೇರಿದೆ ಇವರಿಗೆಲ್ಲ ಎದುರಾಗಿರುವ ಒಂದು ಸಮಸ್ಯೆ ಏನೆಂದರೆ ಟೆಲಿಕಾಂ ಕಂಪನಿಗಳು ಟ್ಯಾರಿಫ್ ಬೆಲೆಯನ್ನು (Tarriff) ಏರಿಸುತ್ತಿರುವುದು.

ಇತ್ತೀಚೆಗೆ 2024ರ ಜುಲೈನಲ್ಲಿ ಮೂರು ಖಾಸಗಿ ಟೆಲಿಕಾಂ(TRAI) ಕಂಪನಿಗಳು ತಮ್ಮ ಟ್ಯಾರಿಫ್ ಬೆಲೆಯನ್ನು ಏರಿಕೆ ಮಾಡಿತ್ತು ಬಳಿಕ ಆ ಮತ್ತು ಗ್ರಾಹಕರಿಗೆ ಹೆಚ್ಚಿನ ಹೊರೆಯಾಗಿದೆ ಎನ್ನುವ ವಿರೋಧವೂ ಕೇಳಿ ಬಂದಿತ್ತು. ಹಾಗಾಗಿ ಅವುಗಳಿಂದ ಬೇಸತ್ತ ಗ್ರಾಹಕರಿಂದ ಪೋರ್ಟ್ ಟೂ ಬಿಎಸ್ಎನ್ಎಲ್ (Port to BSNL) ಎನ್ನುವ ಅಭಿಯಾನ ಕೂಡ ನಡೆಯಿತು.

ಆದರೆ ಪರಿಣಾಮಕಾರಿಯಾಗಿ ಈ ಕ್ರಾಂತಿ ಎಲ್ಲಡೆ ಮುಟ್ಟಲಾಗಲಿಲ್ಲ ಕಾರಣ ಸರ್ಕಾರಿ ಸ್ವಾಮ್ಯದ BSNL ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ನೀಡುತ್ತಿದ್ದರೂ, ಗ್ರಾಹಕರಿಗೆ ನೆಟ್‌ವರ್ಕ್ ಸಮಸ್ಯೆ ಎದುರಿಸಬೇಕಾಗಿದೆ. ಹೀಗಾಗಿ ಟೆಲಿಕಾಂ ರೆಗ್ಯುಲೇಟರಿ ಆಫ್ ಇಂಡಿಯಾ (TRAI) ಮಹತ್ವದ ಹೆಜ್ಜೆಯನ್ನು ನಿರ್ಧಾರಕ್ಕೆ ಬಂದಿದೆ. ದುಬಾರಿ ರೀಚಾರ್ಜ್‌ನಿಂದ ಎಲ್ಲಾ ರೀತಿಯ ಸೇವೆಗಳನ್ನು ಪಡೆಯಲು ಸಾಧ್ಯವಾಗದ ಗ್ರಾಹಕರ ಸಲುವಾಗಿ TRAI-2025 ನಿಯಮಗಳನ್ನು ರೂಪಿಸಿದೆ.

ಆ ಪ್ರಕಾರ, ಕೇವಲ  ರೂ. 10 ರೀಚಾರ್ಜ್‌ನೊಂದಿಗೆ ಗ್ರಾಹಕರು ಮೊಬೈಲ್‌ ಸೇವೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಈ ಮೂಲಕ ಕಡಿಮೆ ವೆಚ್ಚದಲ್ಲಿ ಹೆಚ್ಚು ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು TRAI ಹೊಂದಿದೆ.

TRAI ಹೊಸ ನಿಯಮದ ಪ್ರಯೋಜನಗಳು:-

* ಈಗಿನ ಕಾಲದಲ್ಲಿ ಕೆಲವೊಂದು ಸಂದರ್ಭಗಳಲ್ಲಿ ಗ್ರಾಹಕರು ಒಂದಕ್ಕಿಂತ ಹೆಚ್ಚು ಸಿಮ್ ಗಳನ್ನು ಬಳಕೆ ಮಾಡುತ್ತಿರುತ್ತಾರೆ ಹಾಗೂ ಎಲ್ಲಾ ಸಿಮ್ ಗಳಿಗೂ ರಿಚಾರ್ಜ್ ಮಾಡಿಸುವ ಅಗತ್ಯ ಇರುವುದಿಲ್ಲ. ಹೀಗಾಗಿ ಸಿಮ್ ಆಕ್ಟಿವೇಟ್ ನಲ್ಲಿ ಉಳಿಸಿಕೊಳ್ಳುವ ಉದ್ದೇಶ ಹೊಂದಿರುವ ಗ್ರಾಹಕರಿಗೆ ಹೊರೆಯಾಗದಂತೆ ಈ ಹೊಸ ನಿಯಮ ಅನುಕೂಲ ಮಾಡಿಕೊಡುತ್ತದೆ. ಗ್ರಾಹಕರು ಸಿಮ್ ಅಕ್ಟಿವ್ ಆಗಿರಿಸಿಕೊಳ್ಳಲು ಇನ್ಮುಂದೆ ದೊಡ್ಡ ಮೊತ್ತದ ರೀಚಾರ್ಜ್ ಮಾಡಿಕೊಳ್ಳುವ ಅಗತ್ಯವಿಲ್ಲ. ಕೈಗೆಟುಕುವ ದರದಲ್ಲಿ ಅಂದ್ರೆ ಕನಿಷ್ಠ ರೂ. 10 ರೀಚಾರ್ಜ್‌ನೊಂದಿಗೆ ಡಿಜಿಟಲ್ ಸೇವೆಗಳನ್ನು ಪಡೆದುಕೊಳ್ಳಬಹುದು‌

* ಗ್ರಾಹಕರಿಗೆ ತಮ್ಮ ಆರ್ಥಿಕ ಮತ್ತು ಅಗತ್ಯಕ್ಕೆ ಅನುಗುಣವಾಗಿ ಕಡಿಮೆ ಬೆಲೆಯಲ್ಲಿ ರೀಚಾರ್ಜ್ ಮಾಡಿಕೊಳ್ಳುವ ಆಯ್ಕೆ TRAI ನ ಹೊಸ ನಿಯಮದಿಂದ ಸಾಧ್ಯವಾಗುತ್ತಿದೆ. ಇದರಿಂದ ಗ್ರಾಹಕನ ಹೊರೆ ಕಡಿಮೆ ಆಗುತ್ತಿದೆ.

* ಟೆಲಿಕಾಂ ಕಂಪನಿ ನೀಡುವ ವಿಶೇಷವಾದ ವಿಭಿನ್ನ ರಿಚಾರ್ಜ್ ಪ್ಲಾನ್ ಗಳಿಂದ ಅನುಕೂಲತೆ ಇರುವುದು ನಿಜ ಆದರೆ ಅದರ ಅಗತ್ಯ ಇಲ್ಲದಿದ್ದವರಿಗೆ ಅದು ಖಂಡಿತವಾಗಿಯೂ ಹೋರೆ ಆಗುತ್ತದೆ. ಡಿಜಿಟಲ್ ಸೇವೆಗಳನ್ನು ಪಡೆಯಲು ಹಿಂದೇಟು ಹಾಕುವ ಗ್ರಾಮೀಣ ಬಳಕೆದಾರರಿಗೆ ಈ ನಿಯಮ ಅನುಕೂಲವಾಗಲಿದೆ. ಹೀಗಾಗಿ ಈ ಉಪಯುಕ್ತ ಮಾಹಿತಿಯನ್ನು ಹೆಚ್ಚಿನ ಜನರಿಗೆ ಶೇರ್ ಮಾಡಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment