Wipro: ವಿಪ್ರೋದಿಂದ ಬರೋಬ್ಬರಿ 10,000 ಹುದ್ದೆಗಳ ನೇಮಕಾತಿ ವೇತನ 50,000/- ಆಸಕ್ತರು ಅರ್ಜಿ ಸಲ್ಲಿಸಿ.!

Wipro

ಭಾರತೀಯ ಮಾಹಿತಿ ತಂತ್ರಜ್ಞಾನ (IT) ಕ್ಷೇತ್ರದಲ್ಲಿ ಹೆಸರುವಾಸಿ ಆಗಿರುವ ವಿಪ್ರೋ ಹಾಗೂ ಇನ್ಫೋಸಿಸ್ ಸಂಸ್ಥೆಗಳು (Wipro and Infosys) ಉದ್ಯೋಗ ಸೃಷ್ಟಿಯಲ್ಲಿ ಹೊಸ ಪರ್ವವನ್ನೇ ಆರಂಭಿಸಿದೆ. ಈ ಮೂಲಕ ಅನೇಕ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಿರುವುದು ಮಾತ್ರವಲ್ಲದೇ ದೇಶದ ಆರ್ಥಿಕ ಅಭಿವೃದ್ಧಿಯಲ್ಲೂ ಬಹು ಮುಖ್ಯಪಾತ್ರ ನಿರ್ವಹಿಸುತ್ತಿದೆ.

WhatsApp Group Join Now
Telegram Group Join Now

ಪ್ರತಿವರ್ಷವೂ ಕೂಡ ಸಾವಿರಾರು ಸಂಖ್ಯೆಯಲ್ಲಿ ಫ್ರೆಷರ್ಸ್ ನೇಮಕಾತಿ ಮಾಡಿಕೊಳ್ಳುವ ಈ ಸಂಸ್ಥೆಗಳು ಮುಂದಿನ ವರ್ಷದಲ್ಲಿ ಇದನ್ನು ಇನ್ನಷ್ಟು ವಿಸ್ತರಿಸುವ ಈ ಮೂಲಕ ಇನ್ನಷ್ಟು ಉದ್ಯೋಗ ಸೃಷ್ಟಿ ಮಾಡುವ ಭರವಸೆಯ ಮಾತುಗಳನ್ನಾಡಿವೆ. ಸದ್ಯಕ್ಕೆ ಪ್ರಸ್ತುತವಾಗಿ ಸ್ವತಃ ವಿಪ್ರೋ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯ ಅಧಿಕಾರಿ ಸೌರಭ್ ಗೋವಿಲ್ ರವರು (CHRO Sourabh Govil) ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅದರ ವಿವರ ಇಂತಿದೆ ನೋಡಿ.

ಪ್ರತಿ ವರ್ಷವೂ ಕೂಡ ವಿಪ್ರೋ ಸಂಸ್ಥೆಯು ಕ್ಯಾಂಪಸ್ ಸೆಲೆಕ್ಷನ್ ಮೂಲಕ ದೇಶದ ಪ್ರತಿಭಾವಂತ ವಿದ್ಯಾರ್ಥಿಗಳ ಆಯ್ಕೆ ಮಾಡಿಕೊಂಡು ಅವರ ವೃತ್ತಿ ಜೀವನಕ್ಕೆ ಬೆಂಬಲ ನೀಡುತ್ತದೆ ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳ ಆಯ್ಕೆ ಮಾಡಿಕೊಳ್ಳುವುದರಿಂದ ಮತ್ತು ಅಂತಹ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಮೊತ್ತದ ವೇತನದ ಜೊತೆಗೆ ತರಬೇತಿ ನೀಡಿ ಸನ್ನದ್ದುಗೊಳಿಸುವುದರಿಂದ ವಿದ್ಯಾರ್ಥಿಯ ಭವಿಷ್ಯಕ್ಕೆ ಹಾಗೂ ಕಂಪನಿಯ ಏಳಿಗೆಗೂ ಸಹಾಯಕಾರಿ ಎನ್ನುವುದು ಕಂಪನಿಯ ವಿಶ್ವಾಸ ಎಂದು ಕಂಪನಿ ಹೇಳಿಕೊಂಡು ಬಂದಿದೆ.

ಈಗ ಮುಂದುವರೆದು 2025ನೇ ಸಾಲಿನಲ್ಲಿ ಬರೋಬ್ಬರಿ 10000 ಫ್ರೆಶರ್ಸ್ ಗಳಿಗೆ ಅವಕಾಶ ಕೊಡುವ ವಿಷಯದ ಬಗ್ಗೆ ಸ್ವತಃ ಸೌರಭ್ ಗೋವಿಲ್ ರವರು ಮಾಹಿತಿ ಹಂಚಿಕೊಂಡಿದ್ದಾರೆ. ಈಗಾಗಲೇ ಕಳೆದ ಮೂರು ತ್ರೈಮಾಸಿಕಗಳಲ್ಲಿ ತಲಾ 2,500 ರಂತೆ ಒಟ್ಟು 7,500 ಹೊಸ ಉದ್ಯೋಗಾಕಾಂಕ್ಷಿಗಳಿಗೆ ಕಂಪನಿಯ ವಿವಿಧ ವಿಭಾಗಗಳಲ್ಲಿ ಉದ್ಯೋಗವಕಾಶ ಕಲ್ಪಿಸಿಕೊಟ್ಟಿದೆ ಮತ್ತು ಖಚಿತವಾಗಿ ಈ ತ್ರೈಮಾಸಿಕದಲ್ಲಿ ಹೆಚ್ಚುವರಿ 2500 ಹುದ್ದೆಗಳಿಗೂ ನೇಮಕಾತಿ ನಡೆಯುತ್ತದೆ ಮತ್ತು ಮುಂದಿನ ವರ್ಷವೂ ಇದು ಮುಂದುವರೆಯಲಿದೆ ಎಂದು ಹೇಳಿದ್ದಾರೆ.

ಇದಲ್ಲದೆ ಇನ್ಫೋಸಿಸ್ ಸಂಸ್ಥೆಯು ಕೂಡ ಕೆಲ ದಿನಗಳ ಹಿಂದೆ 2026 ನೇ ಸಾಲಿನಲ್ಲಿ 20,000 ನೇಮಕಾತಿ ಮಾಡಿಕೊಂಡು ತರಬೇತಿ ನೀಡುವ ವಿಷಯ ಪ್ರಸ್ತಾಪಿಸಿತ್ತು ಹಾಗಾಗಿ ಇನ್ಫೋಸಿಸ್ ಮತ್ತು ಟಿಸಿಎಸ್ ನಂತಹ ಕಂಪನಿಗಳಿಗೆ ಟಕ್ಕರ್ ಕೊಡಲು ವಿಪ್ರೋ ಈ ನಿರ್ಧಾರಕ್ಕೆ ಬಂದಿದ್ದೆ ಎಂದು ಹೇಳಲಾಗುತ್ತಿದೆಯಾದರೂ ಯಾವುದೇ ಕಾರಣಕ್ಕೂ 10,000 ಗಳಿಗಿಂತ ಹೆಚ್ಚು ನೇಮಕಾತಿ ಮಾಡಿಕೊಳ್ಳುವುದಿಲ್ಲ ಎನ್ನುವುದನ್ನು ಕೂಡ ಸೌರಭ್ ರವರು ಸ್ಪಷ್ಟಪಡಿಸಿ, ನಾವು ಈಗಾಗಲೇ ಪಾಠ, ಕಲಿತಿದ್ದೇವೆ ಎನ್ನುವ ಮೂಲಕ ಇದಕ್ಕೆ ಉತ್ತರ ನೀಡಿದ್ದಾರೆ.

ಇನ್ನು IT ಸೆಕ್ಟರ್ ನಲ್ಲಿ ಉದ್ಯೋಗ ಮಾಡಬಯಸುವ ಈ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಸಕ್ತ ವರ್ಷದಿಂದ ಇಂತಹ ಉತ್ತಮ ಕಂಪನಿಗಳ ಭಾಗವಾಗುವ ಅವಕಾಶದ ಅದೃಷ್ಟ ಹೆಚ್ಚಾಗಿದೆ ಎಂದು ಹೇಳಬಹುದು. ಫ್ರೆಶರ್ಸ್ ಗಳಾಗಿ ನೇಮಕಾತಿ ಆಗುವ ಅಭ್ಯರ್ಥಿಗಳಿಗೂ ಕೂಡ ಮಾಸಿಕವಾಗಿ ಕನಿಷ್ಠ ರೂ. 30,000 ದಿಂದ ಗರಿಷ್ಠ ರೂ. 50,000 ದವರೆಗೆ ವೇತನ ಇರುತ್ತದೆ.

ಹಾಗೂ ಮುಂದಿನ ವರ್ಷಗಳಲ್ಲಿ ಅದು ಹೆಚ್ಚಾಗುವ ಸಾಧ್ಯತೆಯೂ ಕೂಡ ಇರುತ್ತದೆ. ಇದರೊಂದಿಗೆ ಇನ್ನಿತರ ಸವಲತ್ತುಗಳು ಕೂಡ ಈ ಕ್ಷೇತ್ರದ ಉದ್ಯೋಗಿಗಳಿಗೆ ಸಿಗುತ್ತದೆ. ಹಾಗಾಗಿ ಈ ಬಗ್ಗೆ ಆಸಕ್ತರು ಹೆಚ್ಚಿನ ಗಮನ ವಹಿಸಿ ಮತ್ತು ಈ ಉದ್ಯೋಗ ಮಾಹಿತಿಯನ್ನು ಹೆಚ್ಚಿನ ಜನರೊಡನೆ ಶೇರ್ ಮಾಡಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment