UPI Payments:- ಫೆಬ್ರವರಿ 1 ರಿಂದ UPI ಪೇಮೆಂಟ್‌ನಲ್ಲಿ ಮಹತ್ವದ ಬದಲಾವಣೆ.!

UPI Payments

ಈಗಿನ ಡಿಜಿಟಲ್‌ ಇಂಡಿಯಾ (Digital India) ಕಾಲದಲ್ಲಿ ನೀವು ಈಗ ಎಟಿಎಂ (ATM) ನಿಂದ ಹಣ (Money) ತೆಗೆಯುವುದು ಅಪರೂಪವಾಗಿರಬಹುದು. ಭಾರತದಲ್ಲಿ ಡಿಜಿಟಲ್ ಕ್ರಾಂತಿ (Digital revolution)ಯುಂಟಾಗಿದ್ದು, ಸಣ್ಣ ಸಣ್ಣ ಹಣಕಾಸಿನ ವಹಿವಾಟು (Financial transactions)ಗಳು ಸಹ ಆನ್‌ಲೈನ್ ಮೂಲಕವೇ (Online Transaction) ನಡೆಯುತ್ತವೆ.

WhatsApp Group Join Now
Telegram Group Join Now

ಹಾಲು-ಮೊಸರು, ತರಕಾರಿ ಅಂತ ಚಿಲ್ಲರೆ ಹಣ ಪಾವತಿಸುವಾಗ ಜನರು ಮೊಬೈಲ್ (Mobile) ತೆಗೆದು ಸ್ಕ್ಯಾನ್‌ (Scan) ಮಾಡಿ ಪೇಮೆಂಟ್ ಮಾಡುತ್ತಾರೆ. ಇನ್ನು ಆನ್‌ಲೈನ್ ಶಾಪಿಂಗ್, ಒಬ್ಬರಿಂದ ಮತ್ತೊಬ್ಬರಿಗೆ ಹಣ ವರ್ಗಾವಣೆಯೂ ಡಿಜಿಟಲ್ ಪೇಮೆಂಟ್ (Digital Payment) ಮೂಲಕ ನಡೆಯುತ್ತದೆ. ಯುಪಿಐ ಆಪ್ (Unified Payments Interface) ಮೂಲಕ ತುಂಬಾ ಸರಳವಾಗಿ ಹಣಕಾಸಿನ ವ್ಯವಹಾರಗಳನ್ನು ನಡೆಸಲಾಗುತ್ತದೆ.

ಇಲ್ಲಿ ಪ್ರತಿಯೊಂದು ವ್ಯವಹಾರದ ಐಡಿ ಬೇರೆ ಬೇರೆಯೇ ಆಗಿರುತ್ತದೆ. ನೀವು ಮಾಡುವ ಪ್ರತಿಯೊಂದು ಯುಪಿಐ ಹಣ ವರ್ಗಾವಣೆಯಲ್ಲಿಯೂ ಒಂದು ವಹಿವಾಟು ಐಡಿ ದೊರಕುತ್ತದೆ. ಈ ಐಡಿಯು ಕೆಲವೊಮ್ಮೆ ಅಂಕೆಗಳನ್ನು, ಅಕ್ಷರಗಳನ್ನು ಹೊಂದಿರುತ್ತದೆ. ಕೆಲವೊಮ್ಮೆ ವಿಶೇಷ ಅಕ್ಷರಗಳನ್ನು (ಸ್ಪೆಷಲ್‌ ಕ್ಯಾರೆಕ್ಟರ್‌) ಹೊಂದಿರುತ್ತವೆ.

UPI ಪೇಮೆಂಟ್ ಬಳಕೆದಾರರ ಸಂಖ್ಯೆ ಏರಿಕೆ

ಫೆಬ್ರವರಿ 1ರಿಂದ ಯಾವುದೇ ವಿಶೇಷ ಅಕ್ಷರ/ಚಿಹ್ನೆಗಳನ್ನು ಹೊಂದಿರುವ ಯುಪಿಐ ವಹಿವಾಟು ಸ್ವೀಕರಿಸಲಾಗುವುದಿಲ್ಲ ಎಂದು NPCI (National Payments Corporation of India ) ಮಾಹಿತಿಯನ್ನು ನೀಡಿದೆ. ಈ ಸಂಬಂಧ ಜನವರಿ 9ರಂದು ಸುತ್ತೋಲೆಯನ್ನು ಸಹ ಹೊರಡಿಸಲಾಗಿದೆ.

ಈ ಸುತ್ತೋಲೆ ಪ್ರಕಾರ, ಯುಪಿಐ ವಹಿವಾಟು ಐಡಿಯನ್ನು ಕ್ರಿಯೇಟ್ ಮಾಡುವಾಗ ಕೇವಲ ಅಕ್ಷರ ಮತ್ತು ಸಂಖ್ಯೆಗಳನ್ನು ಮಾತ್ರ ಬಳಸಬೇಕು ಎಂದು ಸೂಚನೆ ನೀಡಲಾಗಿದೆ. ವಿಶೇಷ ಚಿಹ್ನೆ (Special Character) ಐಡಿಯನ್ನು ಯುಪಿಐ ಸ್ವೀಕರಿಸುವುದಿಲ್ಲ. ಐಡಿಯಲ್ಲಿ @, $, #. ^ ,%, * ಸೇರಿದಂತೆ ಇಂತಹ ಯಾವುದೇ ಚಿಹ್ನೆಗಳನ್ನು ಬಳಸಬಾರದು ಎಂದು ಎನ್‌ಪಿಸಿಐ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

ಜನವರಿ 9ರ ಸುತ್ತೋಲೆಯಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ. ಯುಪಿಐ ಐಡಿಗಳಲ್ಲಿ ಆಲ್ಫಾನ್ಯೂಮರಿಕ್ ಅಕ್ಷರಗಳನ್ನು ಮಾತ್ರ ಬಳಸುವಂತೆ ಸೂಚಿಸಲಾಗಿದೆ. ಇದು ಯುಪಿಐ ಹಣ ವರ್ಗಾವಣೆಗೆ ಸಂಬಂಧಪಟ್ಟ ತಾಂತ್ರಿಕ ವಿಭಾಗದವರು ಮಾಡಬೇಕಾಗಿರುವ ಕೆಲಸ. ಬಳಕೆದಾರರಿಗೆ ಇದರಲ್ಲಿ ಯಾವುದೇ ಕೆಲಸ ಇರುವುದಿಲ್ಲ.

ಹೀಗಿದ್ದರೂ ನೀವು ಬಳಸುವ ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಇನ್ನೂ ಇದು ಕಾರ್ಯರೂಪಕ್ಕೆ ಬಾರದೆ ಇದ್ದರೆ ನಿರ್ದಿಷ್ಟ ಖಾತೆಯಿಂದ ಯುಪಿಐ ಮೂಲಕ ಹಣ ವರ್ಗಾವಣೆ ಮಾಡಲು ಸಾಧ್ಯವಾಗದು. ವಿಶೇಷ ಅಕ್ಷರಗಳ ಐಡಿ ಹೊಂದಿರುವ ಯಾವುದೇ ವಹಿವಾಟನ್ನು ಕೇಂದ್ರ ವ್ಯವಸ್ಥೆಯು ನಿರಾಕರಿಸುತ್ತದೆ. ಭಾಗವಹಿಸುವ ಎಲ್ಲಾ ಯುಪಿಐ ಪ್ಲಾಟ್‌ಫಾರ್ಮ್‌ಗಳು ಇದನ್ನು ಗಮನಿಸಬೇಕು ಎಂದು ಸೂಚಿಸಲಾಗಿದೆ.

ಈಗಾಗಲೇ ಹಲವರು ಈ ನಿಯಮವನ್ನು ಪಾಲನೆ ಮಾಡುತ್ತಿದ್ದಾರೆ. ಆದ್ರೆ, ಫೆಬ್ರವರಿ 1ರಿಂದ ಸ್ಪೆಷಲ್ ಕ್ಯಾರೆಕ್ಟರ್ ಹೊಂದಿರುವ ಐಡಿಯ ವಹಿವಾಟುಗಳನ್ನು ಯುಪಿಐ ನಿಂದ ಸ್ವೀಕರಿಸಲಾಗುವುದು ಎಂದು ಎನ್‌ಪಿಸಿಐ ಹೇಳಿದೆ. ಕಳೆದ ಕೆಲವು ವರ್ಷಗಳಿಂದ ಯುಪಿಐ ಪೇಮೆಂಟ್ ಬಳಕೆದಾರರ ಸಂಖ್ಯೆ ಏರಿಕೆಯಾಗುತ್ತಲಿದೆ. 2016ರ ನೋಟ್ ಬ್ಯಾನ್ ಬಳಿಕ ಯುಪಿಐ ಪೇಮೆಂಟ್ ಮುನ್ನಲೆಗೆ ಬಂತು. ನಂತರ ಕೋವಿಡ್ ಕಾಲಘಟ್ಟದ ನಂತರ ಯುಪಿಐ ಬಳಕೆ ಅಧಿಕವಾಯ್ತು.

ಡಿಸೆಂಬರ್ 2024ರ ಅಂಕಿ ಅಂಶಗಳ ಪ್ರಕಾರ, ಯುಪಿಐ ಸ್ವೀಕರಿಸುವ ಮತ್ತು ಪಾವತಿಸುವ ವಹಿವಾಟುಗಳ ಸಂಖ್ಯೆ 16.73 ಬಿಲಿಯನ್ ವರೆಗೆ ತಲುಪಿದೆ. 2024ರ ನವೆಂಬರ್‌ನಲ್ಲಿ ಯುಪಿಐ ವಹಿವಾಟುಗಳ ಸಂಖ್ಯೆ 15.48 ಬಿಲಿಯನ್ ಆಗಿತ್ತು. ಕೇವಲ ಒಂದು ತಿಂಗಳಲ್ಲಿ ಯುಪಿಐ ವಹಿವಾಟು ಶೇ.8ರಷ್ಟು ಬೆಳವಣಿಗೆ ಕಂಡು ಬಂದಿತ್ತು. ಡಿಸೆಂಬರ್‌ನಲ್ಲಿ 23.25 ಲಕ್ಷ ಕೋಟಿ ರೂಪಾಯಿ ಮತ್ತು ನವೆಂಬರ್‌ನಲ್ಲಿ 21.55 ಲಕ್ಷ ಕೋಟಿ ರೂಪಾಯಿ ಮೊತ್ತದ ವಹಿವಾಟು ನಡೆದಿದೆ.

ಜಂಪಡ್ ಡೆಪಾಸಿಟ್ ಸ್ಕ್ಯಾಮ್

ಈ ನಡುವೆ ಜಂಪಡ್ ಡೆಪಾಸಿಟ್ ಸ್ಕ್ಯಾಮ್ ನಡೆಯುತ್ತಿರುವ ಬಗ್ಗೆ ವರದಿಗಳು ಪ್ರಕಟವಾಗಿವೆ. ನಿಮಗೆ ಯಾವುದೋ ದುಡ್ಡು ಕ್ರೆಡಿಟ್​ ಆಗಿರುವ ಮೆಸೇಜ್​ ಬಂದರೆ, ಕೂಡಲೇ ಬ್ಯಾಂಕ್​ ಬ್ಯಾಲೆನ್ಸ್​ ಚೆಕ್​ ಮಾಡಲು ಹೋಗಬೇಡಿ ಎಂದು ಸಲಹೆ ನೀಡಲಾಗಿದೆ. ನಿಮ್ಮ ಸಂಖ್ಯೆಗೆ ತಪ್ಪಾಗಿ ಹಣ ಹಾಕಿದ್ದೇವೆ. ದಯವಿಟ್ಟು ಹಿಂದಿರುಗಿಸಿ ಎಂಬ ಮೆಸೇಜ್ ಬಂದ್ರೆ ಆ ಕೂಡಲೇ ಪ್ರತಿಕ್ರಿಯೆ ನೀಡಬಾರದು.

ಒಂದು ವೇಳೆ ನೀವು ಪ್ರತಿಕ್ರಿಯೆ ನೀಡಲು ಆರಂಭಿಸಿದ್ರೆ, ಮಾತಿನಲ್ಲೇ ನಿಮ್ಮನ್ನು ಮರಳು ಮಾಡಿ, ನಿಮ್ಮಿಂದ ಒಟಿಪಿ ಪಡೆದುಕೊಂಡು ಹಣ ತೆಗೆದುಕೊಳ್ಳುತ್ತಾರೆ. ಇದನ್ನು ಜಂಪಡ್ ಡೆಪಾಸಿಟ್ ಸ್ಕ್ಯಾಮ್ ಎಂದು ಕರೆಯಲಾಗುತ್ತದೆ. ಜಂಪಡ್ ಡೆಪಾಸಿಟ್ ಸ್ಕ್ಯಾಮ್ ಅಂದರೆ ಏನು? ಜನರನ್ನು ಹೇಗೆ ಮೋಸಗೊಳಿಸಲಾಗುತ್ತೆ ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಇನ್ಮುಂದೆ 1,500 ರೂ. ಉಳಿಸಬಹುದು!

ಸಣ್ಣ ವ್ಯಾಪಾರಸ್ಥರು ಈವರೆಗೆ ಪ್ರತಿ ತಿಂಗಳು ಸೌಂಡ್ ಬಾಕ್ಸ್‌ಗಾಗಿ 125 ರೂಪಾಯಿ ವೆಚ್ಚ ಮಾಡುತ್ತಿದ್ದರು. ಜಿಯೋ ಸೌಂಡ್ ಪೇ (JioSoundPay) ಪ್ರಾರಂಭವು ಈ ಖರ್ಚಿಗೆ ಅಂತ್ಯವಾಡಿದೆ. ಇನ್ಮುಂದೆ ಜಿಯೋ ಭಾರತ್ (Jio Bharat) ಫೋನ್ ಬಳಕೆದಾರರು ಪ್ರತಿ ವರ್ಷ 1,500 ರೂ. ಉಳಿಸಲು ಸಾಧ್ಯವಾಗುತ್ತದೆ.

ಈ ಫೀಚರ್ ವ್ಯಾಪಾರಿಗಳಿಗೆ ಸುಲಭ ಮತ್ತು ಕೈಗೆಟುಕುವ ಸೇವೆ ಒದಗಿಸುತ್ತದೆ. ಜಿಯೋನ ಈ ಸೇವೆ ಸಣ್ಣ ಅಂಗಡಿ ಮಾಲೀಕರು, ತರಕಾರಿ ಮಾರಾಟಗಾರರು ಮತ್ತು ಸಣ್ಣ ವ್ಯಾಪಾರಗಳಿಗೆ ನೇರವಾಗಿ ಲಾಭವನ್ನು ನೀಡುತ್ತದೆ. ಏಕೆಂದರೆ ವ್ಯಾಪಾರಿಗಳು ಪಾವತಿಯನ್ನು ಸ್ವೀಕರಿಸಿದ ಬಳಿಕ ಕೂಡಲೇ ಆಡಿಯೋ ದೃಢೀಕರಣ ಪಡೆಯಬಹುದಾಗಿದೆ.

UPI ಬಳಕೆ ಅತಿ ಹೆಚ್ಚು

ವಾಟ್ಸಾಪ್ನ ಇಂಟರ್ಫೇಸ್ ಈಗಾಗಲೇ ಬಳಕೆದಾರರಿಗೆ ಸುಲಭ ಸಾಧನವಾಗಿದೆ. ಜನರು ಈಗ ಯಾವುದೇ ತೊಂದರೆಯಿಲ್ಲದೆ ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರ ಮಾಡಬಹುದು. ವಾಟ್ಸಾಪ್ನ ಎಲ್ಲಾ ಬಳಕೆದಾರರು ಸುಲಭವಾಗಿ UPI ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ. ಇದು ಡಿಜಿಟಲ್ ಪಾವತಿಗಳನ್ನು ಇನ್ನಷ್ಟು ಸುಲಭಗೊಳಿಸುತ್ತದೆ. ಏಕೆಂದರೆ ಇದು UPI ಬಳಕೆಯನ್ನು ಹೆಚ್ಚಿಸುತ್ತದೆ ಮತ್ತು ಭಾರತದಲ್ಲಿ ಡಿಜಿಟಲ್ ವಹಿವಾಟುಗಳ ಸಂಖ್ಯೆಯನ್ನು ಮತ್ತಷ್ಟು ವೇಗವಾಗಿ ಹೆಚ್ಚಾಗುತ್ತದೆ.

ಇನ್ನು ಈ ಸರ್ವೆಯಲ್ಲಿ ಕೇವಲ 23ರಷ್ಟು ಯುಪಿಐ ಬಳಕೆದಾರರು ಮಾತ್ರ ತಾವು ಶುಲ್ಕ ಪಾವತಿ ಮಾಡಿ ಯುಪಿಐ ವಹಿವಾಟು ನಡೆಸಲು ಸಿದ್ದ ಎಂದು ಹೇಳಿಕೊಂಡಿದ್ದಾರೆ. ಆದರೆ, ಶೇ. 73ರಷ್ಟು ಬಳಕೆದಾರರು ಯುಪಿಐ ಬಳಕೆ ಮೇಲೆ ಶುಲ್ಕ ವಿಧಿಸಿದರೆ ತಾವು ಬಳಕೆಯನ್ನೇ ನಿಲ್ಲಿಸೋದಾಗಿ ಹೇಳಿದ್ದಾರೆ.

ಇನ್ನು ಬಹುತೇಕರು ಪ್ರತಿ ತಿಂಗಳು ಕನಿಷ್ಟ 10 ಬಾರಿಯಾದರೂ ಯುಪಿಐ ಬಳಕೆ ಮಾಡೋದಾಗಿ ಹೇಳಿದ್ದಾರೆ. ಈ ಸಂಖ್ಯೆ ವ್ಯಕ್ತಿಯಿಂದ ವ್ಯಕ್ತಿಗೆ ಹಾಗೂ ಪ್ರದೇಶದಿಂದ ಪ್ರದೇಶಕ್ಕೆ ಬದಲಾವಣೆ ಆಗುತ್ತದೆ. ಈ ನಡುವೆ, ಕಳೆದ 12 ತಿಂಗಳಲ್ಲಿ ತಮ್ಮ ಖಾತೆಯಲ್ಲಿ ಎರಡಕ್ಕೂ ಹೆಚ್ಚು ಬಾರಿ ಯುಪಿಐ ಪಾವತಿ ಮೇಲಿನ ಶುಲ್ಕ ಕಡಿತ ಆಗಿದೆ. ಇದು ನಮ್ಮ ಅನುಭವಕ್ಕೆ ಬಂದಿದೆ ಎಂದು ಶೇ. 37ರಷ್ಟು ಬಳಕೆದಾರರು ಹೇಳಿದ್ದಾರೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment